ETV Bharat / bharat

Maharashtra Politics: ಒಂದಾಗ್ತಾರಾ ಠಾಕ್ರೆ ಸಹೋದರರು?, ಶಿಂಧೆ ಪಾಳಯದಲ್ಲಿ ತಳಮಳಕ್ಕೆ ಕಾರಣವೇನು?.. ಮಹತ್ವದ ಸಭೆ ನಡೆಸಿದ​ ಪವಾರ್​

author img

By

Published : Jul 6, 2023, 5:59 PM IST

Updated : Jul 6, 2023, 6:18 PM IST

Etv Bharat
Etv Bharat

ಮಹಾರಾಷ್ಟ್ರ ರಾಜಕೀಯದಲ್ಲಿ ಅಧಿಕಾರಕ್ಕಾಗಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಇದರ ನಡುವೆ ಉದ್ಧವ್ ಠಾಕ್ರೆ ಹಾಗೂ ರಾಜ್​ ಠಾಕ್ರೆ ಸಹೋದರರು ಒಂದಾಗ್ತಾರಾ ಎಂಬ ಚರ್ಚೆ ಮುನ್ನಲೆಗೆ ಬಂದಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಸಚಿವ ಸಂಪುಟಕ್ಕೆ ಸೇರಿದ ಬಳಿಕ ಸಿಎಂ ಏಕನಾಥ್ ಶಿಂಧೆ ಗುಂಪಿನಲ್ಲಿ ತಳಮಳ ಶುರುವಾಗಿದೆ ಎಂಬ ವರದಿಗಳು ಆಗುತ್ತಿವೆ.

ಮುಂಬೈ (ಮಹರಾಷ್ಟ್ರ): ಕಳೆದ ಒಂದು ವರ್ಷದಿಂದ ಮಹಾರಾಷ್ಟ್ರ ರಾಜಕೀಯವು ಮಿಂಚಿನ ಬೆಳವಣಿಗೆಗಳು ಹಾಗೂ ನಾಟಕೀಯ ತಿರುವುಗಳು ಪಡೆದುಕೊಳ್ಳುತ್ತಿದೆ. ಶಿವಸೇನೆಯ ಏಕನಾಥ್​ ಶಿಂಧೆ ಬಂಡಾಯ ಎದ್ದು ಬಿಜೆಪಿ ಜೊತೆ ಕೈಜೋಡಿಸಿದ್ದರು. ನಂತರದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಮತ್ತು ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಏಕನಾಥ್ ಶಿಂಧೆ ಮುಖ್ಯಮಂತ್ರಿ ಹುದ್ದೆಗೇರಿದರು. ಇದೀಗ ಒಂದು ವರ್ಷದ ಬಳಿಕ ಎನ್​ಸಿಪಿ ನಾಯಕ ಅಜಿತ್ ಪವಾರ್ ಅವರು ಏಕನಾಥ್ ಶಿಂಧೆ ಮಾದರಿಯಲ್ಲೇ ಬಂಡಾಯದ ಬಾವುಟ ಹಾರಿಸಿ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಈ ಕ್ಷಿಪ್ರ ಬೆಳವಣಿಗೆ ಮಧ್ಯ ಈಗ ಮತ್ತೊಂದು ಸುದ್ದಿ ಮಹಾರಾಷ್ಟ್ರ ರಾಜಕೀಯದಲ್ಲಿ ಹರಿದಾಡುತ್ತಿದೆ.

