ETV Bharat / bharat

ಮಹಿಳೆ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಿದ ತಂದೆ-ಮಗ!

author img

By

Published : Feb 27, 2021, 10:10 AM IST

Woman gang-raped
ಮಹಿಳೆಯನ್ನು ರೇಪ್​ ಮಾಡಿ ಬೆಂಕಿ ಹಚ್ಚಿದ ತಂದೆ-ಮಗ

ಸೈಕಲ್​ ಬಂಡಿ ಸವಾರ ಹಾಗೂ ಆತನ 55 ವರ್ಷದ ತಂದೆ ಸೇರಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲು ಯತ್ನಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಸೀತಾಪುರ (ಉತ್ತರ ಪ್ರದೇಶ): 30 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ತಂದೆ ಹಾಗೂ ಮಗ, ಬೆಂಕಿ ಹಚ್ಚಿ ಆಕೆಯನ್ನು ಕೊಲ್ಲಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.

ತವರು ಮನೆಯಿಂದ ಸೀತಾಪುರದ ಮಿಶ್ರಿಖ್ ಪ್ರದೇಶದಲ್ಲಿರುವ ಗಂಡನ ಮನೆಗೆ ಮಹಿಳೆ ಹೋಗುತ್ತಿರುವ ವೇಳೆ, ಸೈಕಲ್​ ಬಂಡಿ ಸವಾರ ಹಾಗೂ ಆತನ 55 ವರ್ಷದ ತಂದೆ ಇಬ್ಬರೂ ಸೇರಿ ಈ ದುಷ್ಕೃತ್ಯ ಎಸಗಿದ್ದಾರೆ.

ಇದನ್ನೂ ಓದಿ: ಮದುವೆಗೆ ನಿರಾಕರಿಸಿದ ಯುವತಿಗೆ ಗೃಹ ಬಂಧನ: 8 ತಿಂಗಳುಗಳ ಕಾಲ ಅತ್ಯಾಚಾರ!

ಶೇ.30 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿರುವ ಸಂತ್ರಸ್ತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಪೊಲೀಸರು ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.