ETV Bharat / bharat

ಪೆಟ್ರೋಲ್‌, ಡೀಸೆಲ್ ಬೆಲೆಯಲ್ಲಿ 40 ಪೈಸೆ ಹೆಚ್ಚಳ: 2 ವಾರದಲ್ಲಿ 12ನೇ ಬಾರಿ ಏರಿಕೆ

author img

By

Published : Apr 4, 2022, 8:42 AM IST

Fuel Rate Hike
ತೈಲ ದರ ಏರಿಕೆ

ದೇಶದಲ್ಲಿ ತೈಲ ದರಗಳು ಪ್ರತಿ ಲೀಟರ್​​ಗೆ 40 ಪೈಸೆ ಏರಿಕೆಯಾಗಿವೆ. ಕಳೆದ 14 ದಿನಗಳಲ್ಲಿ ನಡೆದ 12 ಪರಿಷ್ಕರಣೆಗಳಲ್ಲಿ ಪ್ರತಿ ಲೀಟರ್​​ಗೆ ಸುಮಾರು ₹ 8.40ರಷ್ಟು ಹೆಚ್ಚಾಗಿದೆ.

ನವದೆಹಲಿ: ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಮುಂದುವರಿದಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸೋಮವಾರ ಎರಡೂ ಇಂಧನಗಳ ದರವನ್ನು ಪ್ರತಿ ಲೀಟರ್‌ಗೆ ತಲಾ 40 ಪೈಸೆಯಷ್ಟು ಏರಿಸಿವೆ.

ಪ್ರಮುಖ ಮಹಾನಗರಗಳಲ್ಲಿ ಇಂದಿನ ದರ: ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 40 ಪೈಸೆ ಹೆಚ್ಚಾಗಿದೆ. ಇದರೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ 103.81 ರೂ ಮತ್ತು ಡೀಸೆಲ್ 95.07 ರೂ.ಗೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 118.83 ರೂ. ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 103.07 ರೂ.ಗೆ ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ಲೀಟರ್‌ಗೆ 109.34 ರೂ. ಹಾಗೂ ಡೀಸೆಲ್ ಲೀಟರ್‌ಗೆ 99.42 ರೂ.

ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 109.41 ರೂ. ಮತ್ತು ಡೀಸೆಲ್‌ ದರ 93.23 ರೂ.ಗೆ ತಲುಪಿದೆ. ಸ್ಥಳೀಯ ಮಾರಾಟ ತೆರಿಗೆ ಮತ್ತು ಸಾಗಣೆ ವೆಚ್ಚಕ್ಕೆ ಅನುಗುಣವಾಗಿ ಮಾರಾಟ ದರವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ದೇಶದ ನಾಲ್ಕು ಮಹಾನಗರಗಳನ್ನು ಹೋಲಿಸಿದರೆ, ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅತ್ಯಂತ ದುಬಾರಿಯಾಗಿದೆ. ದೆಹಲಿ ಹೊರತುಪಡಿಸಿ, ಎಲ್ಲಾ ಪ್ರಮುಖ ಮಹಾನಗರಗಳಲ್ಲಿ ಡೀಸೆಲ್ ಲೀಟರ್‌ಗೆ 100 ರೂ.ಯಿಗಿಂತ ಹೆಚ್ಚು ಮಾರಾಟವಾಗುತ್ತಿದೆ.

ಮಾ.22 ರಿಂದ ನಿರಂತರ ಏರಿಕೆ: ಮಾರ್ಚ್ 22 ರಿಂದ ಏಪ್ರಿಲ್ 4 ರವರೆಗೆ 14 ದಿನಗಳಲ್ಲಿ 12 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಸಮಯದಲ್ಲಿ, ಮಾರ್ಚ್ 24 ಮತ್ತು ಏಪ್ರಿಲ್ 01 ಹೊರತುಪಡಿಸಿ ಪ್ರತಿ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. 14 ದಿನಗಳಲ್ಲಿ ಪೆಟ್ರೋಲ್ ಬೆಲೆ 12 ಪರಿಷ್ಕರಣೆಗಳಲ್ಲಿ ಕ್ರಮವಾಗಿ 80, 80, 80, 80, 50, 30, 80, 80, 80, 80, 80 ಮತ್ತು 40 ಪೈಸೆ ಏರಿಕೆಯಾಗಿದೆ. ಈ ಮೂಲಕ ಪೆಟ್ರೋಲ್ ಬೆಲೆ ಲೀಟರ್‌ಗೆ 8 ರೂ.40 ಪೈಸೆ ಏರಿಕೆಯಾಗಿದೆ.

ಶ್ರೀನಗರದಿಂದ ಕೊಚ್ಚಿವರೆಗಿನ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ.ಗಿಂತ ಹೆಚ್ಚಿದ್ದರೆ ತಿರುವನಂತಪುರಂ, ಹೈದರಾಬಾದ್, ಭುವನೇಶ್ವರ, ರಾಯ್‌ಪುರ ಮತ್ತು ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಹಲವಾರು ನಗರಗಳಲ್ಲಿ ಡೀಸೆಲ್ ಅದಕ್ಕಿಂತ ಹೆಚ್ಚಿದೆ. ತಜ್ಞರ ಪ್ರಕಾರ, ತೈಲದ ಮೇಲಿನ ಹಣದುಬ್ಬರದ ಪ್ರಭಾವದಿಂದ ಸಾರ್ವಜನಿಕರಿಗೆ ಪರಿಹಾರ ಸಿಗುವ ನಿರೀಕ್ಷೆಯಿಲ್ಲ.

ಇದನ್ನೂ ಓದಿ: ಪೆಟ್ರೋಲ್‌, ಡೀಸೆಲ್ 80 ಪೈಸೆ ಹೆಚ್ಚಳ; ದೇಶಾದ್ಯಂತ ಇಂದಿನ ತೈಲ ದರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.