ETV Bharat / bharat

ಟಿಆರ್​ಎಸ್​ ಶಾಸಕರ ಖರೀದಿ ಯತ್ನ ಕೇಸ್​: ಕೇರಳ, ಕರ್ನಾಟಕ, ಹರಿಯಾಣದಲ್ಲಿ ಆರೋಪಿಗಳ ಬೇಟೆ

author img

By

Published : Nov 14, 2022, 7:33 PM IST

trs-mlas-poaching-case
ಟಿಆರ್​ಎಸ್​ ಶಾಸಕರ ಖರೀದಿ ಯತ್ನ ಕೇಸ್​

ಟಿಆರ್​ಎಸ್​ ಶಾಸಕರ ಖರೀದಿ ಯತ್ನ ಆರೋಪ ಕೇಸ್​ ಈಗ ಕೇರಳಕ್ಕೂ ತಲುಪಿದೆ. ಆರೋಪಿಯೊಬ್ಬ ಕೊಚ್ಚಿಯಲ್ಲಿ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ತೆಲಂಗಾಣ ವಿಶೇಷ ಪೊಲೀಸ್​ ಪಡೆ ಕಾರ್ಯಾಚರಣೆಗಿಳಿದಿದೆ.

ಕೊಚ್ಚಿ (ಕೇರಳ): ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್​ಎಸ್​) ಶಾಸಕರನ್ನು ಬಿಜೆಪಿ ಖರೀದಿಸುವ ಯತ್ನ ಆರೋಪ ಪ್ರಕರಣ ಕರ್ನಾಟಕ, ಕೇರಳ, ಹರಿಯಾಣ ರಾಜ್ಯಗಳಿಗೆ ಹಬ್ಬಿದೆ. ಕೇಸರಿ ಪಡೆಯ ಮೇಲಿರುವ ಆಪಾದನೆಯ ಕೇಸ್​ ಅನ್ನು ತೆಲಂಗಾಣ ಪೊಲೀಸರು ಬೆನ್ನಟ್ಟಿದ್ದು, ಆರೋಪಿಗಳ ಆಸ್ತಿಪಾಸ್ತಿ ಮೇಲೆ ದಾಳಿ ನಡೆಸಿದೆ.

ಟಿಆರ್‌ಎಸ್ ಶಾಸಕರ ಕುದುರೆ ವ್ಯಾಪಾರ ಪ್ರಕರಣದ ತನಿಖೆಗಾಗಿ ತೆಲಂಗಾಣ ಪೊಲೀಸ್ ವಿಶೇಷ ತನಿಖಾ ತಂಡ ಸೋಮವಾರ ಕೇರಳದ ಕೊಚ್ಚಿ ತಲುಪಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ರಾಮಚಂದ್ರ ಭಾರತಿ ಎಂಬುವರ ಸ್ನೇಹಿತ ಕೊಚ್ಚಿಯಲ್ಲಿ ತಲೆಮರೆಸಿಕೊಂಡ ಸುಳಿವು ಹಿಡಿದು ಪೊಲೀಸರು ಕೊಚ್ಚಿಗೆ ಬಂದಿದ್ದಾರೆ. ಸ್ವಾಮಿ ಎಂಬಾತನ ಸೆರೆಗಾಗಿ ಕಾರ್ಯಾಚರಣೆ ನಡೆಸುತ್ತಿರುವ ತೆಲಂಗಾಣ ಪೊಲೀಸರು, ಆತನಿಗೆ ಸಂಬಂಧಿಸಿದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣವೇನು?: ಬಿಜೆಪಿ ಏಜೆಂಟರು ಎಂದು ಹೇಳಲಾದ, ಸದ್ಯ ಬಂಧನದಲ್ಲಿರುವ ವ್ಯಕ್ತಿಗಳು ಟಿಆರ್​ಎಸ್​ ಶಾಸಕ ರೋಹಿತ್​ರೆಡ್ಡಿ ನಿವಾಸಕ್ಕೆ ಆಗಮಿಸಿ "ನೀವು ಬಿಜೆಪಿ ಸೇರಿದರೆ 100 ಕೋಟಿ ರೂಪಾಯಿ ನೀಡುವುದಾಗಿ ಆಮಿಷ" ವೊಡ್ಡಿದ್ದರು ಎಂದು ಟಿಆರ್​ಎಸ್​ ಪಕ್ಷ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿತ್ತು. ನೀವು ಇನ್ನೂ ಮೂವರನ್ನು ಕರೆತಂದರೆ ಅವರಿಗೆ 50 ಕೋಟಿ ನೀಡುವುದಾಗಿ ಬಿಜೆಪಿ ಏಜೆಂಟರು ಆಫರ್​ ಮಾಡಿದ್ದರು. ಈ ಬಗ್ಗೆ ರೆಡ್ಡಿ ಪೊಲೀಸರಿಗೆ ಮಾಹಿತಿ ನೀಡಿ, ದಾಳಿ​ ಮಾಡಿಸಿದ್ದರು.

ಓದಿ: ತೆಲುಗು ನಟ ಮಹೇಶ್​ಬಾಬು ತಂದೆ ಕೃಷ್ಣ ಆರೋಗ್ಯ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.