ETV Bharat / business

ಪಾಸ್​ಪೋರ್ಟ್​ಗಾಗಿ ಪರದಾಡುವ ಅಗತ್ಯವಿಲ್ಲ: ಚಿಪ್​ಸಹಿತ E- Passport ಶೀಘ್ರ ಲಭ್ಯ

author img

By

Published : Jul 26, 2019, 10:52 AM IST

ಸಾಂದರ್ಭಿಕ ಚಿತ್ರ

ಇ-ಪಾಸ್‌ಪೋರ್ಟ್‌ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಕೆಲಸ ಮಾಡುತ್ತಿದ್ದು, ಮೊದಲ ಹಂತದಲ್ಲಿ 22 ಮಿಲಿಯನ್ (2.2 ಕೋಟಿ) ಪಾಸ್​ಪೋರ್ಟ್​ ವಿತರಿಸುವ ಗುರಿ ಇರಿಸಿಕೊಂಡಿದೆ. ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುವ ಚಿಪ್ ಸಹಿತ ಇ- ಪಾಸ್​ಪೋರ್ಟ್​ಗಳನ್ನು ನಾಗರಿಕರು ಪಡೆಯಬಹುದಾಗಿದೆ. ಅರ್ಜಿದಾರರ ವೈಯಕ್ತಿಕ ವಿವರಗಳನ್ನು ಡಿಜಿಟಲ್ ಸಹಿ ಮಾಡಿದ ಚಿಪ್‌ನಲ್ಲಿ ಸಂಗ್ರಹಿಸಲಾಗುವುದು. ಇದು ಪ್ರಸ್ತುತ ಭೌತಿಕ ಪಾಸ್‌ಪೋರ್ಟ್​ನ ಕಿರುಪುಸ್ತಕದ ಬದಲಿ ರೂಪವಾಗಿದೆ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಮಾಹಿತಿ ನೀಡಿದ್ದಾರೆ.

ನವದೆಹಲಿ: ಪಾಸ್​ಪೋರ್ಟ್​ ಪಡೆಯಲು ಹೇರಿದ್ದ ಕಠಿಣ ಷರತ್ತುಗಳನ್ನು ಸಡಿಲಗೊಳಿಸಿದ ವಿದೇಶಾಂಗ ಇಲಾಖೆಯು, ಇದನ್ನು ಇನ್ನಷ್ಟು ಸರಳೀಕರಣಗೊಳಿಸಿ ವಿತರಣೆ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ.

ರಾಜ್ಯಸಭೆಯ ಪ್ರಶ್ನೋತ್ತರ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಅವರು, ಇ-ಪಾಸ್‌ಪೋರ್ಟ್‌ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಕೆಲಸ ಮಾಡುತ್ತಿದ್ದು, ಮೊದಲ ಹಂತದಲ್ಲಿ 22 ಮಿಲಿಯನ್ (2.2 ಕೋಟಿ) ಪಾಸ್​ಪೋರ್ಟ್​ ವಿತರಿಸುವ ಗುರಿ ಇರಿಸಿಕೊಂಡಿದೆ ಎಂದರು.

ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುವ ಚಿಪ್ ಸಹಿತ ಇ- ಪಾಸ್​ಪೋರ್ಟ್​ಗಳನ್ನು ನಾಗರಿಕರು ಪಡೆಯಬಹುದಾಗಿದೆ. ಅರ್ಜಿದಾರರ ವೈಯಕ್ತಿಕ ವಿವರಗಳನ್ನು ಡಿಜಿಟಲ್ ಸಹಿ ಮಾಡಿದ ಚಿಪ್‌ನಲ್ಲಿ ಸಂಗ್ರಹಿಸಲಾಗುವುದು. ಇದು ಪ್ರಸ್ತುತ ಭೌತಿಕ ಪಾಸ್‌ಪೋರ್ಟ್​ನ ಕಿರುಪುಸ್ತಕದ ಬದಲಿ ರೂಪವಾಗಿದೆ ಎಂದು ಅವರು ವಿವರಿಸಿದರು.

ಒಂದು ವೇಳೆ ಯಾರಾದರೂ ಚಿಪ್ ಅನ್ನು ಹಾಳುಮಾಡಿದರೆ, ಪಾಸ್​ಪೋರ್ಟ್​ದಾರರನ್ನು ದೃಢೀಕರಣ ಸಿಸ್ಟಮ್​ ಮೂಲಕ ಕಾರ್ಡ್​ದಾರರನ್ನು ಪತ್ತೆಹಚ್ಚಬಹುದಾಗಿದೆ. ಉದ್ದೇಶಿತ ಯೋಜನೆಯು ಟೆಂಡರ್​ನ ಕೊನೆಯ ಹಂತದಲ್ಲಿದೆ. ಇದು ಅಂತಾರಾಷ್ಟ್ರೀಯ ಮತ್ತು ದೇಶಿಯ ಎಂಬ ಎರಡು ಅಂಶಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಮೊದಲ ಹಂತದಲ್ಲಿ ಸುಮಾರು 22 ಮಿಲಿಯನ್ ಇನ್‌ಲೇಸ್ ಎಲೆಕ್ಟ್ರಾನಿಕ್ ಪಾಸ್‌ಪೋರ್ಟ್‌ಗಳನ್ನು ವಿತರಿಸಲು ಬಯಸಿದ್ದೇವೆ. ನಾಸಿಕ್​ನಲ್ಲಿರುವ ಇಂಡಿಯಾ ಸೆಕ್ಯುರಿಟಿ ಪ್ರೆಸ್​ಗೆ (ಐಎಸ್‌ಪಿ) ಇ-ಪಾಸ್‌ಪೋರ್ಟ್‌ ತಯಾರಿಕೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಸಚಿವ ಜೈಶಂಕರ್ ವಿವರಿಸಿದರು.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.