ETV Bharat / bharat

ವಿರೋಧದ ನಡುವೆ ನರೋಡಾ ವಿಧಾನಸಭಾ ಕ್ಷೇತ್ರಕ್ಕೆ ಪಾಯಲ್ ಕುಕ್ರಾಣಿಗೆ ಟಿಕೆಟ್​ ನೀಡಿದ ಕಮಲ! ​

author img

By

Published : Nov 10, 2022, 10:37 PM IST

Updated : Nov 10, 2022, 10:44 PM IST

The Sindhi Samaj objected to Payal Kukrani nomination for the Naroda assembly seat for what reason
ಪಾಯಲ್ಬೆನ್​ ಮನೋಜ್‌ಕುಮಾರ್ ಕುಕ್ರಾಣಿ

ಅಹಮದಾಬಾದ್‌ನಲ್ಲಿನ 16 ಕ್ಷೇತ್ರಗಳಲ್ಲಿ ಒಂದಾದ ನರೋಡಾ ವಿಧಾನಸಭಾ ಕ್ಷೇತ್ರಕ್ಕೆ ಅಚ್ಚರಿ ಎಂಬಂತೆ ಬಿಜೆಪಿ ಮಹಿಳಾ ಅಭ್ಯರ್ಥಿ ಪಾಯಲ್ಬೆನ್​ ಮನೋಜ್‌ಕುಮಾರ್ ಕುಕ್ರಾಣಿ ಎಂಬುವರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ.

ಅಹಮದಾಬಾದ್ (ಗುಜರಾತ್): ಇದೇ ಡಿಸೆಂಬರ್‌ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷ ಬಿಜೆಪಿ ಇಂದು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್​ ನೀಡುವ ಮೂಲಕ ಅಚ್ಚರಿಗೆ ಕಾರಣವಾಗಿದೆ.

ಇನ್ನು ಕೆಲವು ಕ್ಷೇತ್ರಗಳಿಗೆ ನಿರೀಕ್ಷೆಯಂತೆ ಹಳೆ ಮುಖಗಳಿಗೆ ಮಣೆ ಹಾಕಿರುವುದನ್ನು ಕಾಣಬಹುದು. ಅಹಮದಾಬಾದ್‌ನಲ್ಲಿನ 16 ಕ್ಷೇತ್ರಗಳಲ್ಲಿ ಒಂದಾದ ನರೋಡಾ ವಿಧಾನಸಭಾ ಕ್ಷೇತ್ರಕ್ಕೆ ಅಚ್ಚರಿ ಎಂಬಂತೆ ಬಿಜೆಪಿ ಮಹಿಳಾ ಅಭ್ಯರ್ಥಿ ಪಾಯಲ್ಬೆನ್​ ಮನೋಜ್‌ಕುಮಾರ್ ಕುಕ್ರಾಣಿ ಎಂಬುವರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ.

ಪಾಯಲ್ ಕುಕ್ರಾಣಿ ಯಾರು: ಮೂಲತಃ ವೈದ್ಯೆಯಾಗಿರುವ (ಅರಿವಳಿಕೆ ತಜ್ಞ) ಪಾಯಲ್ ಮನೋಜಕುಮಾರ್ ಕುಕ್ರಾಣಿ ಅವರು ಬಿಜೆಪಿ ಪಕ್ಷಕ್ಕೆ ಗಣನೀಯ ಕೊಡುಗೆ ನೀಡಿದವರು. ಇವರ ತಂದೆ ಮನೋಜಕುಮಾರ ರೋಗುಮಲ್ ಕುಕ್ರಾಣಿ ಹಲವು ವರ್ಷಗಳಿಂದ ಬಿಜೆಪಿ ಮತ್ತು ಸಂಘ ಪರಿವಾರದ ಸಕ್ರಿಯ ಸದಸ್ಯರಾಗಿದ್ದಾರೆ.

