ETV Bharat / bharat

ಶ್ರದ್ಧಾ ವಾಕರ್​ ಭೀಕರ ಹತ್ಯೆ: ಸೆಷನ್ಸ್‌ ಕೋರ್ಟ್​ಗೆ ಪ್ರಕರಣ ವರ್ಗಾವಣೆ

author img

By

Published : Feb 21, 2023, 4:58 PM IST

ಸೆಷನ್​ ಕೋರ್ಟ್​ಗೆ ಶ್ರದ್ಧಾ ವಾಕರ್​ ಹತ್ಯೆ ಪ್ರಕರಣ
Shraddha Walker murder case transferred to session court

ಯುವತಿ ಶ್ರದ್ಧಾ ವಾಕರ್​​ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಚಾರ್ಜ್‌ಶೀಟ್​ ಸಲ್ಲಿಕೆಯಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಸೆಷನ್ಸ್‌​ ಕೋರ್ಟ್ ನಡೆಸಲಿದೆ.

ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್​ ಹತ್ಯೆ ಪ್ರಕರಣದ ವಿಚಾರಣೆಯನ್ನು ದೆಹಲಿಯ ಸಾಕೇತ್​ ನ್ಯಾಯಾಲಯವು ಸೆಷನ್​ ಕೋರ್ಟ್​​ಗೆ ವರ್ಗಾಯಿಸಿದೆ. ಪ್ರಿಯತಮೆಯನ್ನು ಅತ್ಯಂತ ಭೀಕರವಾಗಿ ಕೊಂದ ಪಾತಕಿ ಅಫ್ತಾಬ್​ ಅಮಿನ್​ ಪುನವಾಲಾನನ್ನು ಫೆಬ್ರವರಿ 24ರಂದು ಪ್ರಧಾನ ಜಿಲ್ಲಾ ಮತ್ತು ಸೆಷನ್​ ಕೋರ್ಟ್​ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ.

"ದಾಖಲೆಗಳ ಪರಿಶೀಲನೆ ನಡೆದಿದೆ. ಐಪಿಸಿ ಸೆಕ್ಷನ್​ 302 (ಕೊಲೆ) ಅಡಿ ವಿಚಾರಣೆಯನ್ನು ಸೆಷನ್​ ಕೋರ್ಟ್​ ಆರಂಭಿಸಲಿದೆ. ಇದಕ್ಕೂ ಮೊದಲು ಫೆಬ್ರವರಿ 24ರಂದು ಮಧ್ಯಾಹ್ನ ಪ್ರಧಾನ ಜಿಲ್ಲಾ ಮತ್ತು ಸೆಷನ್​ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರು ಪಡಿಸಲಾಗುವುದು" ಎಂದು ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಅವಿರಲ್​ ಶುಕ್ಲಾ ತಿಳಿಸಿದರು.

ವಿಚಾರಣೆಯ ವೇಳೆ ಸಿಆರ್​ಪಿಸಿ (ಕೋಡ್​ ಆಫ್​​ ಕ್ರಿಮಿನಲ್​ ಪ್ರೊಸೀಜರ್​​) ಪುಸ್ತಕ ಹಾಗೂ ಪೆನ್​ ತೆಗೆದುಕೊಂಡು ಹೋಗಲು ಅನುಮತಿ ನೀಡಬೇಕು. ಇಲ್ಲಿ ನೋಟ್​ ಮಾಡಿಕೊಳ್ಳುವ ವಿಷಯದಿಂದ ತನ್ನ ಸಮಾಲೋಚನೆಗೆ ಸಹಾಯವಾಗಲಿದೆ ಎಂದು ಪುನಾವಾಲಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ. ಈ ಹಿನ್ನೆಲೆಯಲ್ಲಿ ಸೆಷನ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಕ್ಕೂ ಮುನ್ನ ಈ ಸಂಬಂಧ ನೇರವಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಫೆ.13ರಂದು ಪುನಾವಾಲ ಚಾರ್ಜ್‌ಶೀಟ್​ನ ಸರಿಯಾದ ಸಾಫ್ಟ್​ ಕಾಪಿಯೊಂದಿಗೆ ಉನ್ನತ ಶಿಕ್ಷಣ ಮುಂದುವರೆಸಲು ಶೈಕ್ಷಣಿಕ ಸರ್ಟಿಫಿಕೇಟ್​ಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದ. ಜೊತೆಗೆ ಸಹ ಜೀವನ ನಡೆಸುತ್ತಿದ್ದ ಶ್ರದ್ದಾ ವಾಕರ್​ ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಚಾರ್ಜ್‌ಶೀಟ್​ ಸಲ್ಲಿಸಿದ್ದರು. ಜನವರಿ 24ರಂದು 6 ಸಾವಿರ ಪುಟಗಳ ಚಾರ್ಜ್‌ಶೀಟ್​ ಅನ್ನು ಪೊಲೀಸರು ಸಲ್ಲಿಸಿದ್ದರು. ಇದಾದ ಬಳಿಕ ನ್ಯಾಯಾಲಯ 14 ದಿನಗಳ ಕಾಲ ಕಸ್ಟಡಿಯನ್ನು ವಿಸ್ತರಿಸಿತ್ತು. ಈ 6 ಸಾವಿರ ಪುಟಗಳ ಚಾರ್ಜ್‌ಶೀಟ್​ನಲ್ಲಿ ಫಾರೆನ್ಸಿಕ್​ ಮತ್ತು ಎಲೆಕ್ಟ್ರಾನಿಕ್​ನ ಸುಮಾರು 100​ ಸಾಕ್ಷ್ಯಾಧಾರಗಳನ್ನು ಬಳಲಾಗಿತ್ತು.

