ETV Bharat / briefs

ಪ್ಲೇ ಆಫ್​​​ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ... ಚೆನ್ನೈನಿಂದ ಹೈದರಾಬಾದ್​ಗೆ ಶಿಫ್ಟ್​​​ ಆದ ಫೈನಲ್​​​ ಪಂದ್ಯ

author img

By

Published : Apr 22, 2019, 7:04 PM IST

ipl

​ ಎಂಎ ಚಿದಂಬರಂ ಸ್ಟೇಡಿಯಂ​ನಲ್ಲಿರುವ I, J ಮತ್ತು K ಸ್ಟ್ಯಾಂಡ್​ಗಳ ತೆರವಿಗೆ ತಮಿಳುನಾಡು ಕ್ರಿಕೆಟ್​ ಅಸೋಸಿಯೇಷನ್​ ಆಡಳಿತ ಮಂಡಳಿ ಅನುಮತಿ ನೀಡದ ಹಿನ್ನೆಲೆಯಲ್ಲಿ ಬಿಸಿಸಿಐ ಫೈನಲ್​ ಪಂದ್ಯವನ್ನು ಚೆಪಾಕ್​ನಿಂದ ಹೈದರಾಬಾದ್​ಗೆ​ ವರ್ಗಾಯಿಸಿದೆ.

ಹೈದರಾಬಾದ್​: ತಮಿಳುನಾಡು ಕ್ರಿಕೆಟ್​ ಅಸೋಸಿಯೇಷನ್​ನ ಅಡಳಿತ ಮಂಡಳಿ ಎಂಎ ಚಿದಂಬರಂ ಸ್ಟೇಡಿಯಂ​ನಲ್ಲಿನ I, J ಮತ್ತು K ಸ್ಟ್ಯಾಂಡ್​ಗಳ ತೆರವಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಬಿಸಿಸಿಐ ಫೈನಲ್​ ಪಂದ್ಯವನ್ನು ಚೆನ್ನೈನಿಂದ ಹೈದರಾಬಾದಿನ ಉಪ್ಪಾಳದಲ್ಲಿರುವ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂಗೆ ಬದಲಾಯಿಸಿದೆ.

ಮೇ 12 ರಂದು ಪೈನಲ್​ ಪಂದ್ಯ ನಡೆಯಲಿದೆ. ಮೊದಲ 2 ಸ್ಥಾನ ಪಡೆಯುವ ತಂಡಗಳಿಗೆ ನಡೆಯುವ ಕ್ವಾಲಿಫೈಯರ್​ ಪಂದ್ಯ ಮಾತ್ರ ಚೆನ್ನೈನಲ್ಲೇ ನಡೆಯಲಿದೆ.

  • The final of the 12th edition of the Indian Premier League will be played at the Rajiv Gandhi International Stadium in Hyderabad on May 12. Chennai will host Qualifier 1 while Visakhapatnam will host the Eliminator and Qualifier 2. #IPL pic.twitter.com/i9S9LoiLEN

    — ANI (@ANI) April 22, 2019 " class="align-text-top noRightClick twitterSection" data=" ">

3 ಮತ್ತು4 ಸ್ಥಾನ ಪಡೆಯುವ ತಂಡಗಳಿಗೆ ನಡೆಯುವ ಎಲಿಮಿನೇಟರ್​ ಪಂದ್ಯಗಳು ವಿಶಾಖಪಟ್ಟಣದಲ್ಲಿ ನಡೆಯಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೂ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ತಂಡಕ್ಕೂ ನಡೆಯುವ ಎರಡನೇ ​ಕ್ವಾಲಿಫೈಯರ್ ಪಂದ್ಯ ವಿಶಾಖಪಟ್ಟಣದಲ್ಲೇ ನಡೆಯಲಿದೆ.

