ETV Bharat / city

ವಿಚ್ಛೇದನ ಪಡೆದ ಪತ್ನಿಗೆ ಜೀವನಾಂಶ ಕೊಡದೇ ಜೈಲಿಗೆ ಹೋಗುವ ಭೀತಿ: ಆತ್ಮಹತ್ಯೆಗೆ ಶರಣಾದ ವ್ಯಕ್ತಿ

author img

By

Published : Sep 23, 2021, 10:12 AM IST

ವಿಚ್ಛೇದನ ಪಡೆದ ಪತ್ನಿಗೆ ಜೀವನಾಂಶದ ಹಣ ನೀಡಲು ಸಾಧ್ಯವಾಗದೇ ಬೇಸತ್ತ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

Bengaluru
ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ದೊಡ್ಡಬಳ್ಳಾಪುರ: ದಾಂಪತ್ಯ ಕಲಹದಿಂದ ವಿಚ್ಚೇದನ ಪಡೆದು ಪತಿ - ಪತ್ನಿ ದೂರವಾಗಿದ್ದರು. ಇನ್ನು ದೂರವಾದ ಪತ್ನಿಗೆ ಜೀವನಾಂಶ ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ಜೀವನಾಂಶವಾಗಿ ಹಣ ಕೊಡಲಾಗದೇ ಜೈಲಿಗೆ ಹೋಗುವ ಭಯದಿಂದ ವಿಷ ಕುಡಿದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಪ್ರಿಯದರ್ಶಿನ ಲೇಔಟ್​ನಲ್ಲಿ ನಡೆದಿದೆ.

ಅಮೀರ್ (30) ಆತ್ಮಹತ್ಯೆಗೆ ಶರಣಾದ ದುರ್ದೈವಿ. ದಾಂಪತ್ಯ ಕಲಹದಿಂದ ಮೃತ ಅಮೀರ್ ಪತ್ನಿ ದೂರವಾಗಿದ್ದರು. ವಿಚ್ಛೇದನ ಪಡೆದ ಅಮೀರ್ ಪತ್ನಿಗೆ ಜೀವನಾಂಶವಾಗಿ ಒಂದು ಲಕ್ಷ ರೂ. ಕೊಡಬೇಕಾಗಿತ್ತು. ಹಣ ಹೊಂದಿಸಲಾಗದೇ ಪರಿತಪಿಸುತ್ತಿದ್ದ ಅಮೀರ್ ಕೋರ್ಟ್​ನಲ್ಲಿ ಹಣ ಕಟ್ಟಲಾಗದಿದ್ದರೆ ಜೈಲಿಗೆ ಹೋಗಬೇಕು ಎನ್ನುವ ಭಯದಿಂದ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ವಿವರ:

ಮೃತ ಅಮೀರ್ ಶಿಡ್ಲಘಟ್ಟ ಮೂಲದ ನೂರ್ ಜಾನ್ ಎಂಬಾಕೆಯನ್ನು 8 ವರ್ಷಗಳ ಹಿಂದೆ ಮದುವೆಯಾಗಿದ್ದ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇನ್ನು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಅಮೀರ್ ಸಂಸಾರ ನೋಡಿಕೊಳ್ಳುತ್ತಿದ್ದ. ಈ ನಡುವೆ ಅಮೀರ್ ಮತ್ತು ನೂರ್ ಜಾನ್ ಸಂಸಾರದಲ್ಲಿ ಕಲಹ ಶುರುವಾಗಿದೆ. ಈ ಜಗಳ ಕೋರ್ಟ್ ಮೆಟ್ಟಿಲೇರಿ ಬಳಿಕ ಇಬ್ಬರು ವಿಚ್ಚೇದನ ಪಡೆದಿದ್ದರು.

ವಿಚ್ಛೇದನದ ಸಂದರ್ಭದಲ್ಲಿ ಪತ್ನಿಗೆ 1 ಲಕ್ಷ ರೂಪಾಯಿ ಹಣವನ್ನ ಜೀವನಾಂಶವಾಗಿ ಕೊಡಬೇಕಿತ್ತು. ನಾಳೆ ಜೀವನಾಂಶದ ಹಣವನ್ನ ಕೋರ್ಟ್​ನಲ್ಲಿ ಕಟ್ಟಬೇಕಿತ್ತು. ಆದರೆ, ಹಣ ಹೊಂದಿಸಲಾಗದೇ ಸೋತು ಹೋಗಿದ್ದ ಅಮೀರ್ ಒಂದು ವೇಳೆ ಕೋರ್ಟ್​ನಲ್ಲಿ ಹಣ ಕಟ್ಟದಿದ್ದರೆ ಜೈಲಿಗೆ ಹೋಗಬೇಕು ಎನ್ನುವ ಭಯದಿಂದ ಮನೆಯ ಕೊಠಡಿಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಕುಡಿದು ಅಸ್ವಸ್ಥರಾಗಿದ್ದ ಅಮೀರ್​ನನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.