ETV Bharat / bharat

ಕಡಿಮೆ ಅಂತರದಲ್ಲಿ ಗೆದ್ದವರು ಯಾರು? ಹೇಗಿತ್ತು ತೀವ್ರ ಹಣಾಹಣಿಯ ಪೈಪೋಟಿ..

author img

By

Published : Dec 9, 2022, 6:38 AM IST

Who was the winner with 483 votes difference
ಕಡಿಮೆ ಅಂತರದಲ್ಲಿ ಗೆದ್ದವರು ಯಾರು? ಹೇಗಿತ್ತು ತೀವ್ರ ಹಣಾಹಣಿಯ ಪೈಪೋಟಿ...

ಗುಜರಾತ್ ವಿಧಾನಸಭೆ ಚುನಾವಣೆ 2022 ಫಲಿತಾಂಶ: 1962 ರಿಂದ 2017 ರವರೆಗಿನ ಅಂಕಿ- ಅಂಶಗಳ ಪ್ರಕಾರ ಇತಿಹಾಸದಲ್ಲಿ ಕಡಿಮೆ ಮತಗಳಿಂದ ಗೆದ್ದ ಶಾಸಕ ಎಂಬ ದಾಖಲೆಯನ್ನು ಠಾಕೂರ್ ಶಂಕರಜಿ ಹೊಂದಿದ್ದಾರೆ. 1975 ರಲ್ಲಿ ಅವರು ಖೇರಾಲು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಅವರು ಸ್ಪರ್ಧಿಸಿದ್ದರು. ಆದಾಗ್ಯೂ, ಕಚ್ ರಾಪರ್ ವಿಧಾನಸಭಾ ಅಭ್ಯರ್ಥಿ 2022 ರಲ್ಲಿ ಕೇವಲ 483 ಮತಗಳಿಂದ ಗೆಲುವು ಸಾಧಿಸಿ ಈ ಬಾರಿ ಅತಿ ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿ ಎಂದು ದಾಖಲಾಗಿದ್ದಾರೆ.

ಅಹಮದಾಬಾದ್: ಗುಜರಾತ್​​​​ನಲ್ಲಿ ನಡೆದ ಚುನಾವಣೆ ಸಾಕಷ್ಟು ದಾಖಲೆಗಳನ್ನು ಮುರಿದಿದ್ದು, ಹೊಸ ದಾಖಲೆಗಳನ್ನು ನಿರ್ಮಿಸಿದೆ. 1962 ರಿಂದ 2017 ರವರೆಗಿನ ಯಾವುದೇ ಚುನಾವಣೆಯಲ್ಲಿ ಕಡಿಮೆ ಮತಗಳನ್ನು ಪಡೆದ ಶಾಸಕ ಎಂಬ ದಾಖಲೆಯನ್ನು ಠಾಕೂರ್ ಶಂಕರಜಿ ಹೊಂದಿದ್ದಾರೆ. ಆದಾಗ್ಯೂ, ಕಚ್ ರಾಪರ್ ವಿಧಾನಸಭಾ ಅಭ್ಯರ್ಥಿ, 2022 ರ ಚುನಾವಣೆಯಲ್ಲಿ ಕೇವಲ 483 ಮತಗಳಿಂದ ಗೆದ್ದಿದ್ದಾರೆ. ಇನ್ನು ಜಿತು ಚೌಧರಿ 2017ರಲ್ಲಿ ಅತ್ಯಂತ ಕಡಿಮೆ ಮತಗಳಿಂದ ಕಾಂಗ್ರೆಸ್​ನಿಂದ ಗೆದ್ದಿದ್ದರು. ಆ ಬಳಿಕ ಅವರು ಇದೀಗ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಕೇವಲ 483 ಮತಗಳಿಂದ ಗೆಲುವು: 2022ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ರಾಪರ್ ವಿಧಾನಸಭಾ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಚುಭಾಯಿ ಅರೆಥಿಯಾ 66106 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ವೀರೇಂದ್ರಸಿನ್ಹ ಜಡೇಜಾ 66589 ಮತಗಳನ್ನು ಪಡೆದಿದ್ದಾರೆ.

ಇತರ ಪೈಪೋಟಿ ನೀಡಿದ ಕ್ಷೇತ್ರಗಳು: ಸಿದ್ದ್‌ಪುರ ಪಟಾನ್‌ನಲ್ಲಿ ಬಿಜೆಪಿ ಅಭ್ಯರ್ಥಿ ಬಲ್ವಂತ್‌ಸಿನ್ಹ ಚಂದನ್‌ಸಿನ್ಹ ರಜಪೂತ್ 2705 ಮತಗಳ ಅಂತರದಿಂದ ಮೇಲುಗೈ ವಿಜಯ ಸಾಧಿಸಿದ್ದಾರೆ. ಅವರು 90871 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ ಅಭ್ಯರ್ಥಿ ಚಂದನ್‌ಜಿ ತಾಲಾಜಿ ಠಾಕೂರ್‌ 88112 ಮತಗಳನ್ನು ಪಡೆದು ನಿರಾಸೆ ಅನುಭವಿಸಿದ್ದಾರೆ.

