ETV Bharat / bharat

ಈ ಮಹಾನಗರದಲ್ಲಿ 10 ಲಕ್ಷ ದಾಟಿದ ಏರ್​ಟೆಲ್ 5G ಬಳಕೆದಾರರ ಸಂಖ್ಯೆ

author img

By

Published : Mar 2, 2023, 7:36 PM IST

ಭಾರ್ತಿ ಏರ್‌ಟೆಲ್ 5G ಬಳಕೆದಾರರ ಸಂಖ್ಯೆ ಮುಂಬೈನಲ್ಲಿ 1 ಮಿಲಿಯನ್ ದಾಟಿದೆ. 5G ಪ್ಲಸ್ ಪ್ರಸ್ತುತ ಮುಂಬೈನ ಗೇಟ್‌ವೇ ಆಫ್ ಇಂಡಿಯಾ, ನಾರಿಮನ್ ಪಾಯಿಂಟ್, ಫಿಲ್ಮ್ ಸಿಟಿ, ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್, ಘಾಟ್‌ಕೋಪರ್ ಮುಂತಾದ ಪ್ರದೇಶಗಳಲ್ಲಿ ಲಭ್ಯವಿದೆ.

ಮುಂಬೈ: 10 ಲಕ್ಷ ದಾಟಿದ ಏರ್​ಟೆಲ್ 5G ಬಳಕೆದಾರರ ಸಂಖ್ಯೆ
Airtel surpasses 1-mn customer mark on its 5G network in Mumbai

ಮುಂಬೈ (ಮಹಾರಾಷ್ಟ್ರ): ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರ ಭಾರ್ತಿ ಏರ್‌ಟೆಲ್ ಮುಂಬೈನಲ್ಲಿ 1 ಮಿಲಿಯನ್ (10 ಲಕ್ಷ) 5G ಬಳಕೆದಾರರ ಮಾರ್ಕ್ ದಾಟಿದೆ ಎಂದು ಗುರುವಾರ ಪ್ರಕಟಿಸಿದೆ. ಅಲ್ಟ್ರಾಫಾಸ್ಟ್ ಏರ್‌ಟೆಲ್ 5G ಪ್ಲಸ್ ಅನ್ನು ಪಡೆದ ಮೊದಲ ಎಂಟು ನಗರಗಳಲ್ಲಿ ಮುಂಬೈ ಕೂಡಾ ಒಂದಾಗಿದೆ ಎಂದು ಅದು ಕಂಪನಿಯ ಪ್ರಕಟಣೆಯಲ್ಲಿ ಹೇಳಲಾಗಿದೆ. ಏರ್​ಟೆಲ್​ ಇತ್ತೀಚೆಗೆ ತನ್ನ 5G ನೆಟ್‌ವರ್ಕ್‌ನಲ್ಲಿ ಭಾರತದಾದ್ಯಂತ 10 ಮಿಲಿಯನ್ ಅನನ್ಯ ಗ್ರಾಹಕರ ಮಟ್ಟವನ್ನು ದಾಟಿದೆ. ಮಾರ್ಚ್ 2024 ರ ಅಂತ್ಯದ ವೇಳೆಗೆ ಪ್ರತಿ ಪಟ್ಟಣ ಮತ್ತು ಪ್ರಮುಖ ಗ್ರಾಮೀಣ ಪ್ರದೇಶಗಳಲ್ಲಿ 5G ಸೇವೆ ನೀಡಲು ಸಿದ್ಧವಾಗಿರುವುದಾಗಿ ಏರ್‌ಟೆಲ್ ಹೇಳಿದೆ.

ಭಾರ್ತಿ ಏರ್‌ಟೆಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಭೋರ್ ಗುಪ್ತಾ ಮಾತನಾಡಿ, 1 ಮಿಲಿಯನ್ ಮುಂಬೈಕರ್‌ ಜನ ಈಗಾಗಲೇ ಅಲ್ಟ್ರಾಫಾಸ್ಟ್ ಏರ್‌ಟೆಲ್ 5G ಪ್ಲಸ್ ಅನ್ನು ಬಳಸುತ್ತಿರುವುದು ನಿಜವಾಗಿಯೂ ಗಮನಾರ್ಹವಾಗಿದೆ. ನಾವು ನಮ್ಮ ನೆಟ್‌ವರ್ಕ್ ಅನ್ನು ನಗರದಾದ್ಯಂತ ಹೆಚ್ಚಿನ ಸ್ಥಳಗಳಿಗೆ ವಿಸ್ತರಿಸುವುದನ್ನು ಮುಂದುವರಿಸುತ್ತೇವೆ ಮತ್ತು ಹೆಚ್ಚಿನ ಗ್ರಾಹಕರಿಗೆ ಸೂಪರ್‌ಫಾಸ್ಟ್ ನೆಟ್ವರ್ಕ್ ಆನಂದಿಸಲು ಅನುವು ಮಾಡಿಕೊಡುತ್ತೇವೆ. ಹೈ- ಡೆಫಿನಿಷನ್ ವಿಡಿಯೋ ಸ್ಟ್ರೀಮಿಂಗ್, ಗೇಮಿಂಗ್, ಮಲ್ಟಿಪಲ್ ಚಾಟಿಂಗ್, ಫೋಟೋಗಳ ತ್ವರಿತ ಅಪ್‌ಲೋಡ್ ಮತ್ತು ಇನ್ನೂ ಹೆಚ್ಚಿನವು ಈಗ ಸಾಧ್ಯವಾಗಲಿದೆ ಎಂದರು.