2019ರ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ಹಾಗೂ ಶಿವಸೇನೆ ನಡುವೆ ಅಧಿಕಾರ ಹಂಚಿಕೆ ವಿಷಯವಾಗಿ ಎರಡೂ ಪಕ್ಷಗಳ ಮೈತ್ರಿ ಮುರಿದು ಬಿದ್ದಿತ್ತು. ಬಳಿಕ ಕಾಂಗ್ರೆಸ್​ ಹಾಗೂ ಎನ್​ಸಿಪಿ ಜೊತೆ ಸೇರಿ ಶಿವಸೇನೆ ಸರ್ಕಾರ ರಚನೆ ಮಾಡಿತ್ತು. ಈ ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಉದ್ಧವ್​ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಆದರೆ, ಎರಡೂವರೆ ವರ್ಷಗಳ ನಂತರ ಉದ್ಧವ್​ ಠಾಕ್ರೆ ವಿರುದ್ಧವೇ ಸಚಿವರಾಗಿದ್ದ ಏಕನಾಥ್​ ಶಿಂಧೆ 40 ಶಾಸಕರೊಂದಿಗೆ ಬಂಡಾಯ ಎದ್ದು, ಕಳೆದ ಒಂದು ವರ್ಷದಿಂದ ಬಿಜೆಪಿ ಜೊತೆಗೆ ಸರ್ಕಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಎನ್​ಸಿಪಿ ವರಿಷ್ಠ ಶರದ್​ ಪವಾರ್​ ವಿರುದ್ಧ ಅಜಿತ್ ಪವಾರ್ ಬಂಡಾಯ ಎದ್ದಿದ್ದಾರೆ. ಅವರ ಕೂಡ ಸುಮಾರು 30 ಶಾಸಕರೊಂದಿಗೆ ಸರ್ಕಾರವನ್ನು ಸೇರಿಕೊಂಡಿದ್ದಾರೆ. ಇದೀಗ ದಿಢೀರ್​ ಬೆಳವಣಿಗೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ಸಹೋದರ ರಾಜ್​ ಠಾಕ್ರೆ ನೇತೃತ್ವದ ಎಂಎನ್‌ಎಸ್‌ನ ಇಬ್ಬರು ಮುಖಂಡರು ಭೇಟಿಯಾಗಿದ್ದು, ಹೊಸ ಚರ್ಚೆಗೆ ಗ್ರಾಸವಾಗಿದೆ.

  • #WATCH | Mumbai: Former Maharashtra CM Uddhav Thackeray meets with former corporators from his faction.

    Uddhav Thackeray had invited these former corporators to Matoshree. pic.twitter.com/0iDmiaPBwz

    — ANI (@ANI) July 6, 2023 " class="align-text-top noRightClick twitterSection" data=" ">

ಇದನ್ನೂ ಓದಿ: Maharashtra politics: ಸರ್ಕಾರ ರಚಿಸಲು ಶಿವಸೇನೆ ಜೊತೆ ಹೋಗಬಹುದಾದರೆ ಬಿಜೆಪಿಯೊಂದಿಗೆ ಏಕೆ ಬೇಡ: ಡಿಸಿಎಂ ಪವಾರ್ ಪ್ರಶ್ನೆ

