ETV Bharat / city

ಕೇಂದ್ರದ ಮಾಜಿ ಸಚಿವ ಆರ್.ಎಲ್ ಜಾಲಪ್ಪ ನಿಧನಕ್ಕೆ ಪರಿಷತ್‌ನಲ್ಲಿ ಸಂತಾಪ ; ಹಿಂದುಳಿದ ವರ್ಗಗಳ ನಾಯಕನ ಸಾಧನೆ ಸ್ಮರಣೆ

author img

By

Published : Dec 20, 2021, 12:28 PM IST

Council session; Condolences for death of former central Minister R.L. Jalappa
ಕೇಂದ್ರ ಮಾಜಿ ಸಚಿವ ಆರ್.ಎಲ್ ಜಾಲಪ್ಪ ನಿಧನಕ್ಕೆ ಪರಿಷತ್‌ನಲ್ಲಿ ಶ್ರದ್ದಾಂಜಳಿ; ಹಿಂದುಳಿದ ವರ್ಗಗಳ ನಾಯಕನ ಸಾಧನೆ ಸ್ಮರಣೆ

ಇತ್ತೀಚೆಗೆ ನಿಧನರಾದ ಕೇಂದ್ರದ ಮಾಜಿ ಸಚಿವ ಆರ್.ಎಲ್‌ ಜಾಲಪ್ಪ ಅವರಿಗೆ ವಿಧಾನ ಪರಿಷತ್‌ನಲ್ಲಿ ಸಂತಾಪ ಸಲ್ಲಿಸಲಾಯಿತು. ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್ ಸಂತಾಪ ಸೂಚಕದ ಮೇಲೆ ಮಾತನಾಡಿ, ಆರ್‌.ಎಲ್‌ ಜಾಲಪ್ಪ ಅವರ ಕೊಡುಗೆಯನ್ನು ಸ್ಮರಿಸಿದರು..

ಬೆಳಗಾವಿ : ರಾಜ್ಯದ ಹಿರಿಯ ರಾಜಕಾರಣಿ, ಮಾಜಿ ಸಚಿವ ಆರ್.ಎಲ್ ಜಾಲಪ್ಪ ನಿಧನಕ್ಕೆ ವಿಧಾನ ಪರಿಷತ್‌ನಲ್ಲಿಂದು ಸಂತಾಪ ಸೂಚಿಸಲಾಯಿತು. ರಾಜಕೀಯ, ಸಹಕಾರಿ ಕ್ಷೇತ್ರದಲ್ಲಿ ಆರ್ ಎಲ್ ಜಾಲಪ್ಪ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.

ಕೇಂದ್ರದ ಮಾಜಿ ಸಚಿವ ಆರ್.ಎಲ್ ಜಾಲಪ್ಪ ನಿಧನಕ್ಕೆ ಪರಿಷತ್‌ನಲ್ಲಿ ಸಂತಾಪ

ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಜಾಲಪ್ಪ ನಿಧನಕ್ಕೆ ಸಂತಾಪ ಸೂಚಿಸಿ ಸಭಾಪತಿ ಬಸವರಾಜ ಹೊರಟ್ಟಿ ನಿಲುವಳಿ ಸೂಚನೆ ಮಂಡಿಸಿದರು. ವಿಧಾನ ಪರಿಷತ್ ಸದಸ್ಯರಾಗಿ ರಾಜಕಾರಣ ಆರಂಭಿಸಿದ ಆರ್‌ ಎಲ್‌ ಜಾಲಪ್ಪ, ವಿಧಾನಸಭೆ ಸದಸ್ಯರಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದರು.

ಸಹಕಾರ, ಗೃಹ, ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಾಲಮನ್ನಾ ಯೋಜನೆಯನ್ನು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದಿದ್ದರು. ನಾಲ್ಕು ಬಾರಿ ಲೋಕಸಭೆಗೂ ಆಯ್ಕೆಯಾಗಿದ್ದರು, ಶಿಕ್ಷಣ ಸಂಸ್ಥೆ ಆರಂಭಿಸಿ ಸೇವೆ ಸಲ್ಲಿಸಿದ್ದರು. ದೇವೇಗೌಡರ ಸಂಪುಟದಲ್ಲಿ ಕೇಂದ್ರ ಜವಳಿ ಸಚಿವರಾಗಿದ್ದರು, ಕಣ್ಣುದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸ್ಮರಿಸಿದರು.

ಸಂತಾಪ ಸೂಚನೆಗೆ ಕೋಟಾ ಶ್ರೀನಿವಾಸ ಪೂಜಾರಿ ಸಹಮತ ವ್ಯಕ್ತಪಡಿಸಿದರು. ಜಾಲಪ್ಪ ರಾಜಕಾರಣದ ಚೌಕಟ್ಟಿನಲ್ಲಿ ಬೆಳೆದವರು, ಸಹಕಾರಿ ಕ್ಷೇತ್ರದ ಪಿತಾಮಹ ಎನ್ನುವ ರೀತಿ ಕೆಲಸ ಮಾಡಿದ್ದರು. ಹಿಂದುಳಿದ ವರ್ಗದವರ ಬಗ್ಗೆ ಅಪಾರ ಕಾಳಜಿ ಇತ್ತು. ಮೂರು ಸದನದಲ್ಲಿ ಕೆಲಸ ಮಾಡಿದ ರಾಜಕಾರಣಿ, ಅವರ ಅಗಲಿಕೆ ರಾಜ್ಯಕ್ಕೆ ಆಗಿರುವ ಬಹಳ ದೊಡ್ಡ ನಷ್ಟ ಎಂದರು.

ಪ್ರತಿಪಕ್ಷ ನಾಯಕ ಎಸ್.ಆರ್‌.ಪಾಟೀಲ್ ಮಾತನಾಡಿ, ಜಾಲಪ್ಪ ಶಿಕ್ಷಣ ಪ್ರೇಮಿಯಾಗಿದ್ದರು. ನರ್ಸಿಂಗ್ ಟು ಮೆಡಿಕಲ್ ಆರಂಭಿಸಿ ಶಿಕ್ಷಣ ಸಂಸ್ಥೆಗಳನ್ನು ಬಹಳ ವ್ಯವಸ್ಥಿತವಾಗಿ ಆರಂಭಿಸಿ ಬಡವರಿಗೂ ಅನುಕೂಲ ಮಾಡಿ ಕೊಟ್ಟಿದ್ದರು. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಅವರ ನಿಧನ ರಾಜ್ಯದ ಶ್ರೇಷ್ಠ ಮುತ್ಸದ್ದಿ ಪ್ರಾಮಾಣಿಕ‌ ರಾಜಕಾರಣಿಯನ್ನು ಕಳೆದುಕೊಂಡಿದೆ ಎಂದರು. ನಂತರ ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನವನ್ನು ಆಚರಿಸಲಾಯಿತು.

ಪ್ರತಿಪಕ್ಷ ನಾಯಕ ಎಸ್.ಆರ್‌.ಪಾಟೀಲ್ ಮಾತನಾಡಿದರು

ಇದನ್ನೂ ಓದಿ: ಹೊಸ ವ್ಯವಸ್ಥೆ ಬರುತ್ತೆ.. ಪ್ರಾಮಾಣಿಕ ನಿರ್ಣಯ ತೆಗೆದುಕೊಳ್ಳುವವರಾಗಬೇಕು, ಬಾಲಂಗೋಚಿಗಳಿಗೆ ಕೊಟ್ಟರೆ ಕಷ್ಟ.. ಯತ್ನಾಳ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.