ಡಿಸೆಂಬರ್ 18, 1992 ರಂದು ಜನಿಸಿದ ಪಾಯಲ್ ಕುಕ್ರಾಣಿ, ಮೂಲತಃ ಕುಬೇರನಗರ ಪಾಟಿಯಾದ ಸಿಂಧಿ ಮೂಲದವರು. ಇದೇ ಫೆಬ್ರವರಿಯಲ್ಲಿ ಅವರು ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಅನಿಲ್ ಚೌಹಾಣ್ ಎಂಬುವರನ್ನು ವಿವಾಹವಾಗುವ ಹಸೆಮಣೆ ಏರಿದ್ದಾರೆ. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪಾಯಲ್, ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇದರ ಜೊತೆಗೆ ನರೋಡಾ ಕ್ಷೇತ್ರದಲ್ಲಿ ಉಚಿತ ವೈದ್ಯಕೀಯ ಸೇವೆಯನ್ನು ನೀಡುತ್ತಿರುವುದು ಅವರ ಸಾಮಾಜಿಕ ಕೆಲಸಗಳಿಗೆ ಮಗದೊಂದು ಕನ್ನಡಿ.

ಬಿಜೆಪಿಯಲ್ಲಿ ಪಾಯಲ್ ತಂದೆಯ ಪಾತ್ರ: ಮನೋಜ್ ಕುಮಾರ್ ಕುಕ್ರಾಣಿ ಅವರು ದೇಶ ವಿಭಜನೆಯಾದ ವೇಳೆ ಭಾರತಕ್ಕೆ ಬಂದ ಸಿಂಧಿ ಸಮುದಾಯದವರು. 1980 ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿಕೊಂಡ ಅವರು ಹಲವು ಸಾಮಾಜಿಕ ಸೇವೆಯನ್ನು ಮಾಡಿಕೊಂಡು ಬಂದವರು.

The Sindhi Samaj objected to Payal Kukrani nomination for the Naroda assembly seat for what reason
ಪಾಯಲ್ಬೆನ್​ ಮನೋಜ್‌ಕುಮಾರ್ ಕುಕ್ರಾಣಿ

1985 ರಲ್ಲಿ ಯುವ ಅಧ್ಯಕ್ಷ, 1987 ರಲ್ಲಿ ಉಪಾಧ್ಯಕ್ಷ, 1991 ರಲ್ಲಿ ನಗರ ಖಜಾಂಚಿ, 1992 ರಲ್ಲಿ ವಾರ್ಡ್ ಅಧ್ಯಕ್ಷ, 1994 ರಲ್ಲಿ ನರೋಡಾದ ಜನರಲ್ ಮಿನಿಸ್ಟರ್, 1998 ರಲ್ಲಿ ನರೋಡಾ ಮಂಡಲ ಅಧ್ಯಕ್ಷ ನಂತರ ಸಾಯಿಪುರ ವಾರ್ಡ್ ಅಧ್ಯಕ್ಷ, ಸಿಂಧಿ ಪಂಚಾಯತ್ ಅಧ್ಯಕ್ಷ ಆ ಬಳಿಕ ನರೋಡಾ ವಿಧಾನಸಭಾ ಕ್ಷೇತ್ರದ ಸಿಂಧಿ ಸಮಾಜದ ನಾಯಕರಾಗಿ ಹೊರಹೊಮ್ಮಿದರು.

ಗೋದ್ರಾ ಹಗರಣದಿಂದ ಮುಕ್ತಿ: ತಳಮಟ್ಟದ ಹುದ್ದೆಯಿಂದಯಿಂದ ಬಂದ ಅವರು ಸಂಘಟನೆಗಳೊಂದಿಗೆ ಸಕ್ರಿಯವಾಗಿ ತೊಡಗಿಕೊಳ್ಳುವ ಮೂಲಕ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದವರು. ಗೋದ್ರಾ ಹಗರಣದ ನಂತರ ಪಾಟಿಯಾ ಪ್ರಕರಣದಲ್ಲಿ ಮನೋಜ್ ಕುಮಾರ್ ಕುಕ್ರಾಣಿ ಪ್ರಸ್ತುತ ಜಾಮೀನಿನ ಮೇಲೆ ಮುಕ್ತರಾಗಿದ್ದು ಗಮನಾರ್ಹ.

