ETV Bharat / bharat

Parle-G ತಿನ್ನಲು ನಿರಾಕರಿಸಿದರೆ ಭವಿಷ್ಯದಲ್ಲಿ ಆಪತ್ತು..! ಬಿಸ್ಕತ್​ಗೆ ಹೆಚ್ಚಿದ ಡಿಮ್ಯಾಂಡ್​.. ಅದೇನ್​ ವಿಷ್ಯಾ ಗೊತ್ತಾ..?

author img

By

Published : Oct 2, 2021, 1:31 PM IST

ಪಾರ್ಲೆ-ಜಿ ಬಿಸ್ಕತ್​ ಖರೀದಿಗೆ ಮುಗಿಬಿದ್ದ ಬಿಹಾರದ ಜನರು
ಪಾರ್ಲೆ-ಜಿ ಬಿಸ್ಕತ್​ ಖರೀದಿಗೆ ಮುಗಿಬಿದ್ದ ಬಿಹಾರದ ಜನರು

ಗಂಡು ಮಕ್ಕಳು ಪಾರ್ಲೆ-ಜಿ ಬಿಸ್ಕತ್ತುಗಳನ್ನು ತಿನ್ನಲು ನಿರಾಕರಿಸಿದರೆ, ಭವಿಷ್ಯದಲ್ಲಿ ಅಹಿತಕರ ಘಟನೆಗಳನ್ನು ಎದುರಿಸಬಹುದು ಎಂಬ ವದಂತಿ ಬಿಹಾರದಲ್ಲಿ ಹರಡಿದ್ದು, ಜನರು ಪಾರ್ಲೆ-ಜಿ ಬಿಸ್ಕತ್​ ಕೊಳ್ಳಲು ಮುಗಿಬೀಳುತ್ತಿದ್ದಾರೆ.

ಪಾಟ್ನಾ (ಬಿಹಾರ): ವಿಚಿತ್ರ ವದಂತಿಯೊಂದು ಬಿಹಾರದಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಇದರ ಪರಿಣಾಮ ಜಿಯುತಿಯಾ ಹಬ್ಬದ ಈ ವೇಳಯಲ್ಲಿ ಪಾರ್ಲೆ-ಜಿ ಬಿಸ್ಕತ್ತುಗಳನ್ನು ಕೊಳ್ಳಲು ಜನರು ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ.

ಪ್ರತಿವರ್ಷ ರಾಜ್ಯದಲ್ಲಿ ಆಚರಿಸುವ ಜಿಯುತಿಯಾ ಹಬ್ಬದಲ್ಲಿ ತಾಯಂದಿರು ತಮ್ಮ ಮಕ್ಕಳ ದೀರ್ಘ, ಆರೋಗ್ಯಕರ ಮತ್ತು ಸಮೃದ್ಧ ಜೀವನಕ್ಕಾಗಿ 24 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. ಆದರೆ, ಈ ಬಾರಿ ಹೊಸದೊಂದು ವದಂತಿ ಹರಡಿದೆ. ಹಬ್ಬದ ವೇಳೆ ತಾಯಂದಿರು ತಮ್ಮ ಮಕ್ಕಳು, ಅದರಲ್ಲಿಯೂ ಗಂಡು ಮಕ್ಕಳಿಗೆ ಪಾರ್ಲೆ-ಜಿ ಬಿಸ್ಕತ್ತುಗಳನ್ನು ತಿನ್ನಿಸಬೇಕು. ಅವರು ತಿನ್ನಲು ನಿರಾಕರಿಸಿದರೆ, ಭವಿಷ್ಯದಲ್ಲಿ ಅಹಿತಕರ ಘಟನೆಗಳನ್ನು ಎದುರಿಸಬಹುದು ಎಂಬ ವದಂತಿ ಹರಡಿದೆ.

ಪಾರ್ಲೆ-ಜಿ ಬಿಸ್ಕತ್​ ಖರೀದಿಗೆ ಮುಗಿಬಿದ್ದ ಬಿಹಾರದ ಜನರು
ಪಾರ್ಲೆ-ಜಿ ಬಿಸ್ಕತ್​ ಖರೀದಿಗೆ ಮುಗಿಬಿದ್ದ ಬಿಹಾರದ ಜನರು

ಸೀತಾಮರ್ಹಿ, ಮೋತಿಹಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈ ವದಂತಿ ಹೇಗೆ ಹರಡಿತೋ ಗೊತ್ತಿಲ್ಲ, ಆದರೆ ಜನರು ಮಾತ್ರ ಅಂಗಡಿಗಳ ಮುಂದೆ ಪಾರ್ಲೆ-ಜಿ ಬಿಸ್ಕತ್ತುಗಳನ್ನು ಖರೀದಿಸಲು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬಂದಿವೆ. ಇನ್ನು ತಿಳಿದ ಕೆಲವರು ಕಾಳ ಸಂತೆಯಲ್ಲಿಯೂ ಪಾರ್ಲೆ-ಜಿ ಬಿಸ್ಕತ್​ ಮಾರಾಟ ಮಾಡುತ್ತಿದ್ದಾರೆ. 5 ರೂ. ಬಿಸ್ಕತ್​ ಪ್ಯಾಕೆಟ್​ ಅನ್ನು 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಸೀತಾಮರ್ಹಿ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಹರ್ ಕಿಶೋರ್ ರೈ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.