ETV Bharat / bharat

ಹೈಕೋರ್ಟ್​​ ಆವರಣದಲ್ಲಿ ನ್ಯಾಯಾಧೀಶರ ಮುಂದೆ ಗಂಟಲು ಕತ್ತರಿಸಿಕೊಂಡ ಕೈದಿ!

author img

By

Published : Apr 8, 2021, 10:30 PM IST

Prisoner cut his throat
Prisoner cut his throat

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿಯೊಬ್ಬ ನ್ಯಾಯಾಧೀಶರ ಎದುರೇ ಗಂಟಲು ಕತ್ತರಿಸಿಕೊಂಡಿರುವ ಘಟನೆ ನಡೆದಿದೆ.

ಚೆನ್ನೈ: ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿಯೊಬ್ಬ ನ್ಯಾಯಾಧೀಶರ ಮುಂದೆ ಬ್ಲೇಡ್​ನಿಂದ ಕುತ್ತಿಗೆ ಕತ್ತರಿಸಿಕೊಂಡಿರುವ ಘಟನೆ ನಡೆದಿದ್ದು, ಇದರಿಂದ ಕೆಲ ಸಮಯ ನ್ಯಾಯಾಲಯದಲ್ಲಿ ಕೋಲಾಹಲ ಉಂಟಾಯಿತು.

Prisoner cut his throat
ಗಂಟಲು ಕತ್ತರಿಸಿಕೊಂಡ ಕೈದಿ

ಜೈಲರ್​ ತನ್ನನ್ನು ಹಿಂಸಿಸುತ್ತಿದ್ದಾನೆಂದು ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ ಪಾಂಡಿಯನ್​ ಆರೋಪಿಸಿ ಈ ರೀತಿಯಾಗಿ ನಡೆದುಕೊಂಡಿದ್ದಾನೆ. ವ್ಯಾಸರ್​ಪಾಡಿ ಪ್ರದೇಶದ ಪಾಂಡಿಯನ್​ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇದರ ಮಧ್ಯೆ 4ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್​ ಮುಂದೆ ಮತ್ತೊಂದು ಪ್ರಕರಣದ ವಿಚಾರಣೆಗೆ ಹಾಜರಾಗಿದ್ದನು. ಈ ವೇಳೆ ನ್ಯಾಯಾಧೀಶರಾದ ರವಿ ಎದುರೇ ಬ್ಲೇಡ್​​ನಿಂದ ಗಂಟಲು ಕತ್ತರಿಸಿಕೊಂಡಿದ್ದಾನೆ. ಜತೆಗೆ ಅಧಿಕಾರಿಗಳು ತನ್ನತ್ತ ಹಿಂಸಿಸುತ್ತಿದ್ದಾರೆ ಎಂದು ತಿಳಿಸಿದ್ದಾನೆ.

ಘಟನೆ ನಡೆಯುತ್ತಿದ್ದಂತೆ ಪೊಲೀಸರು ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಇದರ ವಿಚಾರಣೆ ನಡೆಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.