ETV Bharat / bharat

ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ: ಯಾವುದೇ ಘರ್ಷಣೆ ನಡೆದಿಲ್ಲ ಎಂದ ತಮಿಳುನಾಡು ಡಿಜಿಪಿ

author img

By

Published : Mar 2, 2023, 9:03 PM IST

tamil-nadu-dpg-on-alleged-assault-on-bihar-labourers
ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ, ಯಾವುದೇ ಘರ್ಷಣೆಯು ನಡೆದಿಲ್ಲ: ತಮಿಳುನಾಡು ಡಿಜಿಪಿ

ಕಾರ್ಮಿಕರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸುಳ್ಳು - ವಿಡಿಯೋಗಳನ್ನು ಹರಡುವವರ ವಿರುದ್ಧ ಕ್ರಮ - ಕಳವಳ ವ್ಯಕ್ತಪಡಿಸಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್.

ಚೆನ್ನೈ (ತಮಿಳುನಾಡು): ಬಿಹಾರದ ಕಾರ್ಮಿಕರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋಗಳು ಸುಳ್ಳು ಮತ್ತು ವಿಡಿಯೋಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಡಿಜಿಪಿ ಶೈಲೇಂದ್ರ ಬಾಬು ಗುರುವಾರ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆಯ ನಡೆಯುತ್ತಿದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಡಿಜಿಪಿ ಶೈಲೇಂದ್ರ ಬಾಬು,"ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸುಳ್ಳು ಮತ್ತು ಕಿಡಿಗೇಡಿತನದ ವಿಡಿಯೋಗಳನ್ನು ಬಿಹಾರದಲ್ಲಿ ಪೋಸ್ಟ್ ಮಾಡಿದ್ದಾರೆ. ಇಬ್ಬರು ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸುಳ್ಳು ಮತ್ತು ಈ ಘಟನೆಗಳು ಬಹಳ ಹಿಂದೆ ನಡೆದಿವೆ. ವಿಡಿಯೋದಲ್ಲಿರುವಂತೆ ಸ್ಥಳೀಯರು ಮತ್ತು ಕಾರ್ಮಿಕರ ನಡುವೆ ಯಾವುದೇ ಘರ್ಷಣೆಯೂ ನಡೆದಿಲ್ಲ’’ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಎಲ್ಲವನ್ನೂ ತಿರುಚಿ ಬಿಹಾರದ ಕಾರ್ಮಿಕರ ಮೇಲೆ ದಾಳಿ ಮಾಡಿದಂತೆ ತೋರಿಸಲಾಗಿದೆ. ಆದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದರು. ಇದುವರೆಗೆ, ತಮಿಳುನಾಡಿನಲ್ಲಿ ಸ್ಥಳೀಯರು ಮತ್ತು ವಲಸೆ ಕಾರ್ಮಿಕರ ನಡುವೆ ಗುಂಪು ಘರ್ಷಣೆ ಉಂಟಾಗಿದೆ ಎಂದು ಎರಡು ಘಟನೆಗಳು ವರದಿ ಆಗಿದೆ. ಜನವರಿ 14 ರಂದು ತಿರುಪ್ಪೂರದ ಗಾರ್ಮೆಂಟ್ ಫ್ಯಾಕ್ಟರಿ ಸ್ಥಳೀಯರು ಮತ್ತು ವಲಸೆ ಕಾರ್ಮಿಕರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಸಣ್ಣ ವಿಷಯಕ್ಕೆ ಆರಂಭವಾದ ಜಗಳ ನಂತರ ತೀವ್ರ ವಿಕೋಪಕ್ಕೆ ತೆರಳಿ ಎರಡು ಗುಂಪುಗಳ ನಡುವೆ ಮಾರಮಾರಿ ನಡೆದಿತ್ತು.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದರು. ಮತ್ತೊಂದು ಘಟನೆ ಫೆ.14ರಂದು ಕೊಯಮತ್ತೂರಿನ ಖಾಸಗಿ ಕಾಲೇಜು ಕ್ಯಾಂಟೀನ್‌ನಲ್ಲಿ ನಡೆದಿತ್ತು. ಆಹಾರ ಬಡಿಸುವ ವಿಷಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಮತ್ತು ವಲಸೆ ಕಾರ್ಮಿಕರ ನಡುವೆ ಜಗಳ ಸಂಭವಿಸಿದೆ. ಆದರೆ, ಪ್ರಕರಣ ದಾಖಲಿಸಿಕೊಳ್ಳದೇ ರಾಜಿ ಸಂಧಾನ ಮಾಡಿಕೊಂಡು ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: ಈ ಮಹಾನಗರದಲ್ಲಿ 10 ಲಕ್ಷ ದಾಟಿದ ಏರ್​ಟೆಲ್ 5G ಬಳಕೆದಾರರ ಸಂಖ್ಯೆ

ಕಳವಳ ವ್ಯಕ್ತಪಡಿಸಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಕಾರ್ಮಿಕರ ಮೇಲೆ ಹಲ್ಲೆ ಬಗ್ಗೆ ಟ್ವಿಟರ್​​ನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ''ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿರುವ ಬಿಹಾರದ ಕಾರ್ಮಿಕರ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಪತ್ರಿಕೆಗಳ ಮೂಲಕ ತಿಳಿದಿದೆ. ತಮಿಳುನಾಡು ಸರ್ಕಾರದ ಅಧಿಕಾರಿಗಳೊಂದಿಗೆ ಮಾತನಾಡಿ ಅಲ್ಲಿ ವಾಸಿಸುವ ಬಿಹಾರದ ಕಾರ್ಮಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾನು ಬಿಹಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದೇನೆ’’ ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಬಾರಾ ಹತ್ಯಾಕಾಂಡ: 31 ವರ್ಷದ ಬಳಿಕ ಆರೋಪಿ ಕಿರಾನಿ ಯಾದವ್​ಗೆ​ ಜೀವಾವಧಿ ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.