ಒಂದಾಗ್ತಾರಾ ಠಾಕ್ರೆ ಸಹೋದರರು?: ಉದ್ಧವ್ ಠಾಕ್ರೆ ಬಣದ ಶಿವಸೇನೆ ಸಂಸದ ಸಂಜಯ್‌ ರಾವತ್‌ ಹಾಗೂ ಎಂಎನ್‌ಎಸ್‌ ಫಿಲ್ಮ್‌ ಸೇನಾ ನಾಯಕ ಅಭಿಜಿತ್‌ ಪನ್ಸೆ ಇಬ್ಬರು ಇದ್ದಕ್ಕಿದ್ದಂತೆ ಭೇಟಿಯಾಗಿದ್ದು, ಕುತೂಹಲ ಮೂಡಿಸಿದೆ. ಈ ಸಭೆಯ ಹಿಂದೆ ಠಾಕ್ರೆ ಸಹೋದರರಿಬ್ಬರು ಒಂದಾಗುವ ಪ್ರಸ್ತಾಪವಿದೆ ಎನ್ನಲಾಗುತ್ತಿದೆ. ಅಂದರೆ, ಶಿವಸೇನೆ ಮತ್ತು ಎಂಎನ್‌ಎಸ್ ಮೈತ್ರಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ, ಸಂಸದ ಸಂಜಯ್ ರಾವುತ್ ಅವರ ಭೇಟಿಯ ಹಿಂದೆ ತಮ್ಮ ವೈಯಕ್ತಿಕ ಕಾರಣಗಳಿವೆ ಎಂದು ಅಭಿಜಿತ್ ಪನ್ಸೆ ಹೇಳಿದ್ದಾರೆ. ಆದರೂ, ಭೇಟಿಯ ನಂತರ ನಡೆದ ಘಟನೆಗಳು ಮೈತ್ರಿ ಪ್ರಸ್ತಾಪದ ಬಗ್ಗೆ ಚರ್ಚೆಗಳನ್ನು ಹೆಚ್ಚಿಸಿದೆ. ಯಾಕೆಂದರೆ, ಇಬ್ಬರ ಸಭೆಯ ನಂತರ ಸಂಜಯ್ ರಾವುತ್ ನೇರವಾಗಿ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀ ತಲುಪಿದರು. ಅಭಿಜಿತ್ ಪಾನ್ಸೆ ರಾಜ್​ ಠಾಕ್ರೆ ನಿವಾಸ ಶಿವತೀರ್ಥಕ್ಕೆ ತೆರಳಿದ್ದಾರೆ. ತಮ್ಮಿಬ್ಬರ ನಡುವೆ ನಡೆದ ಚರ್ಚೆಗಳ ಬಗ್ಗೆ ಮಾಹಿತಿ ನೀಡಲು ಇಬ್ಬರೂ ನಾಯಕರು ತಮ್ಮ-ತಮ್ಮ ನಾಯಕರ ನಿವಾಸಗಳಿಗೆ ತೆರಳುವುದೇ ಗಮನ ಸೆಳೆಯುವಂತೆ ಮಾಡಿದೆ.

ಹೀಗಾಗಿ ಈ ಬಾರಿ ಠಾಕ್ರೆ ಸಹೋದರರಿಬ್ಬರೂ ಒಂದಾಗಬಹುದು ಎನ್ನಲಾಗುತ್ತಿದೆ. ಇದರ ನಡುವೆ ಭಾನುವಾರ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ ನಂತರ ಕಾರ್ಯಕರ್ತರು ಇದೇ ಭಾವನೆ ಹೊರ ಹಾಕುತ್ತಿದ್ದಾರೆ. ಎಂಎನ್ಎಸ್ ಕಾರ್ಯಕರ್ತರು ಶಿವಸೇನಾ ಭವನದ ಪ್ರದೇಶದಲ್ಲಿ 'ಇಬ್ಬರೂ ಸಹೋದರರು ಒಂದಾಗಲಿ' ಎಂಬ ಬ್ಯಾನರ್​ ಹಾಕಿದ್ದಾರೆ. ಇಲ್ಲಿಂದಲೇ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಮತ್ತೆ ಒಂದಾಗಬೇಕೆಂಬ ಮಾತುಗಳು ಎಂದು ಕಾರ್ಯಕರ್ತರಲ್ಲಿ ಕೇಳಿ ಬರುತ್ತಿವೆ.

  • #WATCH | It is all rumours...They (NCP)should introspect on what is happening in their party, says Maharashtra CM Eknath Shinde as he rubbishes his resignation rumours and also speaks on the split in NCP. pic.twitter.com/hwY1Gr9qUW

    — ANI (@ANI) July 6, 2023 " class="align-text-top noRightClick twitterSection" data=" ">