ನಗರದ ಯಾವ- ಯಾವ ಸ್ಥಳದಲ್ಲಿ 5 ಜಿ ಸೇವೆ ಲಭ್ಯ: ಏರ್‌ಟೆಲ್ 5G ಪ್ಲಸ್ ಪ್ರಸ್ತುತ ಮುಂಬೈನ ಗೇಟ್‌ವೇ ಆಫ್ ಇಂಡಿಯಾ, ನಾರಿಮನ್ ಪಾಯಿಂಟ್, ಫಿಲ್ಮ್ ಸಿಟಿ, ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್, ಘಾಟ್‌ಕೋಪರ್ ಮತ್ತು ಅಂಧೇರಿಯ ಮುಂಬೈ ಮೆಟ್ರೋ ಜಂಕ್ಷನ್‌ಗಳು, ಛತ್ರಪತಿ ಶಿವಾಜಿ ರೈಲ್ವೇ ಟರ್ಮಿನಸ್ (CST) ಸೇರಿದಂತೆ ಹಲವಾರು ಪ್ರಮುಖ ಸ್ಥಳಗಳಲ್ಲಿ ಲೈವ್ ಆಗಿದೆ. ಕಳೆದ ಒಂದು ವರ್ಷದಲ್ಲಿ ಏರ್‌ಟೆಲ್ ತನ್ನ 5G ಸಾಮರ್ಥ್ಯವನ್ನು ಪ್ರದರ್ಶಿಸಿದೆ.

5ಜಿ ಸರಾಸರಿ ಡೌನ್ಲೋಡ್​​ ವೇಗ 115ರಷ್ಟು ಹೆಚ್ಚಳ: ದೇಶದಲ್ಲಿ 5G ನೆಟ್ವರ್ಕ್ ವಿಸ್ತರಣೆ ಆಗುತ್ತಿದ್ದಂತೆಯೇ ಕಳೆದ ವರ್ಷ ಅಕ್ಟೋಬರ್ 1 ರಂದು 5G ಪ್ರಾರಂಭವಾದಾಗಿನಿಂದ ಭಾರತದಾದ್ಯಂತ ಸರಾಸರಿ ಡೌನ್‌ಲೋಡ್ ವೇಗ ಶೇಕಡಾ 115 ರಷ್ಟು ಹೆಚ್ಚಾಗಿದೆ ಎಂದು ಬುಧವಾರ ವರದಿಗಳು ಹೇಳಿವೆ. ನೆಟ್‌ವರ್ಕ್ ಬಗ್ಗೆ ಸಮೀಕ್ಷೆ ನಡೆಸುವ ಸಂಸ್ಥೆ Ookla ಪ್ರಕಾರ, ಸರಾಸರಿ ಡೌನ್‌ಲೋಡ್ ವೇಗವು ಸೆಪ್ಟೆಂಬರ್‌ನಲ್ಲಿ 13.87 Mbps ಇದ್ದದ್ದು ಜನವರಿಯಲ್ಲಿ 29.85 Mbps ಗೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ, ಸ್ಪೀಡ್‌ಟೆಸ್ಟ್ ಗ್ಲೋಬಲ್ ಇಂಡೆಕ್ಸ್‌ನಲ್ಲಿ ಭಾರತದ ಸ್ಥಾನವು ಸೆಪ್ಟೆಂಬರ್ 2022 ರಲ್ಲಿ 118 ನೇ ಸ್ಥಾನದಿಂದ ಜನವರಿಯಲ್ಲಿ 69 ನೇ ಸ್ಥಾನಕ್ಕೆ ಏರಿಕೆಯಾಗಿದೆ. ಅಂದರೆ 49 ಸ್ಥಾನ ಸುಧಾರಿಸಿದೆ.

ರಿಲಯನ್ಸ್ ಜಿಯೋ ಹಣಕಾಸು ವರ್ಷ 2027 ರ ವೇಳೆಗೆ ಶೇ 95 ರಷ್ಟು 5G ವ್ಯಾಪ್ತಿಯನ್ನು ತಲುಪಲು ಮುಂದಿನ ಐದು ಹಣಕಾಸು ವರ್ಷಗಳಲ್ಲಿ 94,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ನಿರೀಕ್ಷೆಯಿದೆ. ಅದೇ ರೀತಿ, ಸಂಶೋಧನಾ ವರದಿಯ ಪ್ರಕಾರ, ಭಾರ್ತಿ ಏರ್‌ಟೆಲ್ ಶೇ 85 ರಷ್ಟು 5G ವ್ಯಾಪ್ತಿಯನ್ನು ತಲುಪಲು ಇದೇ ಅವಧಿಯಲ್ಲಿ 66,600 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ : ರಾಜ್ಯದ 1,121 ಹಳ್ಳಿಗಳಿಗೆ ಮೊಬೈಲ್ ನೆಟ್​ವರ್ಕೇ ಇಲ್ಲ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.