ETV Bharat / bharat

ಬಹಿರ್ದೆಸೆಗೆ ತೆರಳಿ ಹಳಿ ಮೇಲೆ ಹೆಡ್‌ಫೋನ್‌ ಹಾಕಿಕೊಂಡು ಕುಳಿತ ಯುವಕ: ರೈಲು ಗುದ್ದಿ ಸಾವು

author img

By

Published : Sep 27, 2022, 9:13 PM IST

Updated : Sep 27, 2022, 9:35 PM IST

youth-wearing-earphones-hit-by-train-in-balod
ಬಹಿರ್ದೆಸೆಗೆ ತೆರಳಿ ಹಳಿ ಮೇಲೆ ಹೆಡ್‌ಫೋನ್‌ ಹಾಕಿಕೊಂಡ ಕುಳಿತ ಯುವಕ: ರೈಲು ಗುದ್ದಿ ಸಾವು

ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ಯುವಕ ಹೆಡ್‌ಫೋನ್‌ ಹಾಕಿಕೊಂಡು ಹಳಿ ಮೇಲೆ ಕುಳಿತಾಗ ರೈಲು ಗುದ್ದಿ ಸಾವು ಮೃತಪಟ್ಟಿರುವ ಘಟನೆ ಛತ್ತೀಸ್​ಗಢದಲ್ಲಿ ಜರುಗಿದೆ.

ಬಲೋದ್ (ಛತ್ತೀಸ್​ಗಢ): ಕಿವಿಗೆ ಹೆಡ್‌ಫೋನ್‌ ಹಾಕಿಕೊಂಡು ರೈಲು ಹಳಿಗಳ ಮೇಲೆ ಕುಳಿತು ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಛತ್ತೀಸ್​ಗಢ ಬಲೋದ್ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಯೋಗೇಂದ್ರ ಜೋಶಿ ಎಂದು ಗುರುತಿಸಲಾಗಿದೆ.

ಇಲ್ಲಿನ ಗುಂಡರದೇಹಿ ಪೊಲೀಸ್ ಠಾಣಾ ವ್ಯಾಪ್ತಿಯ ರಂಗಕಠೇರ ಗ್ರಾಮದ ನಿವಾಸಿಯಾದ ಯೋಗೇಂದ್ರ 12ನೇ ತರಗತಿಯಲ್ಲಿ ಓದುತ್ತಿದ್ದವರು. ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ಯೋಗೇಂದ್ರ, ಇದೇ ಸಮಯದಲ್ಲಿ ಕಿವಿಗೆ ಇಯರ್‌ಫೋನ್‌ ಹಾಕಿಕೊಂಡು ರೈಲ್ವೆ ಹಳಿ ಮೇಲೆ ಕುಳಿತು ಫ್ರೀ ಫೈರ್ ಗೇಮ್​ ಆಡುತ್ತಿದ್ದರು. ಆದರೆ, ಇದೇ ಮೊಬೈಲ್​ ಗೇಮ್​ ಹುಚ್ಚು ಆತನ ಜೀವವನ್ನೇ ಪಡೆದಿದೆ.

ಬಹಿರ್ದೆಸೆಗೆ ತೆರಳಿ ಹಳಿ ಮೇಲೆ ಹೆಡ್‌ಫೋನ್‌ ಹಾಕಿಕೊಂಡ ಕುಳಿತ ಯುವಕ: ರೈಲು ಗುದ್ದಿ ಸಾವು

ರೈಲ್ವೆ ಹಳಿ ಮೇಲೆ ಹೆಡ್‌ಫೋನ್‌ ಹಾಕಿಕೊಂಡು ಕುಳಿತಿದ್ದರಿಂದ ರೈಲು ಬರುವುದೇ ಯೋಗೇಂದ್ರಗೆ ಗೊತ್ತಾಗಿಲ್ಲ. ರೈಲಿನ ಹಾರ್ನ್ ಕೊಡಲಾಗಿದೆ. ಆದರೆ, ಇಷ್ಟರಲ್ಲೇ ರೈಲು ಬಹಳ ಹತ್ತಿರ ಬಂದು ಬಿಟ್ಟಿದ್ದು ಹಳಿಯಿಂದ ಪಾರಾಗಲು ಸಹ ಸಾಧ್ಯವಾಗಿಲ್ಲ. ಕೊನೆಗೆ ಆತನಿಗೆ ಡಿಕ್ಕಿ ಹೊಡೆದು ದೇಹದ ಮೇಲೆ ರೈಲು ಹಾದು ಹೋಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮನೆಯಲ್ಲಿ ಕಳ್ಳತನದ ಪ್ರಕರಣಗಳೂ ಮುನ್ನೆಲೆ: ಇಡೀ ಘಟನೆಗೆ ಸಂಬಂಧಿಸಿದಂತೆ ಬಲೋದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಮಾತನಾಡಿದ್ದು, ಆನ್‌ಲೈನ್ ಗೇಮ್​ಗಳ ದುರಂತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಮಕ್ಕಳನ್ನು ಆನ್‌ಲೈನ್ ಗೇಮಿಂಗ್ ಚಟದಿಂದ ದೂರವಿಡಲು ಹೊರಾಂಗಣ ಆಟಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕೆಂದು ಪೋಷಕರಿಗೆ ಮನವಿ ಮಾಡಿದ್ದಾರೆ.

ಅಲ್ಲದೇ, ಫ್ರೀ ಫೈರ್ ಗೇಮ್‌ಗೆ ಸಂಬಂಧಿಸಿದಂತೆ ಕಳ್ಳತನದಂತಹ ಘಟನೆಗಳೂ ಮುನ್ನೆಲೆಗೆ ಬರುತ್ತಿವೆ. ಏಕೆಂದರೆ ಗೇಮಿಂಗ್​ ಐಡಿ ಮತ್ತು ಹಂತವನ್ನು ಹೆಚ್ಚಿಸಲು ಹಣ ತುಂಬಬೇಕಾಗುತ್ತದೆ. ಇದರಿಂದಾಗಿ ಮಕ್ಕಳು ತಮ್ಮ ಮನೆಗಳಲ್ಲಿ ಕಳ್ಳತನ ಮಾಡಲು ಮುಂದಾಗುತ್ತಾರೆ. ಇಂತಹ ಆನ್​ಲೈನ್ ಗೇಮ್​ಗಳತ್ತ ಪೋಷಕರು ಗಮನ ಹರಿಸಬೇಕೆಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ರೀಲ್ಸ್​ ಮಾಡುವ ವಿಚಾರವಾಗಿ ಗಲಾಟೆ: ಪತ್ನಿಯನ್ನೇ ಕೊಂದ ಪತಿ

Last Updated :Sep 27, 2022, 9:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.