ETV Bharat / entertainment

ವಾರಾಂತ್ಯದ ಮೋಜಿಗೆ ಸೇರಿಸಿ ಮತ್ತಷ್ಟು ಮನರಂಜನೆ: ಈ ವಾರ ಓಟಿಟಿಯಲ್ಲಿ ನೋಡಿ ಈ ಸಿನಿಮಾ - ott film Fill release on may 17

author img

By ETV Bharat Karnataka Team

Published : May 17, 2024, 3:45 PM IST

ಈ ವಾರ ಓಟಿಟಿಯಲ್ಲಿ ಯಾವ ಸಿನಿಮಾ ಬಿಡುಗಡೆಯಾಗುತ್ತಿದೆ. ಯಾವುದನ್ನು ನೋಡಬೇಕು ಎಂದು ನಿರ್ಧರಿಸಲು ಇಲ್ಲಿದೆ ಉತ್ತಮ ಆಯ್ಕೆ.

explore-new-releases-on-ott-from-zara-hatke-zara-bachke-to-madgaon-express-and-more
explore-new-releases-on-ott-from-zara-hatke-zara-bachke-to-madgaon-express-and-more (Etv bharat)

ಹೈದರಾಬಾದ್​: ವಾರಾಂತ್ಯಕ್ಕೆ ತಮ್ಮ ಬಳಕೆದಾರರಿಗೆ ಮತ್ತಷ್ಟು ರಸದೌತಣ ನೀಡಲು ಪ್ರಮುಖ ಒಟಿಟಿಗಳು ಸಿದ್ದವಾಗಿರುತ್ತವೆ. ವಿಶಾಲ ವ್ಯಾಪ್ತಿಯ, ವಿವಿಧ ವರ್ಗದ ಅಭಿರುಚಿಗೆ ತಕ್ಕಂತ ಸಿನಿಮಾ ವಿಷಯಗಳನ್ನು ಈ ವಾರ ಕೂಡ ಕಾಣಬಹುದು. ಈ ವಾರ ಜೀ5, ನೆಟ್​ಫ್ಲಿಕ್ಸ್​, ಆಪಲ್​ ಟಿವಿ ಮತ್ತು ಹಲವು ಒಟಿಟಿಯಲ್ಲಿ ಹಲವು ಭಾಷೆಯ ವಿವಿಧ ಸಿನಿಮಾಗಳು ಬಿಡುಗಡೆಯಾಗಲಿದೆ. ರೋಮಾನ್ಸ್​, ಆ್ಯಕ್ಷನ್, ಡ್ರಾಮಾ, ಕುತೂಹಲಕಾರಿ ಸೇರಿದಂತೆ ಹಲವು ಅಭಿರುಚಿಯ ಚಿತ್ರಗಳು ತೆರೆಗೆ ಬರಲು ಸಜ್ಜಾಗಿದೆ. ಯಾವ ಒಟಿಟಿಯಲ್ಲಿ ಯಾವ ಸಿನಿಮಾ ಬಿಡುಗಡೆ ಕಾಣಲಿದೆ ಎಂಬ ಮಾಹಿತಿ ಇಲ್ಲಿದೆ.

ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​ : ಡಿಸ್ನಿ+ ಹಾಟ್​ಸ್ಟಾರ್​ (ಮೇ 17)

ಅನಿಮೇಟೆಡ್​ ಸೀರಿಸ್​​ ಆಗಿರುವ ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​, ನಿರ್ದೇಶಕ ಪ್ರಖ್ಯಾತ ಬಾಹುಬಲಿ ಚಿತ್ರಗಳಿಗೆ ಮುನ್ನುಡಿಯ ಸಿನಿಮಾ ಆಗಿದೆ. ಅಮರೇಂದ್ರ ಬಾಹುಬಲಿ ಮತ್ತು ಭಲ್ಲಾಳದೇವರ ಯುವ ವಯಸ್ಸಿನ ಸಾಹಸಗಳ ಕುರಿತು ಹೆಚ್ಚು ಗಮನ ಹರಿಸಿದೆ. ಪೌರಾಣಿಕ ಸಿನಿಮಾವೂ ಪ್ರೇಕ್ಷಕರ ಕಾತುರತೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ದಿ 8 ಶೋ: ನೆಟ್​ಫ್ಲಿಕ್ಸ್​ (ಮೇ 17): ದಕ್ಷಿಣ ಕೊರಿಯಾದ ಕಾಮಿಡಿ ಥ್ರಿಲ್ಲರ್​ ಚಿತ್ರ ಇದಾಗಿದೆ. ಎಂಟು ಜನರ ನಡುವಿನ ಸ್ಪರ್ಧೆಗಳ ನಡುವಿನ ಕಥೆಯನ್ನು ಇದು ಹೊಂದಿದೆ. ಇದು ಮಾನವ ಹತಾಶೆ, ಸಹಕಾರ ಮತ್ತು ಪೈಪೋಟಿಯ ವಿಷಯಗಳ ಕುರಿತು ಬೆಳಕು ಚೆಲ್ಲುತ್ತದೆ.