ಪಟಾನ್‌ನ ಚನ್ಸಾಮಾ ಅವರು ಕಾಂಗ್ರೆಸ್‌ ಅಭ್ಯರ್ಥಿ ಠಾಕೂರ್‌ ದಿನೇಶಭಾಯ್‌ ಅತಾಜಿ ವಿರುದ್ಧ ಕೇವಲ 1096 ಮತಗಳಿಂದ ಸೋತಿದ್ದಾರೆ. ಅವರು 85,479 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ದಿಲೀಪ್ ಕುಮಾರ್ ವಿರ್ಜಿಭಾಯ್ ಠಾಕೂರ್ 84,383 ಮತಗಳನ್ನು ಪಡೆದಿದ್ದಾರೆ.

ಬೊಟಾಡ್ ಚುನಾವಣೆಯಲ್ಲಿ ಎಎಪಿಯ ಮಕ್ವಾನಾ ಉಮೇಶಭಾಯಿ ನಾರಣಭಾಯ್ 2473 ಮತಗಳಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 79,524 ಮತಗಳನ್ನು ಪಡೆದರು. ಬಿಜೆಪಿಯ ಘನಶ್ಯಾಂಬಾಯಿ ಪ್ರಾಗ್ಜಿಭಾಯಿ ವಿರಾನಿ 77049 ಮತಗಳನ್ನು ಪಡೆದಿದ್ದಾರೆ. ಸೋಮನಾಥ್‌ನಿಂದ ಚುಡಾಸಮ ವಿಮಲಭಾಯ್ ಕಾನಾಭಾಯಿ 1302 ಮತಗಳಿಂದ ಪ್ರತಿಪಕ್ಷದ ಅಭ್ಯರ್ಥಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 73,536 ಮತಗಳನ್ನು ಪಡೆದುಕೊಂಡಿದ್ದಾರೆ.

ಅತಿ ಕಡಿಮೆ ಮತಗಳಿಂದ ಗೆದ್ದ ಅಭ್ಯರ್ಥಿ: ವಿಧಾನಸಭಾ ಚುನಾವಣೆಯಲ್ಲಿ ಠಾಕೂರ್ ಶಂಕರಜಿ ಕೇವಲ ಎರಡಂಕಿಯ ಕಡಿಮೆ ಮತಗಳಿಂದ ಗುಜರಾತ್​ನಲ್ಲಿ ದಾಖಲೆ ಬರೆದಿದ್ದಾರೆ. ಇದು ಗುಜರಾತ್​ನಲ್ಲಿ ನಡೆದ ಇದುವರೆಗಿನ ತೀವ್ರ ಹಣಾಹಣಿಯ ಕ್ಷೇತ್ರ. 1975ರಲ್ಲಿ ಖೇರಾಳು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಶಂಕರ್​​​​ ಜಿ ಠಾಕೂರ್​​​​​​​ ಸ್ಫರ್ಧಿಸಿದ್ದರು.

ಇನ್ನು 2007 ರಲ್ಲಿ ಜಮ್‌ಜೋಗ್‌ಪುರ ವಿಧಾನಸಭಾ ಸ್ಥಾನದ ಕಾಂಗ್ರೆಸ್ ಅಭ್ಯರ್ಥಿ ಬ್ರಿಜ್‌ರಾಜ್ ಸಿಂಗ್ ಜಡೇಜಾ ಅವರು ಕೇವಲ 17 ಮತಗಳಿಂದ ಗೆದ್ದು ಇತಿಹಾಸ ನಿರ್ಮಿಸಿದ್ದರು. 1962 ರ ಅಸೆಂಬ್ಲಿ ಚುನಾವಣೆಯಲ್ಲಿ ಜಮೀಂದಾರ್ ಫೈಜಲ್ ಅಬ್ಬಾಸ್ 33 ಮತಗಳಿಂದ ಮತರ್ ಅಸೆಂಬ್ಲಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.

ಇದನ್ನು ಓದಿ: 156 ಸೀಟು ಗೆದ್ದು ಗುಜರಾತ್‌ನಲ್ಲಿ​ ಬಿಜೆಪಿ ದಾಖಲೆಯ ಜಯಭೇರಿ: 'ಕೈ'ಗೆ ಪ್ರತಿಪಕ್ಷ ಸ್ಥಾನವೂ ಇಲ್ಲ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.