ತಿಹಾರ್​ ಜೈಲಿನಲ್ಲಿದ್ದ ಪೂನವಾಲ ಉನ್ನತ ಶಿಕ್ಷಣವನ್ನು ಪಡೆಯುವ ಸಂಬಂಧ ಅರ್ಜಿ ಸಲ್ಲಿಸಿದ್ದ. ಇದಕ್ಕಾಗಿ ತಮ್ಮ ಶೈಕ್ಷಣಿಕ ದಾಖಲೆಗಳನ್ನು ನೀಡುವ ಜೊತೆಗೆ ಪೆನ್​, ಪೆನ್ಸಿಲ್​ ಮತ್ತು ನೋಟ್​ಬುಕ್​ ನೀಡಬೇಕು. ಎರಡನೇ ಅರ್ಜಿಯಲ್ಲಿ ಸರಿಯಾದ ಚಾರ್ಚ್‌ಶೀಟ್​ ಕಾಪಿ ನೀಡುವಂತೆ ಮನವಿ ಸಲ್ಲಿಸಿದ್ದಾನೆ.

ಚಾರ್ಜ್‌ಶೀಟ್​​ ಕಾಪಿ ಅಥವಾ ಪೆನ್​ ಡ್ರೈವ್​ ಸರಿಯಾಗಿಲ್ಲ. ಇದನ್ನು ಸರಿಯಾಗಿ ಓದಲು ಸಾಧ್ಯವಾಗುತ್ತಿಲ್ಲ ಎಂದು ಅಫ್ತಾಬ್​ ಪರ ವಕೀಲರು ತಿಳಿಸಿದ್ದರು. ಪೆನ್​ ಡ್ರೈವ್​ ಓವರ್​ ಲೋಡ್​ ಆಗಿದ್ದು, ಅದನ್ನು ಅಡ್ವಾನ್ಸ್ಡ್​ ಕಂಪ್ಯೂಟರ್​ಗೆ ಅದು ಬೆಂಬಲಿಸುತ್ತಿಲ್ಲ. ಜೊತೆಗೆ ವಿಡಿಯೋ ಕೂಡ ಸರಿಯಾಗಿಲ್ಲ ಎಂದು ತಿಳಿಸಿದ್ದ. ಚಾರ್ಜ್​ ಶೀಟ್​ನಲ್ಲಿ ದಾಖಲಾಗಿರುವ ವಿಡಿಯೋ ಫೂ ಟೆಜ್​ ಅನ್ನು ಸರಿಯಾಗಿ ನೀಡುವಂತೆ ಮತ್ತು ಸಾಫ್ಟ್​ ಕಾಪಿಯನ್ನು ಮುಚ್ಚಿದ ಪತ್ರದಲ್ಲಿ ನೀಡುವಂತೆ ಆತ ಮನವಿ ಮಾಡಿದ್ದ. ಇದಕ್ಕೂ ಮೊದಲು ಆತ ಜೈಲಿನಲ್ಲಿ ಚಳಿಯಾಗುತ್ತಿದ್ದ ಬಟ್ಟೆ ಮತ್ತು ಕಾನೂನಿನ ಪುಸ್ತಕ ಕೊಳ್ಳುವುದಕ್ಕೆ ತಮ್ಮ ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ ಬಳಕೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದನು.

ಇದನ್ನೂ ಓದಿ: ಶ್ರದ್ಧಾ ವಾಕರ್​ ಹತ್ಯೆ ಕೇಸ್​: ದೇಹ 35 ತುಂಡು ಮಾಡಿ, ಮೂಳೆ ಗ್ರೈಂಡರ್​ನಲ್ಲಿ ಪುಡಿ ಮಾಡಿದ್ದನಂತೆ ಅಫ್ತಾಬ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.