ದಿ ಬಿಗ್​ ಸಿಗರ್​: ಆಪ್​ ಟಿವಿ+ (ಮೇ 17): ಬ್ಲ್ಯಾಕ್ ಪ್ಯಾಂಥರ್ ಪಾರ್ಟಿಯ ಸಹ-ಸಂಸ್ಥಾಪಕರಾದ ಹ್ಯೂಯ್ ಪಿ. ನ್ಯೂಟನ್‌ರ ಬೋಲ್ಡ್ ಎಸ್ಕೇಪ್ ತಂತ್ರವನ್ನು ಇದು ಹೊಂದಿದೆ. ಐತಿಹಾಸಿಕ ಘಟನೆಯನ್ನು ಸಿನಿಮೀಯ ರೀತಿ ಪ್ರದರ್ಶಿಸಲಾಗಿದೆ.

ಬಸ್ತಾರ್​​​: ದಿ ನಕ್ಸಲ್​ ಸ್ಟೋರಿ : ಜಿ5 (ಮೇ 17): ಸುದಿಪ್ತೊ ಸೆನ್​ ಮತ್ತು ವಿಪುಲ್​ ಅಮೃತ್​​ಲಾಲ್​ ಶಾ ನಿರ್ದೇಶನ ಈ ಚಿತ್ರ ಮಾವೋವಾದಿ ನಕ್ಸಲ್​ ಕೇಂದ್ರವಾಗಿರುವ ಛತ್ತೀಸ್​ಗಢದ ಬಸ್ತಾರ್​​ ಪ್ರದೇಶವನ್ನು ಕೇಂದ್ರವಾಗಿದೆ. ಅದಾ ಶರ್ಮಾ, ಇಂದಿರಾ ತಿವಾರಿ, ಶಿಲ್ಪಾ ಶುಕ್ಲಾ ಮತ್ತು ರೈಮಾ ಸೆನ್​ ಪ್ರಮುಖ ಪಾತ್ರದಲ್ಲಿದ್ದಾರೆ. ಐಪಿಎಸ್​​ ಅಧಿಕಾರಿ ನೀರ್ಜಾ ಮಧವನ್​ ಪಾತ್ರವನ್ನು ಅದಾ ಶರ್ಮಾ ನಿರ್ವಹಿಸಲಿದ್ದಾರೆ.

ಜರಾ ಹಟ್ಕೆ ಜರಾ ಬಚ್ಕೆ: ಜೀಸಿನಿಮಾ (ಮೇ 17): ಸಾರಾ ಅಲಿ ಖಾನ್​ ಮತ್ತು ವಿಕ್ಕಿ ಕೌಶಲ್​ ಪ್ರಮುಖ ಪಾತ್ರದಲ್ಲಿರುವ ಚಿತ್ರ. ಮನೆಯನ್ನು ತೆಗೆದುಕೊಳ್ಳಲು ಈ ಜೋಡಿ ನಡೆಸುವ ಸಾಹಸದೊಂದಿಗಿನ ಪ್ರಣದಯ ಕಥೆ ಇದಾಗಿದೆ.

ಮಡ್ಗಾವ್​ ಎಕ್ಸ್​​ಪ್ರೆಸ್​: ಪ್ರೈಮ್​ ವಿಡಿಯೋ (ಮೇ 17) : ಕುನಾಲ್​ಖೇಮ್​ ನಿರ್ದೇಶನದ ಈ ಚಿತ್ರದಲ್ಲಿ ಪ್ರತೀಕ್​ ಗಾಂಧಿ, ಅವಿನಾಶ್​ ತಿವಾರಿ, ದಿವ್ಯೆಂದು ಮತ್ತು ನೂರ್​ ಫತೇಹಿ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರರಂಗದ ಸೆಲೆಬ್ರಿಟಿಗಳು ಮತ್ತು ಪ್ರೇಕ್ಷಕರು ಈ ಚಿತ್ರದ ಬಗ್ಗೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: ರಾಜಮೌಳಿ-ಮಹೇಶ್​ ಬಾಬು ಸಿನಿಮಾ​ ಸುತ್ತ ಅಂತೆಕಂತೆಗಳ ಸಂತೆ: ಏನದು? ಪ್ರೊಡಕ್ಷನ್ ಹೌಸ್ ಹೇಳಿದ್ದಿಷ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.