ETV Bharat / bharat

ನಿವೃತ್ತಿ ಬಗ್ಗೆ ಸಿಂಧು ಟ್ವೀಟ್​... ತಂದೆ ನೀಡಿರುವ ಸ್ಪಷ್ಟನೆ ಹೀಗಿದೆ!

author img

By

Published : Nov 2, 2020, 6:03 PM IST

ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧು ನಿವೃತ್ತಿಯಾಗುತ್ತಾರೆ ಎಂಬ ಟ್ವೀಟ್​ ವಿಚಾರಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ್​​ ಸಿಂಧು ಅವರ ತಂದೆ ಜತೆ ಮಾತನಾಡಿದ್ದು, ಈ ವೇಳೆ ಅವರು ನೀಡಿರುವ ಸ್ಪಷ್ಟನೆ ಹೀಗಿದೆ.

PV Sindhu
PV Sindhu

ಹೈದರಾಬಾದ್​: ವಿಶ್ವ ಚಾಂಪಿಯನ್​ ಪಿ.ವಿ.ಸಿಂಧು ಮಾಡಿರುವ ಗೊಂದಲದ ಟ್ವೀಟ್​ಗೆ ಸಂಬಂಧಿಸಿದಂತೆ ಅವರ ತಂದೆಯನ್ನ ಕೇಳಿದಾಗ, ಎಲ್ಲರೂ ಸಿಂಧು ಮಾಡಿರುವ ಟ್ವೀಟ್​​ ಸಂಪೂರ್ಣವಾಗಿ ಓದುವಂತೆ ಮನವಿ ಮಾಡಿದ್ದಾರೆ.

'ನಾನು ನಿವೃತ್ತಿಯಾಗುತ್ತಿದ್ದೇನೆ'... ಗೊಂದಲ ಹುಟ್ಟಿಸಿದ ಪಿವಿ ಸಿಂಧು ದಿಢೀರ್​ ಟ್ವೀಟ್​!

ಕಳೆದ ಕೆಲ ತಿಂಗಳಿಂದ ಜಗತ್ತಿನಲ್ಲಿ ಅಶಾಂತಿ, ಕೆಟ್ಟ ಪರಿಸ್ಥಿತಿ ಉದ್ಭವವಾಗಿತ್ತು. ಆದರೆ ಇದೀಗ ಆ ಭಯದಿಂದ ನಾನು ನಿವೃತ್ತಿಯಾಗುತ್ತಿದ್ದೇನೆ ಎಂದಿದ್ದಾರೆ. ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​ ನಮಗೆ ಅನೇಕ ಪಾಠ ಕಲಿಸಿದೆ. ಹೀಗಾಗಿ ಮನೆಯಲ್ಲೇ ಜೀವನ ಕಳೆಯುವಂತಾಗಿದೆ ಎಂದು ಸಿಂದು ಟ್ವೀಟ್​ ಮಾಡಿದ್ದರು. ಇದರಿಂದ ಅನೇಕ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದರು.

ಇದೀಗ ಇದರ ಬಗ್ಗೆ ಅವರ ತಂದೆ ಪಿ.ವಿ.ರಮಣ್​​ ಸ್ಪಷ್ಟನೆ ನೀಡಿದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಸಿಂಧು ಮಾಡಿರುವ ಟ್ವೀಟ್​ ಸಂಪೂರ್ಣವಾಗಿ ಓದುವಂತೆ ತಿಳಿಸಿದ್ದು, ಸದ್ಯ ಅವರು ಬ್ಯಾಡ್ಮಿಂಟನ್​ನಿಂದ ನಿವೃತ್ತಿ ಪಡೆದುಕೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಸಿಂಧು ಕೌಟುಂಬಿಕ ಸಮಸ್ಯೆಯಿಂದಾಗಿ ಲಂಡನ್​ಗೆ ತೆರಳಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಪಿ.ವಿ.ರಮಣ್​, ಸಿಂಧು ತನ್ನ ತರಬೇತಿಯ ಕಡೆ ಹೆಚ್ಚಿನ ಗಮನ ಹರಿಸುವ ಸಲುವಾಗಿ ಗ್ಯಾಟೋರೇಡ್ ಕ್ರೀಡಾ ವಿಜ್ಞಾನ ಸಂಸ್ಥೆಗೆ ತೆರಳಿದ್ದಾರೆ ಎಂದು ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.