ETV Bharat / bharat

ಹೈದರಾಬಾದ್​​ ಕಂಟೋನ್ಮೆಂಟ್​ನ ಮಿಲ್ಟ್ರಿ ಪ್ರಾಧಿಕಾರಕ್ಕೆ ನೀರು, ವಿದ್ಯುತ್ ಸ್ಥಗಿತಗೊಳಿಸುತ್ತೇವೆ : ತೆಲಂಗಾಣ ಸಚಿವ ಕೆಟಿಆರ್

author img

By

Published : Mar 13, 2022, 11:41 AM IST

Telangana Minister KTR warns to cut water, power supply to military authorities in Hyderabad
ಹೈದರಾಬಾದ್​​ ಕಂಟೋನ್ಮೆಂಟ್​ನ ಮಿಲಿಟರಿ ಪ್ರಾಧಿಕಾರಕ್ಕೆ ನೀರು, ವಿದ್ಯುತ್ ಸ್ಥಗಿತಗೊಳಿಸುತ್ತೇವೆ: ತೆಲಂಗಾಣ ಸಚಿವ ಕೆಟಿಆರ್

ಸಿಕಂದರಾಬಾದ್ ಕ್ಲಬ್‌ನ ಪಕ್ಕದ ರಸ್ತೆಯಾದ ಕಂಟೋನ್ಮೆಂಟ್‌ನ ಅಧಿಕಾರಿಗಳು ರಸ್ತೆಗಳನ್ನು ಮುಚ್ಚುವ ಮೂಲಕ ಪಕ್ಕದಲ್ಲಿರುವ ಸಫಿಲ್‌ಗುಡಾ ನಿವಾಸಿಗಳಿಗೆ ಅನಾನುಕೂಲವಾಗುತ್ತಿದೆ..

ಹೈದರಾಬಾದ್, ತೆಲಂಗಾಣ : ಹೈದರಾಬಾದ್​ ಕಂಟೋನ್ಮೆಂಟ್​ನಲ್ಲಿರುವ ಮಿಲಿಟರಿ ಅಧಿಕಾರಿಗಳು ತಮಗೆ ಬಯಸಿದಾಗ ರಸ್ತೆಗಳನ್ನು ಮುಚ್ಚುವುದು ನ್ಯಾಯಸಮ್ಮತವಲ್ಲ ಎಂದಿರುವ ತೆಲಂಗಾಣದ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಮತ್ತು ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿಆರ್ ರಾವ್, ಕಂಟೋನ್ಮೆಂಟ್​ಗೆ ವಿದ್ಯುತ್ ಮತ್ತು ನೀರಿನ ಪೂರೈಕೆ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಶನಿವಾರ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಕೆಟಿಆರ್, ತಾವು ಬಯಸಿದಾಗ ರಸ್ತೆಯನ್ನು ಮುಚ್ಚುವ ಕಂಟೋನ್ಮೆಂಟ್ ಅಧಿಕಾರಿಗಳ ಕ್ರಮದಿಂದ ಸಾಕಷ್ಟು ಮಂದಿ ತೊಂದರೆಗೆ ಒಳಗಾಗಿದ್ದಾರೆ. ಈ ರೀತಿಯಾಗಿ ಮುಂದುವರೆದರೆ, ನಾವು ಕಂಟೋನ್ಮೆಂಟ್​ಗೆ ವಿದ್ಯುತ್ ಮತ್ತು ನೀರು ಪೂರೈಕೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದಿದ್ದಾರೆ.

ಹೈದರಾಬಾದ್​ನ ನಾಲಾ ಅಭಿವೃದ್ಧಿ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಸಿಕಂದರಾಬಾದ್ ಕ್ಲಬ್‌ನ ಪಕ್ಕದ ರಸ್ತೆಯಾದ ಕಂಟೋನ್ಮೆಂಟ್‌ನ ಅಧಿಕಾರಿಗಳು ರಸ್ತೆಗಳನ್ನು ಮುಚ್ಚುವ ಮೂಲಕ ಪಕ್ಕದಲ್ಲಿರುವ ಸಫಿಲ್‌ಗುಡಾ ನಿವಾಸಿಗಳಿಗೆ ಅನಾನುಕೂಲವಾಗುತ್ತಿದೆ ಎಂದು ಕೆಟಿಆರ್ ಹೇಳಿದ್ದಾರೆ.

ಇದನ್ನೂ ಓದಿ: ಕೆಮಿಕಲ್​​ ಅಂಗಡಿಗಳಿಗೆ ಬೆಂಕಿ ಹಚ್ಚಿ ಮೆಡಿಕಲ್ ವಿದ್ಯಾರ್ಥಿಗಳಿಂದ ಕಲ್ಲು ತೂರಾಟ : 10 ಮಂದಿಗೆ ಗಾಯ

2021ರಲ್ಲೇ ಕೆಟಿಆರ್ ಕಂಟೋನ್ಮೆಂಟ್ ಅಧಿಕಾರಿಗಳು ರಸ್ತೆಯನ್ನು ಮುಚ್ಚುವುದನ್ನು ಆಕ್ಷೇಪಾರ್ಹ ಮತ್ತು ಕಾನೂನುಬಾಹಿರ ಎಂದಿದ್ದರು. ಈ ವೇಳೆ ಪ್ರತಿಪಕ್ಷವಾದ ಬಿಜೆಪಿ ಕೆಟಿಆರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಇದರ ಜೊತೆಗೆ ಕೆಟಿಆರ್​ ಮಿಲ್ಟ್ರಿಗೆ ಬೆದರಿಕೆ ಹಾಕುತ್ತಿದ್ದಾರೆ. ಹೈದರಾಬಾದ್‌ನಿಂದ ಭಾರತೀಯ ಸೇನೆಯ ನೆಲೆಯನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.