ETV Bharat / bharat

ಗುವಾಹಟಿ - ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ತಾಯಿ, ಮಗಳು ಸೇರಿ ಮೂವರ ಸಾವು

author img

By ETV Bharat Karnataka Team

Published : Dec 14, 2023, 5:06 PM IST

Three women mowed down by speeding train in Assam
ಗುವಾಹಟಿ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ತಾಯಿ, ಮಗಳು ಸೇರಿ ಮೂವರು ಸಾವು

Three Women Mowed Down By Speeding Train in Assam: ಗುವಾಹಟಿ - ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದು ಮೂವರು ಮಹಿಳೆಯರು ಮೃತಪಟ್ಟಿರುವ ಘಟನೆ ಅಸ್ಸೋಂದ ಬೊಂಗೈಗಾಂವ್​ ಜಿಲ್ಲೆಯಲ್ಲಿ ಜರುಗಿದೆ.

ಬೊಂಗೈಗಾಂವ್ (ಅಸ್ಸಾಂ): ರೈಲು ಹರಿದು ತಾಯಿ ಮತ್ತು ಮಗಳ ಸೇರಿದಂತೆ ಮೂವರು ಮಹಿಳೆಯರು ಸಾವನ್ನಪ್ಪಿರುವ ದಾರುಣ ಘಟನೆ ಅಸ್ಸೋಂದ ಬೊಂಗೈಗಾಂವ್​ ಜಿಲ್ಲೆಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ. ಮೃತರನ್ನು ಕಲ್ಪನಾ ಬರ್ಮನ್, ಆಕೆಯ ಪುತ್ರಿ ಪ್ರಿಯಾ ಬರ್ಮನ್ (11) ಮತ್ತು ಮತ್ತೊಬ್ಬ ಮಹಿಳೆಯನ್ನು ಮುನ್ನಾ ಎಂದು ಗುರುತಿಸಲಾಗಿದೆ.

ಬೊಂಗೈಗಾಂವ್-ಚಪ್ರಕಟ ರೈಲು ನಿಲ್ದಾಣದ ನಡುವಿನ ನೊವಾಪಾರಾ-2 ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಸುಕಿನಲ್ಲಿ ಮಹಿಳೆಯರಿಗೆ ವೇಗವಾಗಿ ಬಂದ ಗುವಾಹಟಿ - ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ 11 ವರ್ಷದ ಪ್ರಿಯಾ ಸೇಮತ ಮೂವರು ಸಾವನ್ನಪ್ಪಿದ್ದಾರೆ. ಈ ಅಪಘಾತದ ಸುದ್ದಿ ತಿಳಿದು ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕ ಮನೆ ಮಾಡಿದೆ.

ರೈಲ್ವೆ ಹಳಿ ದಾಟುತ್ತಿದ್ದಾಗ ಈ ದುರಂತ ಸಂಭವಿಸಿದೆಯೋ ಅಥವಾ ಬೇರೆ ಕಾರಣದಿಂದ ನಡೆದಿದೆಯೋ ಎಂಬ ಕುರಿತು ನಿಖರ ಇನ್ನೂ ತಿಳಿದುಬಂದಿಲ್ಲ. ಈ ಘಟನೆ ಮಾಹಿತಿ ಪಡೆದ ರೈಲ್ವೆ ಪೊಲೀಸರು ಹಾಗೂ ಬೋಂಗೈಗಾಂವ್ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಇಂಟರ್‌ಲಾಕಿಂಗ್, ಪುನರ್ ನಿರ್ಮಾಣ ಕಾಮಗಾರಿ: ಒಂದು ವಾರ ಬೆಂಗಳೂರು - ಮಂಗಳೂರು ರೈಲು ಸಂಚಾರ ರದ್ದು

ತಮಿಳುನಾಡು ರೈಲು ಅಪಘಾತ ಪ್ರಕರಣ: ಕಳೆದ ಅಕ್ಟೋಬರ್​ನಲ್ಲಿ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಇದೇ ರೀತಿಯಾದ ರೈಲು ಅಪಘಾತದ ಘಟನೆ ನಡೆದಿತ್ತು. ಲೆಕ್ಟ್ರಿಕ್​ ರೈಲು ಡಿಕ್ಕಿಯಾಗಿ ಕರ್ನಾಟಕದ ಮೂವರು ವಿಶೇಷಚೇತನ ಬಾಲಕರು ಸ್ಥಳದಲ್ಲೇ ಮೃತಪಟ್ಟಿದ್ದರು.

ಮೃತರನ್ನು 10 ವರ್ಷದ ರವಿ, 11 ವರ್ಷದ ಮಂಜುನಾಥ್ ಹಾಗೂ 15 ವರ್ಷದ ಸುರೇಶ್​ ಎಂದು ಗುರುತಿಸಲಾಗಿತ್ತು. ಇವರೆಲ್ಲರೂ ಸಹೋದರರಾಗಿದ್ದು, ಈ ಪೈಕಿ ಇಬ್ಬರು ಕಿವುಡ ಮತ್ತು ಮೂಗರಾಗಿದ್ದರು. ಮತ್ತೊಬ್ಬ ಬಾಲಕನಿಗೂ ಸರಿಯಾ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಕರ್ನಾಟಕದ ಅಜ್ಜ, ಅಜ್ಜಿಯೊಂದಿಗೆ ವಾಸವಾಗಿದ್ದ ಈ ಮಕ್ಕಳು, ರಜೆ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ನೆಲೆಸಿರುವ ಪೋಷಕರ ಬಳಿಗೆ ತೆರಳುತ್ತಿದ್ದಾಗ ಈ ದುರಂತ ಜರುಗಿತ್ತು.

ಇಲ್ಲಿನ ಉರಪಕ್ಕಂ ಸಮೀಪದ ರೈಲ್ವೆ ಹಳಿ ಪಕ್ಕದಲ್ಲಿ ಮೂವರು ಕೂಡ ಆಟವಾಡುತ್ತಿದ್ದರು. ಈ ವೇಳೆ. ಚೆನ್ನೈ ಬೀಜ್​ ರೈಲ್ವೆ ನಿಲ್ದಾಣದಿಂದ ಚೆಂಗಲ್ಪಟ್ಟು ಕಡೆ ಸಂಚರಿಸುತ್ತಿದ್ದ ಎಲೆಕ್ಟ್ರಿಕ್​ ರೈಲು ಗುದ್ದಿದ ಪರಿಣಾಮ ಮೃತದೇಹಗಳು ಛಿದ್ರವಾಗಿದ್ದವು. ಸ್ಥಳಕ್ಕೆ ತಾಂಬರಂ ಠಾಣೆ ರೈಲ್ವೆ ಪೊಲೀಸರು, ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ: ತಮಿಳುನಾಡಿನಲ್ಲಿ ರೈಲು ಡಿಕ್ಕಿಯಾಗಿ ಕರ್ನಾಟಕದ ಮೂವರು ವಿಶೇಷಚೇತನ ಬಾಲಕರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.