ಶಿಂಧೆ ಪಾಳಯದಲ್ಲಿ ತಳಮಳ?: ಮತ್ತೊಂದೆಡೆ, ಎನ್‌ಸಿಪಿ ನಾಯಕ ಅಜಿತ್ ಪವಾರ್ ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಗುಂಪಿನಲ್ಲಿ ತಳಮಳ ಶುರುವಾಗಿದೆ ಎಂಬ ವರದಿಗಳು ಆಗುತ್ತಿವೆ. ಪ್ರಮುಖವಾಗಿ ಅಜಿತ್ ಪವಾರ್ ಸಿಎಂ ಆಗುವ ಆಸೆ ಇದೆ ಎಂದು ಹೇಳಿರುವುದು ಸಹ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಶಾಸಕರ ವಿರುದ್ಧದ ಅನರ್ಹತೆ ದೂರಿನ ಕುರಿತು ವಿಧಾನಸಭಾಧ್ಯಕ್ಷರ ತೀರ್ಪಿಗೆ ಕಾಯುತ್ತಿರುವ ಶಿಂಧೆ ಪಾಳಯದಲ್ಲಿ ಈ ಮಾತು ಆತಂಕಕ್ಕೆ ಕಾರಣವಾಗಿದೆ. ಶಿಂಧೆ ಅಧ್ಯಕ್ಷತೆಯಲ್ಲಿ ಬುಧವಾರ ಶಿವಸೇನೆ ಶಾಸಕರು, ಎಂಎಲ್‌ಸಿಗಳು ಮತ್ತು ಸಂಸದರು ಸಭೆ ನಡೆಸಿದ್ದಾರೆ.

ಈ ಬಗ್ಗೆ ಇಂದು ಖುದ್ದು ಏಕನಾಥ್ ಶಿಂಧೆ ಪ್ರತಿಕ್ರಿಯಿಸಿದ್ದು, ಅಜಿತ್ ಪವಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡ ಬಗ್ಗೆ ಶಿವಸೇನೆಯಲ್ಲಿ ಯಾರೂ ಅಸಮಾಧಾನ ಹೊಂದಿಲ್ಲ. ಅಲ್ಲದೇ, ನನ್ನ ಮುಖ್ಯಮಂತ್ರಿ ಕುರ್ಚಿಗೆ ಅಪಾಯವಿದೆ ಎಂಬ ವರದಿಗಳು ವಿರೋಧಿಗಳು ಹರಡಿದ ವದಂತಿ. ಅಷ್ಟೇ ಅಲ್ಲ, ನನ್ನ ಗುಂಪಿಗೆ ಸೇರಿದ ಸಚಿವ ಉದಯ್ ಸಾವಂತ್​ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳು ಸಹ ಸುಳ್ಳು ಎಂದು ಹೇಳಿದ್ದಾರೆ.

  • #WATCH | A meeting of NCP leaders is underway at the residence of party president Sharad Pawar in Delhi.

    He has called the party's National Executive meeting. pic.twitter.com/ah5KxB4aq3

    — ANI (@ANI) July 6, 2023 " class="align-text-top noRightClick twitterSection" data=" ">

ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದ ಶರದ್​ ಪವಾರ್​: ಇನ್ನೊಂದೆಡೆ, ಎನ್‌ಸಿಪಿಯಲ್ಲಿ ಬಣದ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಇಂದು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದಿದ್ದಾರೆ. ಆದರೆ, ಶರದ್ ಪವಾರ್ ಅವರು ಕರೆದಿರುವ ಈ ಕಾರ್ಯಕಾರಿ ಸಮಿತಿ ಸಭೆಗೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ ಎಂದು ಅಜಿತ್ ಪವಾರ್ ಬಣ ಹೇಳಿದೆ. ಬುಧವಾರವಷ್ಟೇ ಶರದ್ ಪವಾರ್ ಬಣ ಹಾಗೂ ಅಜಿತ್ ಪವಾರ್ ಬಣ ಪ್ರತ್ಯೇಕ ಸಭೆಯನ್ನು ನಡೆಸಿತ್ತು.

ಇದನ್ನೂ ಓದಿ: Maharashtra Politics: 4 ವರ್ಷದಲ್ಲಿ 4 ಪ್ರಮಾಣವಚನ ಸಮಾರಂಭ ಕಂಡ ಮಹಾರಾಷ್ಟ್ರ: ಒಂದೇ ವರ್ಷದಲ್ಲಿ ಶಿವಸೇನೆ, ಎನ್​ಸಿಪಿ ಇಬ್ಭಾಗ!

Last Updated :Jul 6, 2023, 6:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.