ETV Bharat / bharat

ಕಾಶ್ಮೀರದ 47 ವಿಧಾನಸಭಾ ಕ್ಷೇತ್ರಗಳಲ್ಲಿ 5,403 ಮತಗಟ್ಟೆ ಸ್ಥಾಪಿಸಲು ಪ್ರಸ್ತಾಪ

author img

By

Published : Jul 15, 2022, 6:58 PM IST

ಕಾಶ್ಮೀರದ 47 ವಿಧಾನಸಭಾ ಕ್ಷೇತ್ರಗಳಲ್ಲಿ 5403 ಮತಗಟ್ಟೆಗಳನ್ನು ಸ್ಥಾಪಿಸಲು ಪ್ರಸ್ತಾಪ
ಕಾಶ್ಮೀರದ 47 ವಿಧಾನಸಭಾ ಕ್ಷೇತ್ರಗಳಲ್ಲಿ 5403 ಮತಗಟ್ಟೆಗಳನ್ನು ಸ್ಥಾಪಿಸಲು ಪ್ರಸ್ತಾಪ

ಕಾಶ್ಮೀರ ಕಣಿವೆಯ 47 ವಿಧಾನಸಭಾ ಕ್ಷೇತ್ರಗಳಲ್ಲಿ 5,403 ಮತಗಟ್ಟೆಗಳನ್ನು ಸ್ಥಾಪಿಸಲು ಪ್ರಸ್ತಾಪ ಸಲ್ಲಿಸಲಾಗಿದೆ .

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯ ನಂತರ ಚುನಾವಣಾ ಅಧಿಕಾರಿಗಳು ಕಾಶ್ಮೀರ ಕಣಿವೆಯ 47 ವಿಧಾನಸಭಾ ಕ್ಷೇತ್ರಗಳಲ್ಲಿ 5,403 ಮತಗಟ್ಟೆಗಳನ್ನು ಸ್ಥಾಪಿಸಲು ಮತ್ತು ಈ ವರ್ಷದ ಅಕ್ಟೋಬರ್ 31ರ ಮೊದಲು ಪ್ರಕ್ರಿಯೆ ಪೂರ್ಣಗೊಳಿಸಲು ಮುಂದಾಗಿದ್ದಾರೆ.

ಕೇಂದ್ರಗಳು ಮತ್ತು ಕರಡು ಪ್ರಸ್ತಾವನೆಗಳನ್ನು ಸಾರ್ವಜನಿಕ ಡೊಮೈನ್‌ನಲ್ಲಿ ಇರಿಸಿದ್ದು, ರಾಜಕೀಯ ಪಕ್ಷಗಳು ಮತ್ತು ಮತದಾರರಿಂದ ಆಕ್ಷೇಪಣೆ/ಸಲಹೆಗಳನ್ನು ಕೋರಿದ್ದಾರೆ.

ಶ್ರೀನಗರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 913 ಮತಗಟ್ಟೆಗಳನ್ನು ಸ್ಥಾಪಿಸಲು ಸೂಚಿಸಿದ್ದು, ಇವುಗಳಲ್ಲಿ 109 ಹಜರತ್‌ಬಾಲ್‌ನಲ್ಲಿ, 129 ಖನ್ಯಾರ್‌ನಲ್ಲಿ, 127 ಹಬ್ಬಾ ಕಡಲ್‌ನಲ್ಲಿ, 91 ಚಾನ್‌ಪೋರಾದಲ್ಲಿ, 135 ಲಾಲ್ ಚೌಕ್‌ನಲ್ಲಿ, 144 ಝದಿಬಲ್‌ನಲ್ಲಿ, 69 ಈದ್-ಗಾಹ್‌ನಲ್ಲಿ ಮತ್ತು 109 ಸೆಂಟ್ರಲ್ ಶಾಲ್ತೆಂಗ್‌ನಲ್ಲಿ ಸ್ಥಾಪನೆಯಾಗಲಿದೆ.

ಪಕ್ಕದ ಬುದ್ಗಾಮ್ ಜಿಲ್ಲೆಯು 602 ಮತಗಟ್ಟೆಗಳನ್ನು ಹೊಂದಿದ್ದು, ಬುದ್ಗಾಮ್ ವಿಧಾನಸಭಾ ಕ್ಷೇತ್ರದಲ್ಲಿ 148, ಬೀರ್ವಾದಲ್ಲಿ 116, ಖಾನ್ಸಾಹಿಬ್‌ನಲ್ಲಿ 114, ಚರಾರ್- ಇ - ಶರೀಫ್‌ನಲ್ಲಿ 123 ಮತ್ತು ಚದೂರ ಕ್ಷೇತ್ರದಲ್ಲಿ 101 ಮತಗಟ್ಟೆಗಳಿರಲಿವೆ.ಅದೇ ರೀತಿ, ಸೆಂಟ್ರಲ್ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ 260 ಮತಗಟ್ಟೆಗಳನ್ನು ಪ್ರಸ್ತಾಪಿಸಲಾಗಿದ್ದು, ಕಂಗನ್‌ನಲ್ಲಿ 105 ಮತ್ತು ಗಂದರ್‌ಬಾಲ್‌ನಲ್ಲಿ 155 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.

ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ 300 ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಬಂಡಿಪೋರಾದಲ್ಲಿ 136, ಸೋನಾವರಿಯಲ್ಲಿ 135 ಮತ್ತು ಗುರೇಜ್ ಕ್ಷೇತ್ರದಲ್ಲಿ 29 ಮತಗಟ್ಟೆ ಇರಲಿವೆ.

ಡಿಇಒ ಬಾರಾಮುಲ್ಲಾದಲ್ಲಿ 899 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಸೋಪೋರ್‌ನಲ್ಲಿ 128, ರಫಿಯಾಬಾದ್‌ನಲ್ಲಿ 143, ಉರಿಯಲ್ಲಿ 147, ಬಾರಾಮುಲ್ಲಾದಲ್ಲಿ 156, ಗುಲ್ಮಾರ್ಗ್‌ನಲ್ಲಿ 114, ವಾಗೂರಾ - ಕ್ರೀರಿಯಲ್ಲಿ 94 ಮತ್ತು ಪಟ್ಟಣದಲ್ಲಿ 117 ಮತಗಟ್ಟೆ ಸ್ಥಾಪನೆ ಆಗಲಿವೆ.

ಕುಪ್ವಾರ ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ 578 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಹೊಸದಾಗಿ ರಚಿಸಲಾದ ಕ್ಷೇತ್ರವಾದ ಟ್ರೆಹ್ಗಾಮ್‌ನಲ್ಲಿ 84 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ, ಕುಪ್ವಾರದಲ್ಲಿ 88, ಕರ್ನಾದಲ್ಲಿ 74, ಲೋಲಾಬ್‌ನಲ್ಲಿ 90, ಲಂಗೇಟ್‌ನಲ್ಲಿ 132 ಮತ್ತು ಹಂದ್ವಾರದಲ್ಲಿ 110 ಮತಗಟ್ಟೆಗಳಿಗೆ ಸೂಚನೆ ನೀಡಲಾಗಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ 459 ಮತಗಟ್ಟೆಗಳನ್ನು ಪ್ರಸ್ತಾಪಿಸಲಾಗಿದ್ದು, ಪಂಪೋರ್‌ನಲ್ಲಿ 115, ತ್ರಾಲ್‌ನಲ್ಲಿ 106, ಪುಲ್ವಾಮಾದಲ್ಲಿ 106 ಮತ್ತು ರಾಜ್‌ಪೋರಾದಲ್ಲಿ 123 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಪಕ್ಕದ ಶೋಪಿಯಾನ್ ಜಿಲ್ಲೆಯಲ್ಲಿ, ಶೋಪಿಯಾನ್‌ನಲ್ಲಿ 120 ಮತ್ತು ಜೈನ್‌ಪೋರಾದಲ್ಲಿ 125 ಮತಗಟ್ಟೆಗಳೊಂದಿಗೆ ಎರಡು ಕ್ಷೇತ್ರಗಳಲ್ಲಿ 245 ಮತಗಟ್ಟೆಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.

ಪ್ರಸ್ತಾವನೆಯ ಪ್ರಕಾರ, ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ 798 ಮತಗಟ್ಟೆಗಳನ್ನು ಪ್ರಸ್ತಾಪಿಸಲಾಗಿದ್ದು, ದೂರುನಲ್ಲಿ 146, ಕೋಕರ್‌ನಾಗ್ (ಎಸ್‌ಟಿ)ಯಲ್ಲಿ 111, ಅನಂತನಾಗ್ ಪಶ್ಚಿಮದಲ್ಲಿ 138, ಅನಂತನಾಗ್‌ನಲ್ಲಿ 70, ಶ್ರೀಗುಫ್ವಾರಾ ಬಿಜ್‌ಬೆಹರಾದಲ್ಲಿ 117, ಶಾಂಗಸ್ (ಅನಂತ್ನಾಗ್) ಪೂರ್ವದಲ್ಲಿ 121 ಪಹಲ್ಗಾಮ್ನಲ್ಲಿ 95 ಮತಗಟ್ಟೆ ಸ್ಥಾಪಿಸಲಾಗುತ್ತದೆ.

ಕುಲ್ಗಾಮ್ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ 349 ಮತಗಟ್ಟೆಗಳನ್ನು ಪ್ರಸ್ತಾಪಿಸಲಾಗಿದ್ದು, ಡಿಹೆಚ್-ಪೋರಾದಲ್ಲಿ 102, ಕುಲ್ಗಾಮ್‌ನಲ್ಲಿ 127 ಮತ್ತು ದಿವ್ಸಾರ್‌ನಲ್ಲಿ 120 ಮತಗಟ್ಟೆಗಳನ್ನು ಸೃಷ್ಟಿಸಲಾಗುತ್ತದೆ.

ಇದನ್ನೂ ಓದಿ : ಜಲಪ್ರಳಯ ಸಂಭವಿಸಿ ನಾಲ್ಕು ವರ್ಷಗಳಾದರೂ ತಪ್ಪಿಲ್ಲ ಗೋಳು: ಮೊಣ್ಣಂಗೇರಿಯಲ್ಲಿ ಜನರ ಸಂಕಷ್ಟ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.