ETV Bharat / city

ಚಂದ್ರಯಾನ-2: ಇಸ್ರೋದಿಂದ ಹೊರಬಂತು ಮಹತ್ವದ ಸಂದೇಶ..!

author img

By

Published : Aug 14, 2019, 8:27 AM IST

ಜುಲೈ 22ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾ ನೆಲೆಯಿಂದ ಯಶಸ್ವಿಯಾಗಿ ನಭಕ್ಕೆ ಜಿಗಿದ ಇಸ್ರೋದ ಚಂದ್ರಯಾನ- 2 ನೌಕೆಯು ಇನ್ನು ಎರಡೇ ದಿನಗಳಲ್ಲಿ ಚಂದ್ರನ ಕಡೆಗೆ ತನ್ನ ಪ್ರಯಾಣ ಆರಂಭಿಸಲಿದೆ. ಉಡ್ಡಯನದ ಬಳಿಕ 6 ಬಾರಿ ವಿವಿಧ ಕಕ್ಷೆಗಳಲ್ಲಿ ಭೂಮಿಯ ಸುತ್ತ ಸುತ್ತುತ್ತಿರುವ ನೌಕೆ ಭೂ ಕಕ್ಷೆ ಮೀರಿ ಚಂದ್ರನ ಕಡೆಗೆ ಮುಖ ಮಾಡಿ ಇಂದು ನಸುಕಿನ 2.21ರ ಬಳಿಕ ಆರಂಭಿಸಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಕುರಿತು ಇಸ್ರೋ ವಿಜ್ಞಾನಿಗಳು ಮಹತ್ವದ ಸಂದೇಶವನ್ನು ದೇಶದ ಜನರೊಂದಿಗೆ ಹಂಚಿಕೊಂಡಿದ್ದಾರೆ.

ಜುಲೈ 22ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾ ನೆಲೆಯಿಂದ ಯಶಸ್ವಿಯಾಗಿ ನಭಕ್ಕೆ ಜಿಗಿದಿದ್ದ ಇಸ್ರೋದ ಚಂದ್ರಯಾನ- 2 ನೌಕೆಯು ಇನ್ನು ಎರಡೇ ದಿನಗಳಲ್ಲಿ ಚಂದ್ರನ ಕಡೆಗೆ ತನ್ನ ಪ್ರಯಾಣ ಆರಂಭಿಸಲಿದೆ. ಉಡ್ಡಯನದ ಬಳಿಕ 6 ಬಾರಿ ವಿವಿಧ ಕಕ್ಷೆಗಳಲ್ಲಿ ಭೂಮಿಯ ಸುತ್ತ ಸುತ್ತುತ್ತಿರುವ ನೌಕೆ ಭೂ ಕಕ್ಷೆ ಮೀರಿ ಚಂದ್ರನ ಕಡೆಗೆ ಮುಖ ಮಾಡಿ ಇಂದು ನಸುಕಿನ 2.21ರ ಬಳಿಕ ಆರಂಭಿಸಿದೆ.

ಉಡ್ಡಯನದ ಬಳಿಕ ಇದುವರೆಗೆ 6 ಬಾರಿ ಚಂದ್ರಯಾನ 2 ನೌಕೆಯ ಕಕ್ಷೆ ಎತ್ತರಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಅತ್ಯಂತ ಮಹತ್ವವಾದ ಕಕ್ಷೆ ಏರಿಕೆಯ ಪ್ರಕ್ರಿಯೆ ಬುಧವಾರ ಬೆಳಗಿನ ಜಾವ 2.21ಕ್ಕೆ ಯಶಸ್ವಿಯಾಗಿ ನಡೆಯಿತು. ಆಗಸ್ಟ್​ 20ರಂದು ನೌಕೆಯು ಚಂದ್ರನ ಕಕ್ಷೆಯನ್ನು ಪ್ರವೇಶಿಸಲಿದೆ.

ಅಂತಿಮವಾಗಿ ಸೆಪ್ಟೆಂಬರ್​ 7ರಂದು ನೌಕೆಯಲ್ಲಿರುವ ಲ್ಯಾಂಡರ್‌ ಮತ್ತು ರೋವರ್‌ ಚಂದ್ರನ ದಕ್ಷಿಣ ಧ್ರುವದ ನಿಗದಿತ ಪ್ರದೇಶದಲ್ಲಿ ಇಳಿಯಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.