ETV Bharat / bharat

ಯುಪಿಎಸ್​ಸಿಯಿಂದ ಎನ್​ಡಿಎ ನೇಮಕಾತಿ: ಸೇನೆ ಸೇರ ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ

author img

By ETV Bharat Karnataka Team

Published : Dec 23, 2023, 2:34 PM IST

Updated : Dec 23, 2023, 4:39 PM IST

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೇಂದ್ರ ಲೋಕ ಸೇವಾ ಆಯೋಗದಿಂದ 857 ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರು: ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defense Academy - NDA) ಮತ್ತು ನೌಕಾ ಅಕಾಡೆಮಿ ಸೇರಬೇಕು ಎಂಬುದು ಅನೇಕ ಯುವ ಜನತೆಯ ಕನಸಾಗಿದೆ. ಇದೀಗ ಈ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಯುವ ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆ, ಹುದ್ದೆ ವಿವರ, ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆ ವಿವರ: ಕೇಂದ್ರ ಲೋಕ ಸೇವಾ ಆಯೋಗದಿಂದ 857 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆ ವಿವರ ಇಲ್ಲಿದೆ

  • ಎನ್​ಡಿಎ (ಸೇನೆ) - 208
  • ಎನ್​ಡಿಎ (ನೌಕಾ ಸೇನೆ) - 42
  • ಎನ್​ಡಿಎ (ವಾಯು ಸೇನೆ) (ಹಾರಾಟ) -18
  • ಎನ್​ಡಿಎ (ವಾಯು ಸೇನೆ) (ಗ್ರೌಂಡ್​ ಡ್ಯೂಟಿ) -10
  • ನೌಕಾ ಅಕಾಡೆಮಿ - 30
  • ಭಾರತೀಯ ಸೇನಾ ಅಕಾಡೆಮಿ - 100
  • ಭಾರತೀಯ ನೌಕಾ ಅಕಾಡೆಮಿ - 32
  • ವಾಯು ಸೇನಾ ಅಕಾಡೆಮಿ - 32
  • ಆಫೀಸರ್​ ಟ್ರೈನಿಂಗ್​ ಅಕಾಡೆಮಿ (ಪುರುಷ) - 275
  • ಆಫೀಸರ್​ ಟ್ರೈನಿಂಗ್​ ಅಕಾಡೆಮಿ (ಮಹಿಳಾ) -18

ವಿದ್ಯಾರ್ಹತೆ: ಎನ್​ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಭಾರತೀಯ ಸೇನಾ ಅಕಾಡೆಮಿ ಹುದ್ದೆಗೆ ಪದವಿ, ಭಾರತೀಯ ನೌಕ ಅಕಾಡೆಮಿಗೆ ಇಂಜಿನಿಯರಿಂಗ್​ ಪದವಿ, ವಾಯು ಸೇನಾ ಅಕಾಡೆಮಿಗೆ ಪದವಿ, ಇಂಜಿನಿಯರಿಂಗ್​ ಪದವಿ, ಆಫೀಸರ್​ ಟ್ರೈನಿಂಗ್​ ಅಕಾಡೆಮಿಗೆ ಪದವಿ ಪೂರ್ಣಗೊಳಿಸಿರಬೇಕು

ಅಧಿಸೂಚನೆ
ಅಧಿಸೂಚನೆ

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2 ಜುಲೈ 2005ಕ್ಕಿಂತ ಮುಂಚೆ ಮತ್ತು 1 ಜುಲೈ 2008ಕ್ಕೆ ನಂತರ ಜನಿಸಿರಬಾರದು

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಎನ್​ಡಿಎ ಮತ್ತು ನೌಕಾ ಅಕಾಡಮಿ ಪರೀಕ್ಷೆಗೆ ಪ.ಜಾ, ಪ.ಪಂ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರ ಅಭ್ಯರ್ಥಿಗಳು 100 ರೂ ಅರ್ಜಿ ಶುಲ್ಕ ಭರ್ತಿ ಮಾಡಬೇಕು.

ಕಂಬೈನ್ಡ್​​ ಡಿಫೆನ್ಸ್​ ಸರ್ವೀಸ್​ ಪರೀಕ್ಷೆಗೆ ಪ.ಜಾ, ಪ.ಪಂ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಬೌದ್ಧಿ ಮತ್ತು ವ್ಯಕ್ತಿತ್ವ ಪರೀಕ್ಷೆ, ಪೈಲಟ್​ ಆಪಟ್ಯೂಡ್​​ ಪರೀಕ್ಷೆ ಸಂದರ್ಶನ ಇರುತ್ತದೆ

ಈ ಹುದ್ದೆಗೆ ಡಿಸೆಂಬರ್​ 20ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿಸಲ್ಲಿಕೆಗೆ ಕಡೆಯ ದಿನಾಂಕ ಜನವರಿ 9 ಆಗಿದೆ. ಅರ್ಜಿ ಪರಿಷ್ಕರಣೆಗೆ ಜನವರಿ 10 ರಿಂದ 16ರವರೆಗೆ ಅವಕಾಶ ಇದೆ. ಏಪ್ರಿಲ್​ 21ರಂದು ಪರೀಕ್ಷೆ ನಡೆಯಲಿದೆ. ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು upsc.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ: ಪದವೀಧರರಿಗೆ ಅವಕಾಶ

Last Updated :Dec 23, 2023, 4:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.