ETV Bharat / bharat

ರೀಲ್ಸ್​ ಮಾಡುವ ವಿಚಾರವಾಗಿ ಗಲಾಟೆ: ಪತ್ನಿಯನ್ನೇ ಕೊಂದ ಪತಿ

author img

By

Published : Sep 27, 2022, 6:09 PM IST

ಬಿಹಾರದ ಭೋಜ್‌ಪುರದಲ್ಲಿ ಪತಿ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಇವರಿಬ್ಬರು ಕಳೆದ 10 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ರೀಲ್ಸ್​ ಮಾಡುತ್ತಿದ್ದರಿಂದ ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು, ಅದು ಕೊಲೆಯಲ್ಲಿ ಅಂತ್ಯವಾಗಿದೆ.

ಪತ್ನಿಯನ್ನೇ ಕೊಂದ ಪತಿ
ಪತ್ನಿಯನ್ನೇ ಕೊಂದ ಪತಿ

ಅರ್ರಾ (ಬಿಹಾರ): ಕೌಟುಂಬಿಕ ಕಲಹ ಹಿನ್ನೆಲೆ ಪತಿಯೋರ್ವ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಬಿಹಾರದ ಭೋಜ್‌ಪುರದ ನಾವಡ ಪೊಲೀಸ್ ಠಾಣೆ ವ್ಯಾಪ್ತಿಯ ಅನಿತ್ ಬಡಾವಣೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಜಗದೀಶ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆಯರ್ ನಿವಾಸಿ ಅಣ್ಣು ಖಾತೂನ್ ಎಂದು ಗುರುತಿಸಲಾಗಿದೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಮೃತ ಮಹಿಳೆ ರೀಲ್ಸ್ ಮಾಡುತ್ತಿದ್ದು, ಇದು ಆಕೆಯ ಪತಿಗೆ ಇಷ್ಟವಿರಲಿಲ್ಲ.

ಪತ್ನಿಯನ್ನೇ ಕೊಂದ ಪತಿ

ರೀಲ್ಸ್ ಮಾಡುವ ವಿಚಾರವಾಗಿ ಗಲಾಟೆ: ರೀಲ್ಸ್​ ಮಾಡುವ ವಿಚಾರವಾಗಿ ಅನಿಲ್ ಹಾಗೂ ಆತನ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರವೂ ಇದೇ ವಿಚಾರವಾಗಿ ಜಗಳವಾಗಿದೆ. ಅನಿಲ್​ ರೀಲ್ಸ್​ ಮಾಡುವ ಆ್ಯಪ್​ ಡಿಲೀಟ್ ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಆದ್ರೆ ಆಕೆ ಇದಕ್ಕೆ ನಿರಾಕರಿಸಿದ್ದಾಳೆ. ಇದಾದ ನಂತರ ಕೋಪಗೊಂಡ ಅನಿಲ್ ಕೋಪದಿಂದ ಆಕೆಯ ಕತ್ತು ಸೀಳಿದ್ದಾನೆ.

ಪ್ರೇಮ ವಿವಾಹವಾಗಿದ್ದ ದಂಪತಿ: ಹತ್ಯೆ ಬಳಿಕ ರಾತ್ರಿಯಿಡೀ ಆಕೆಯ ಶವದ ಬಳಿಯೇ ಕುಳಿತಿದ್ದಾನೆ. ಬೆಳಗ್ಗೆ ಘಟನೆ ಬಗ್ಗೆ ನಾವಡ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿದೆ. ಬಳಿಕ ನಾವಡ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತ ದೇಹವನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ. ಜಗದೀಶ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಆಯರ್‌ ನಿವಾಸಿ ಅಣ್ಣು ಖಾತೂನ್‌ ಅವರು ಐತ್‌ನ ಶಿವಶಂಕರ್‌ ಚೌಧರಿ ಅವರ ಪುತ್ರ ಅನಿಲ್‌ ಚೌಧರಿ ಅವರನ್ನು 10 ವರ್ಷಗಳ ಹಿಂದೆ ವಿವಾಹವಾಗಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರ ನಡುವೆ ಪ್ರೇಮ ವಿವಾಹವಾಗಿತ್ತು.

