ETV Bharat / bharat

Battlegrounds Mobile India: ಪ್ಲೇ ಸ್ಟೋರ್​ನಿಂದ ಕಾಣೆಯಾಗಿದ್ದೇಕೆ?

author img

By

Published : Jul 30, 2022, 6:09 PM IST

Why BGMI banned from  Play Store,  App Store?
Battlegrounds Mobile India: ಪ್ಲೇ ಸ್ಟೋರ್​ನಿಂದ ಕಾಣೆಯಾಗಿದ್ದೇಕೆ?

ಮೇ 2021ರಲ್ಲಿ ಕ್ರಾಫ್ಟನ್ BGMI ಲಾಂಚ್ ಮಾಡಿತ್ತು ಹಾಗೂ ಚೀನಾ ಸರ್ವರ್​ಗಳಿಗೆ ಯಾವುದೇ ಡೇಟಾ ಕಳುಹಿಸುತ್ತಿಲ್ಲ ಎಂದಿತ್ತು. ವರ್ಷದಲ್ಲೇ ಗೇಮ್​ 100 ಮಿಲಿಯನ್ ಬಳಕೆದಾರರನ್ನು ಗಳಿಸಿತ್ತು.

ಬೆಂಗಳೂರು: ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್​ಗಳಿಂದ ಬ್ಯಾಟಲ್ ಗ್ರೌಂಡ್ಸ್​ ಮೊಬೈಲ್ ಇಂಡಿಯಾ (Battlegrounds Mobile India -BGMI) ಗೇಮ್​ ಅನ್ನು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ತೆಗೆದುಹಾಕಲಾಗಿದೆ. 2020ರ ಸೆಪ್ಟೆಂಬರ್​​ನಲ್ಲಿ ಪಬ್ ಜಿ ಗೇಮ್ ವಿರುದ್ಧ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿತ್ತು. ಭಾರತದ ಸಾರ್ವಭೌಮತ್ವ ಮತ್ತು ಸುರಕ್ಷತೆಗೆ ಧಕ್ಕೆ ತರುತ್ತಿರುವ ಆರೋಪದ ಮೇಲೆ ಪಬ್​ಜಿ ಸೇರಿದಂತೆ ಒಟ್ಟು 11 ಚೀನಾ ಮೂಲದ ಆ್ಯಪ್​ಗಳನ್ನು ಬ್ಯಾನ್ ಮಾಡಲಾಗಿತ್ತು. ಇನ್ಫಾರ್ಮೇಶನ್ ಟೆಕ್ನಾಲಜಿ ಕಾಯ್ದೆ, 2000ರ ಸೆಕ್ಷನ್ 69A ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

ಆಗ ಪಬ್​ಜಿ 33 ಮಿಲಿಯನ್ ಫಾಲೋವರ್​ಗಳನ್ನು ಹೊಂದಿತ್ತು ಹಾಗೂ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಗೇಮ್​ಗಳಲ್ಲಿ ಒಂದಾಗಿತ್ತು. ನಂತರ ನವೆಂಬರ್​ನಲ್ಲಿ ಗೇಮ್ ರಿ-ಲಾಂಚ್ ಆಗಿತ್ತು. ಚೀನಾದಲ್ಲಿರುವ ಟೆನ್ಸೆಂಟ್ ಸರ್ವರ್​ಗಳಿಗೆ ಡೇಟಾ ಕಳುಹಿಸುತ್ತಿರುವ ಆರೋಪದ ಮೇಲೆ ಜೂನ್ 2021ರಲ್ಲಿ ಮತ್ತೆ ಗೇಮ್ ನಿಷೇಧಿಸಲಾಯಿತು.

ಮೇ 2021ರಲ್ಲಿ ಕ್ರಾಫ್ಟನ್ BGMI ಲಾಂಚ್ ಮಾಡಿತ್ತು ಹಾಗೂ ಚೀನಾ ಸರ್ವರ್​ಗಳಿಗೆ ಯಾವುದೇ ಡೇಟಾ ಕಳುಹಿಸುತ್ತಿಲ್ಲ ಎಂದಿತ್ತು. ವರ್ಷದಲ್ಲೇ ಗೇಮ್​ 100 ಮಿಲಿಯನ್ ಬಳಕೆದಾರರನ್ನು ಗಳಿಸಿತ್ತು. ಆದರೆ ಈಗ ಎರಡೂ ಆ್ಯಪ್ ಸ್ಟೋರ್​ಗಳಿಂದ ಗೇಮ್ ಹೊರಗೆ ಹೋಗಿದೆ. ಈಗಾಗಲೇ ಇನ್​ಸ್ಟಾಲ್ ಆಗಿರುವ ಮೊಬೈಲ್​ಗಳಲ್ಲಿ ಗೇಮ್​ ಮೊದಲಿನಂತೆಯೇ ನಡೆಯುತ್ತಿದೆ.

ಕೇಂದ್ರ ಸರ್ಕಾರ ಈ ಕುರಿತು ಯಾವುದೇ ಪ್ರಕಟಣೆ ನೀಡಿಲ್ಲವಾದರೂ, ಸರ್ಕಾರದ ಆದೇಶದ ಮೇರೆಗೆ ಗೇಮ್ ತೆಗೆದುಹಾಕಲಾಗಿದೆ ಎಂದು ಗೂಗಲ್ ತಿಳಿಸಿದೆ. ಪಬ್​ ಜಿ ಒಡೆತನ ಹೊಂದಿದ್ದ ಟೆನ್ಸೆಂಟ್ ಕಂಪನಿಯೇ ಹಿಂದಿನಿಂದ ಇದನ್ನು ನಿಯಂತ್ರಿಸುತ್ತಿತ್ತು ಎಂಬ ಸಂಶಯಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.