ಇವರ ಸೇವೆ ಪರಿಗಣಿಸಿ ಅವರ ಪುತ್ರಿ ಪಾಯಲ್ ಕುಕ್ರಾಣಿಗೆ ಈ ಸಾರಿ ಟಿಕೆಟ್ ನೀಡಲಾಗಿದೆ ಎಂಬ ಮಾಹಿತಿ ಇದೆ. ತಾಯಿ ರೇಷ್ಮಾ ಮನೋಜಕುಮಾರ್ ಕುಕ್ರಾಣಿ ಅಹಮದಾಬಾದ್ ಕಾರ್ಪೊರೇಷನ್‌ನಲ್ಲಿ ಬಿಜೆಪಿ ಕೌನ್ಸಿಲರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ಬಾರಿ ಟಿಕೆಟ್ ನೀಡಿದೆ.

The Sindhi Samaj objected to Payal Kukrani nomination for the Naroda assembly seat for what reason
ಪಾಯಲ್ ಅವರ ವಿವಾಹ ಆಮಂತ್ರಣ ಪತ್ರಿಕೆ

ಟಿಕೆಟ್​ ನೀಡಲು ವಿರೋಧ: ಪಾಯಲ್ ಸಿಂಧಿ ಸಮಾಜದ ಹೊರಗೆ ವಿವಾಹವಾಗಿದ್ದಾರೆ. ಹಾಗಾಗಿ ಅವರಿಗೆ ನರೋಡಾದಿಂದ ಟಿಕೆಟ್​ ನೀಡದಂತೆ ಸಿಂಧಿ ಸಮುದಾಯದಿಂದ ವಿರೋಧ ವ್ಯಕ್ತವಾಗಿದೆ. ಪ್ರತಿಭಟನೆ ನಡೆಸುತ್ತಿರುವ ಸಮುದಾಯ, ಇವರ ಹಿನ್ನೆಲೆಯನ್ನು ಬಯಲಿಗೆ ಎಳೆಯಲಾಗುವುದು. ಒದಗಿಸಲಾದ ಅಭ್ಯರ್ಥಿಯ ಬಯೋಡೇಟಾದಲ್ಲಿ ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದಿದೆ.

2017ರಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಬಲರಾಮ್ ತವಾನಿ ಅವರನ್ನು ಇಳಿಸಲಾಗಿತ್ತು. ಕಾಂಗ್ರೆಸ್​ನಿಂದ ತಿವಾರಿ ಓಂಪ್ರಕಾಶ್ ದರೋಗಪ್ರಸಾದ್ ಅವರನ್ನು ಇಳಿಸಲಾಗಿತ್ತು. ಬಲರಾಮ್ ತವಣಿ 60,142 ಮತಗಳನ್ನು ಪಡೆದು ಮೇಲುಗೈ ಸಾಧಿಸಿದ್ದಾರೆ.

2022ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಗೆ ಮತದಾನದ ಪ್ರಮಾಣವು ಚುನಾವಣಾ ಆಯೋಗದ ಕೈ ಸೇರಿದೆ. ಈ ಕ್ಷೇತ್ರದಲ್ಲಿ 156379 ಪುರುಷ ಮತದಾರರು, 139663 ಮಹಿಳಾ ಮತದಾರರು ಮತ್ತು 33 ತೃತೀಯಲಿಂಗಿ ಮತಗಳು ಸೇರಿದಂತೆ 296075 ನೋಂದಾಯಿತ ಮತದಾರರಿದ್ದಾರೆ.

ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ: ಬಿಜೆಪಿಯಿಂದ ನಾಲ್ವರು ವೈದ್ಯರು ಸೇರಿ 14 ಮಹಿಳೆಯರಿಗೆ ಟಿಕೆಟ್


Last Updated :Nov 10, 2022, 10:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.