ETV Bharat / bharat

ಗಂಡನ ಮುಂದೆ ಹೆಂಡ್ತಿ ಮೇಲೆ ಗ್ಯಾಂಗ್​​ರೇಪ್​; ಚಿನ್ನಾಭರಣ, ನಗದು ದೋಚಿ ಪರಾರಿ!

author img

By

Published : Mar 30, 2021, 9:35 PM IST

ತವರು ಮನೆಗೆ ತೆರಳುತ್ತಿದ್ದ ಮಹಿಳೆಯೋರ್ವಳ ಮೇಲೆ ದುಷ್ಕರ್ಮಿಗಳ ಗುಂಪು ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

women gang-raped
women gang-raped

ಆಗ್ರಾ(ಉತ್ತರ ಪ್ರದೇಶ): ಗಂಡನೊಂದಿಗೆ ತವರು ಮನೆಗೆ ತೆರಳುತ್ತಿದ್ದ ಮಹಿಳೆಯೋರ್ವಳ ಮೇಲೆ ದುಷ್ಕರ್ಮಿಗಳ ಗುಂಪು ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

women gang-raped
ಅತ್ಯಾಚಾರ ಪ್ರಕರಣ ದಾಖಲು

ಮೋಟಾರು ಸೈಕಲ್ ಮೇಲೆ ತೆರಳುತ್ತಿದ್ದ ಮೂವರು ಯುವಕರು ಬಲವಂತವಾಗಿ ಈ ಕೃತ್ಯವೆಸಗಿದ್ದು, ತದನಂತರ ಆಕೆಯ ಕೊರಳಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ದೋಚಿದ್ದಾರೆ. ಹೋಳಿ ಹಬ್ಬದ ಪ್ರಯುಕ್ತ ಸಂಜೆ ವೇಳೆ ಗಂಡನ ಜೊತೆಗೆ ತಾಯಿ ಮನೆಗೆ ತೆರಳುತ್ತಿದ್ದ ವೇಳೆ ಎಟ್ಮಾಡ್ಪುರ ಪ್ರದೇಶದ ಜಲಪಾತದ ಬಳಿ ಅವರನ್ನು ತಡೆದು ಅರಣ್ಯ ಪ್ರದೇಶಕ್ಕೆ ಕರೆದ್ಯೊಯಲಾಗಿದೆ. ಈ ವೇಳೆ ಇಬ್ಬರ ಬಟ್ಟೆ ತೆಗೆದು ಹಾಕಿದ್ದು, ಪರಸ್ಪರ ದೈಹಿಕ ಸಂಪರ್ಕ ನಡೆಸುವಂತೆ ಚಿತ್ರಹಿಂಸೆ ನೀಡಿದ್ದಾರೆ. ಇದಕ್ಕೆ ಗಂಡ ನಿರಾಕರಿಸುತ್ತಿದ್ದಂತೆ ಇಬ್ಬರ ಮೇಲೆ ಅಮಾನವೀಯ ರೀತಿಯಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

women gang-raped
ದೂರು ದಾಖಲು ಮಾಡಿದ ದಂಪತಿ

ಇದರ ವಿಡಿಯೋ ಸೆರೆ ಹಿಡಿದಿರುವ ದುಷ್ಕರ್ಮಿಗಳು, ತದನಂತರ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಜತೆಗೆ ಮಹಿಳೆಯ ಪರ್ಸ್​​ನಲ್ಲಿದ್ದ 10 ಸಾವಿರ ರೂ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಂಪತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಸೆಕ್ಷನ್​ 376ಡಿ, 506 ಮತ್ತು 394ರ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.