ETV Bharat / city

ರೈತನ ಜಮೀನಿಗೆ ನುಗ್ಗಿದ ಚರಂಡಿ ನೀರು: ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

author img

By

Published : Nov 14, 2019, 9:04 AM IST

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯತನ: ಜಮೀನಿಗೆ ನುಗ್ಗಿದ ಚರಂಡಿ ನೀರು

ಚರಂಡಿ ನೀರು ಜಮೀನಿನಲ್ಲಿ ಹರಿಯುತ್ತಿದ್ದು ಎರಡು ವರ್ಷದಿಂದ ಬೆಳೆ ಬಾರದೆ, ದನಗಳಿಗೆ ಮೇವೂ ಸಿಗದೆ ಸಂಕಷ್ಟ ಅನುಭವಿಸುತ್ತಿರುವುದಾಗಿ ರೈತರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ರು.

ಚಿಕ್ಕೋಡಿ: ಚರಂಡಿ ನೀರು ಜಮೀನಿಗೆ ನುಗ್ಗಿದ ಪರಿಣಾಮ ಎರಡು ವರ್ಷದಿಂದ ಬೆಳೆ ಬಾರದೆ ದನಗಳಿಗೆ ಮೇವು ಸಿಗುತ್ತಿಲ್ಲ ಎಂದು ರೈತರೊಬ್ಬರು ಸಂಕಷ್ಟ ತೋಡಿಕೊಂಡಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಜಮೀನಿಗೆ ನುಗ್ಗಿದ ಚರಂಡಿ ನೀರು

ವಾರ್ಡ್ ನಂ.9 ಪರೀಟ ಗಲ್ಲಿಯಲ್ಲಿರುವ ಚರಂಡಿ ಕಳೆದೆರಡು ವರ್ಷದಿಂದ ಸರಿಯಾದ ನಿರ್ವಹಣೆ ಇಲ್ಲದೆ ಕೊಳಚೆ ನೀರು ಪಕ್ಕದಲ್ಲಿರುವ ನಾಗೇಶ ಸುಭಾಷ್ ಎಕ್ಸಂಬಿ ಎಂಬುವವರ ಜಮೀನಿಗೆ ನುಗ್ಗುತ್ತಿದೆ. ಜಮೀನಿನಲ್ಲಿ ನಿತ್ಯ ಕೊಳಚೆ ನೀರು ಹರಿಯುತ್ತಿರುವ ಪರಿಣಾಮ ನಿರೀಕ್ಷಿಸಿದ ಬೆಳೆ ಬಾರದೆ ಜಮೀನಿನಲ್ಲಿ ಕೆಲಸವನ್ನೂ ಮಾಡಲಾಗದೆ ಸಾಕಷ್ಟು ತೊಂದರೆ ಅನುಭವಿಸುವುದಾಗಿ ರೈತ ನಾಗೇಶ್ ಹೇಳಿದ್ದಾರೆ.

ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಈ ಬಗೆಗಿನ ಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದು ದೂರಿನ ಬಗ್ಗೆ ವರದಿ ನೀಡುವಂತೆ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇಷ್ಟಾದ್ರೂ ಎಚ್ಚೆತ್ತುಕೊಳ್ಳಲಿಲ್ಲ ಎಂದು ಪುರಸಭೆ ಅಧಿಕಾರಿಗಳ ವಿರುದ್ಧ ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಚರಂಡಿ ಪುನರ್ ನಿರ್ಮಾಣ ಇಲ್ಲವೇ ಚರಂಡಿಯನ್ನೇ ತೆರವು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Intro:ಪುರಸಭೆ ನಿರ್ಲಕ್ಷ್ಯ ಜಮೀನಿನಲ್ಲಿ‌ ನುಗ್ಗಿದ ನೀರು
Body:
ಚಿಕ್ಕೋಡಿ :

ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಚರಂಡಿ ನೀರು ಜಮೀನಿನಲ್ಲಿ ನುಗ್ಗಿದ ಪರಿಣಾಮ ಕಳೆದ ಎರಡು ವರ್ಷದಿಂದ ಬೆಳೆ ಬಾರದೆ ದನಗಳಿಗೆ ಮೇವು ಬೆಳೆಯದೆ ರೈತ ಸಂಕಷ್ಟ ಅನುಭವಿಸುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ

ಸಂಕೇಶ್ವರ ಪಟ್ಟಣದ ವಾರ್ಡ ನಂ.9ರ ಪರೀಟ ಗಲ್ಲಿಯಲ್ಲಿರುವ ಈ ಚರಂಡಿಯು ಕಳೆದ ಎರಡು ವರ್ಷದಿಂದ ಕೆಟ್ಟು ಹೋಗಿದ್ದು, ಪರಿಣಾಮ ಚರಂಡಿ ನೀರು ಪಕ್ಕದಲ್ಲಿರುವ ನಾಗೇಶ ಸುಭಾಷ್ ಎಕ್ಸಂಬಿ ಎಂಬುವವರ ಜಮೀನಿಗೆ ನುಗ್ಗುತ್ತಿದೆ. ಚರಂಡಿ ನೀರು ಜಮೀನಿನಲ್ಲಿ ನಿತ್ಯ ಹರಿಯುತ್ತಿರುವುದ್ದರಿಂದ ಬೆಳೆ ಬಾರದೆ ಜಮೀನಿನಲ್ಲಿ ಕೆಲಸ ಮಾಡಲು ಬಾರದೆ ರೈತ ನಾಗೇಶ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾನೆ.

ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಪತ್ರ ಬರೆದರು ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ರೈತ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ . ರೈತನ ಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದು ದೂರಿನ ಬಗ್ಗೆ ವರದಿ ನೀಡುವಂತೆ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇಷ್ಟಾದರೂ ಎಚ್ಚತ್ತುಕೊಳ್ಳದ ಪುರಸಭೆ ಅಧಿಕಾರಿಗಳ ಬಗ್ಗೆ ರೈತ ಅಕ್ರೋಶ ವ್ಯಕ್ತ ಪಡೆಸಿದ್ದು ಕೂಡಲೇ ಚರಂಡಿ ಪುನರ್ನಿರ್ಮಾಣ ಮಾಡಬೇಕು ಇಲ್ಲವೇ ನಮ್ಮ ಜಮೀನಿನ ಪಕ್ಕದ ಚರಂಡಿಯನ್ನೆ ತೆರವು ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾನೆ .

ಬೈಟ್ : ನಾಗೇಶ ಎಕ್ಸಂಬಿ( ರೈತ)

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.