ETV Bharat / bharat

ಇಂಧನ ದರ ಸ್ಥಿರ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

author img

By

Published : Oct 20, 2022, 10:25 AM IST

ಇಂಧನ ದರ
petrol

ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ತೈಲ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ತೈಲ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ.

ದೆಹಲಿಯಲ್ಲಿ ಪೆಟ್ರೋಲ್ ದರ 96.72 ರೂ, ಡೀಸೆಲ್ ದರ 89.62 ಇದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಆಗಿದ್ದರೆ, ಡೀಸೆಲ್ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್‌ 102.65 ರೂಪಾಯಿ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ಕರ್ನಾಟಕದಲ್ಲಿ ತೈಲ ಬೆಲೆ ಇಂತಿದೆ:

ನಗರ ಪೆಟ್ರೋಲ್ ಡೀಸೆಲ್
ಹುಬ್ಬಳ್ಳಿ 101.65 ರೂ. 87.65 ರೂ.
ಮೈಸೂರು 101.44 ರೂ. 87.43 ರೂ.
ಶಿವಮೊಗ್ಗ 103.66 ರೂ. 89.18 ರೂ.
ದಾವಣಗೆರೆ104.16 ರೂ. (59 ಪೈಸೆ ಏರಿಕೆ) 89.73 ರೂ. (53 ಪೈಸೆ ಏರಿಕೆ)
ಮಂಗಳೂರು 101.47 ರೂ. ( 31 ಪೈಸೆ ಹೆಚ್ಚಳ) 87.43 ರೂ. ( 28 ಪೈಸೆ ಹೆಚ್ಚಳ)

ಇದನ್ನೂ ಓದಿ: ಮಡಿಕೇರಿಯಲ್ಲಿ 50 ಕಡೆ ಪೆಟ್ರೋಲ್ ಬಾಂಬ್ ಹಾಕುವ ಸಂಭಾಷಣೆ ವೈರಲ್: ನಗರಸಭಾ ಸದಸ್ಯ ಸೇರಿ ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.