ETV Bharat / bharat

23 ವಯಸ್ಸಿಗೆ ಪೊಲೀಸ್ ಸೇರಿ ಹಲವರನ್ನು ಕೊಂದಿದ್ದ ನಕ್ಸಲ್ ಸೆರೆ

author img

By

Published : Feb 22, 2021, 7:51 PM IST

ಪರ್ಸೆಗಢದಲ್ಲಿ ಪೊಲೀಸ್ ತಂಡದ ಮೇಲೆ ದಾಳಿ ಮಾಡಿ, ಓರ್ವ ಸಿಬ್ಬಂದಿ ಹತ್ಯೆ ಮಾಡಿದ್ದ ಹಾಗೂ ಹಲವಾರ ಸಾರ್ವಜನಿಕರ ಹತ್ಯೆಗೆ ಕಾರಣನಾಗಿದ್ದ ನಕ್ಸಲ್​ನನ್ನು ಪೊಲೀಸರು ಬಂಧಿಸಿದ್ದಾರೆ.

Naxal part of fatal attack on police team held in Gadchiroli
23 ವಯಸ್ಸಿಗೆ ಪೊಲೀಸ್ ಸೇರಿ ಹಲವರನ್ನು ಕೊಂದಿದ್ದ ನಕ್ಸಲ್ ಸೆರೆ

ಗಡಚಿರೋಲಿ(ಮಹಾರಾಷ್ಟ್ರ): ಪೊಲೀಸ್ ತಂಡಗಳ ಮೇಲೆ ದಾಳಿ ಮಾಡುತ್ತಿದ್ದ ಹಾಗೂ ಕೆಲವು ಗ್ರಾಮಸ್ಥರ ಕೊಲೆಯಲ್ಲಿ ಭಾಗಿಯಾಗಿದ್ದ ಓರ್ವ ನಕ್ಸಲೈಟ್​ನನ್ನು ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯ ಜಿಮಲ್​ಗಟ್ಟ ಅರಣ್ಯ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಗುಡ್ಡುರಾಮ್ ಕಿಡಿಯಾಮಿ(23) ಬಂಧಿತ ನಕ್ಸಲೈಟ್ ಆಗಿದ್ದು, ಛತ್ತೀಸ್​ಗಢದ ಬಿಜಾಪುರ ಮೂಲದವನಾಗಿದ್ದಾನೆ. ಮುಕ್ಕವೆಲ್ಲಿ ಆರ್​ಪಿಸಿ ಮಿಲಿಷಿಯಾದ ಸದಸ್ಯನಾಗಿರುವ ಈತ 2017ರಿಂದ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದನು.

ಇದನ್ನೂ ಓದಿ: ಗಣರಾಜ್ಯೋತ್ಸವ ದಿನ ರೆಡ್​ ಫೋರ್ಟ್ ಮೇಲೆ ಧ್ವಜ ಹಾರಿಸಿದ ಜಸ್ಪ್ರೀತ್​ ಸಿಂಗ್​ ಅರೆಸ್ಟ್​!

ಇದರ ಜೊತೆಗೆ ಗರ್ತುಲ್ ಅರಣ್ಯದಲ್ಲಿ 15 ದಿನಗಳ ಕಾಲ ಶಸ್ತ್ರಾಸ್ತ್ರ ಬಳಕೆಯ ತರಬೇತಿ ಪಡೆದಿದ್ದನು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಗಡಚಿರೋಲಿ ಪೊಲೀಸ್​ನ ವಿಭಾಗವಾದ ಸಿ-60 ಕಮಾಂಡೋಗಳು ಈತನನ್ನು ಬಂಧಿಸಿದ್ದಾರೆ.

ಗ್ರಾಮಗಳ ಮೇಲೆ ದಾಳಿ ಮಾಡಿ, ಸಾರ್ವಜನಿಕರನ್ನು ಕೊಲ್ಲುತ್ತಿದ್ದದ್ದು, ಮಾತ್ರವಲ್ಲದೇ ಪರ್ಸೆಗಢದಲ್ಲಿ ಪೊಲೀಸ್ ಟೀಂನ ಮೇಲೆ ದಾಳಿ ಮಾಡಿ, ಓರ್ವ ಸಿಬ್ಬಂದಿ ಹತ್ಯೆಯ ಮಾಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.