ಪ್ಲೇ ಆಫ್​ ವೇಳಾಪಟ್ಟಿ:

ಮೇ 07- ಕ್ವಾಲಿಫೈಯರ್​ 1- ಎಂಎ ಚಿದಂಬರಂ ಸ್ಟೇಡಿಯಂ -ಚೆನ್ನೈ
ಮೇ 08- ಎಲಿಮಿನೇಟರ್​ - ವಿಶಾಖಪಟ್ಟಣ
ಮೇ 10- ಕ್ವಾಲಿಫೈಯರ್​ 2- ವಿಶಾಖಪಟ್ಟಣ
ಮೇ 12 - ಫೈನಲ್​

Intro:Body:



ಪ್ಲೇ ಆಫ್​ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ... ಹೈದರಾಬಾದ್​ನಲ್ಲಿ ಫೈನಲ್​ ಫಿಕ್ಸ್​



ಹೈದರಾಬಾದ್​: ತಮಿಳು ನಾಡು ಕ್ರಿಕೆಟ್​ ಅಸೋಸಿಯೇಷನ್​ ಎಂಎ ಚಿದಂಬರಂ ಸ್ಟೇಡಿಯಮ್​ನಲ್ಲಿರುವ I,J ಮತ್ತು K ಸ್ಟ್ಯಾಂಡ್​ಗಳ ತೆರವಿಗೆ ಕಮಿಟಿ ಆಫ್​ ಅಡ್ಮಿಸ್ಟ್ರೇಷನ್​ನಿಂದ  ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಬಿಸಿಸಿಐ ಫೈನಲ್​ ಪಂದ್ಯವನ್ನು ಚೆನ್ನೈನ ಚೆಪಾಕ್​ನಿಂದ ಹೈದರಾಬಾದಿನ ಉಪ್ಪಾಳದಲ್ಲಿರುವ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂಗೆ ಬದಲಾಯಿಸಿದೆ. ( ಚಿದಂಬರಂ ಸ್ಟೇಡಿಯಮ್​ನಲ್ಲಿರುವ ಅಕ್ರಮ ನಿರ್ಮಾಣದ ಆರೋಪದ ಮೇಲೆ ಚೆನ್ನೈ ಹೈಕೋರ್ಟ್​  I,J ಮತ್ತು K ಸ್ಟ್ಯಾಂಡ್​ಗಳನ್ನು ಮುಚ್ಚಿಸಿದೆ. 2011 ರಿಂದ ಇಲ್ಲಿ ಯಾವುದೇ ಪಂದ್ಯಕ್ಕೂ ಅನುಮತಿ ದೊರೆತಿಲ್ಲ)



ಮೇ12 ರಂದು ಪೈನಲ್​ ಪಂದ್ಯ ನಡೆಯಲಿದೆ. ಮೊದಲ 2 ಸ್ಥಾನ ಪಡೆಯುವ ತಂಡಗಳಿಗೆ ನಡೆಯುವ ಕ್ವಾಲಿಫೈಯರ್​ ಪಂದ್ಯ ಪಂದ್ಯ ಮಾತ್ರ ಚೆನ್ನೈನಲ್ಲೇ ನಡೆಯಲಿದೆ.  

  

3 ಮತ್ತು4 ಸ್ಥಾನ ಪಡೆಯುವ ತಂಡಗಳಿಗೆ ನಡೆಯುವ ಎಲಿಮಿನೇಟರ್​ ಪಂದ್ಯ ವಿಶಾಖ ಪಟ್ಟಣದಲ್ಲಿ ನಡೆಯಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೂ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ತಂಡಕ್ಕೂ ನಡೆಯುವ ಎರಡನೇ ​ಕ್ವಾಲಿಫೈಯರ್ ಪಂದ್ಯ ವಿಶಾಖಪಟ್ಟಣದಲ್ಲೇ ನಡೆಯಲಿದೆ.



ವೇಳಾಪಟ್ಟಿ:



ಮೇ 07- ಕ್ವಾಲಿಫೈಯರ್​ 1- ಎಂಎ ಚಿದಂಬರಂ ಸ್ಟೇಡಿಯಂ -ಚೆನ್ನೈ

 ಮೇ 08- ಎಲಿಮಿನೇಟರ್​ - ವಿಶಾಖಪಟ್ಟಣ 

ಮೇ 10- ಕ್ವಾಲಿಫೈಯರ್​ 2- ವಿಶಾಖಪಟ್ಟಣ

ಮೇ12 - ಫೈನಲ್​ 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.