ರೀಲ್ಸ್​ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಮತ್ತು ಸೊಸೆ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎಂದು ಪತ್ನಿಯನ್ನು ಕೊಂದ ಅನಿಲ್ ಚೌಧರಿ ತಂದೆ ಶಿವಶಂಕರ್ ಚೌಧರಿ ತಿಳಿಸಿದ್ದಾರೆ. ಸೊಸೆ ಅಣ್ಣು ಮೊಬೈಲ್​ನಲ್ಲಿ ವಿಡಿಯೋ ಮಾಡಿ ಶೇರ್ ಮಾಡುತ್ತಿದ್ದಳು. ಇದಕ್ಕೆ ಅನಿಲ್ ಆಕ್ಷೇಪ ವ್ಯಕ್ತಪಡಿಸಿದ್ದು, ರೀಲ್ಸ್​ ಮಾಡಬೇಡ ಎಂದು ಪತ್ನಿಗೆ ಹಲವು ಬಾರಿ ಮನವಿ ಮಾಡಿದ್ದ ಎಂದಿದ್ದಾರೆ.

ಆರೋಪಿ ತಂದೆ ಹೇಳಿದ್ದೇನು?: ಭಾನುವಾರ ರಾತ್ರಿ ಮಗ ಮತ್ತು ಸೊಸೆ ಮನೆಯ ಎರಡನೇ ಮಹಡಿಯಲ್ಲಿರುವ ತಮ್ಮ ಕೋಣೆಯಲ್ಲಿ ಮಲಗಲು ಹೋಗಿದ್ದರು. ನಾವು ಕೆಳಗಿನ ಕೋಣೆಯಲ್ಲಿ ಮಲಗಿದ್ದೆವು. ಸೋಮವಾರ ಬೆಳಗ್ಗೆ ನನ್ನ ಹೆಂಡತಿ ಎರಡನೇ ಮಹಡಿ ಸ್ವಚ್ಛಗೊಳಿಸಲು ಹೋದಾಗ, ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಹಲವಾರು ಬಾರಿ ಕೂಗಿದರೂ, ಯಾರೂ ಬಾಗಿಲು ತೆಗೆಯಲಿಲ್ಲ. ಆಗ ಸೊಸೆ ಸತ್ತು ಬಿದ್ದದ್ದಳು, ಪಕ್ಕದಲ್ಲಿ ಮಗ ಕುಳಿತಿದ್ದ. ನಂತರ ನಾವು ಪೊಲೀಸರಿಗೆ ವಿಷಯ ತಿಳಿಸಿದೆವು ಎಂದು ಶಿವಶಂಕರ್ ಚೌಧರಿ ಹೇಳುತ್ತಾರೆ.

ಇದನ್ನೂ ಓದಿ: ಮದ್ವೆಯಾಗಿ ಎರಡೇ ವರ್ಷ, ಬಂಗಾರ-ದುಡ್ಡಿನ ದಾಹಕ್ಕೆ ಪತ್ನಿಯ ಚುಚ್ಚಿ ಕೊಂದ ಪತಿ

ಕಳೆದ ಕೆಲವು ದಿನಗಳಿಂದ ಪತ್ನಿ ಅಣ್ಣು ರೀಲ್ಸ್​​ಗಳನ್ನು ಮಾಡಿ, ಅಪ್‌ಲೋಡ್ ಮಾಡುತ್ತಿದ್ದಳು. ಹಾಗೆ ಮಾಡದಂತೆ ಅನೇಕ ಬಾರಿ ಹೇಳಿದ್ದೆ. ಅಲ್ಲದೇ ಆಕೆಯ ವಿಡಿಯೋ ನೋಡಿ ಸ್ನೇಹಿತರು ಹಾಗೂ ಪರಿಚಯಸ್ಥರು ಗೇಲಿ ಮಾಡುತ್ತಿದ್ದರಂತೆ ಎಂದು ಆರೋಪಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

ಭಾನುವಾರ ರಾತ್ರಿ ಅನಿಲ್ ಮತ್ತು ಆತನ ಪತ್ನಿ ನಡುವೆ ರೀಲ್ಸ್​ ಮಾಡುವ ವಿಚಾರವಾಗಿ ಜಗಳವಾಗಿದೆ. ಅನಿಲ್ ಮೊಬೈಲ್‌ನಿಂದ ಆಪ್ ಅನ್ನು ಡಿಲೀಟ್ ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಆದರೆ ಅವಳು ಅದನ್ನು ನಿರಾಕರಿಸಿದ್ದಾಳೆ. ನಂತರ ಕೋಪಗೊಂಡ ಅನಿಲ್ ಆಕೆಯ ಕತ್ತು ಸೀಳಿದ್ದಾನೆ. ಆರೋಪಿ ಅನಿಲ್​ನನ್ನು ಬಂಧಿಸಲಾಗಿದೆ ಎಂದು ಎಸ್​ಐ ಚಂದನ್ ಕುಮಾರ್ ಭಗತ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.