ETV Bharat / bharat

ನಕಲಿ ನೋಟು ದಂಧೆ ಭೇದಿಸಿದ ಪೊಲೀಸರು: 7 ಕೋಟಿ ರೂಪಾಯಿ ಫೇಕ್​ ಕರೆನ್ಸಿ ವಶಕ್ಕೆ

author img

By

Published : Jan 26, 2022, 9:41 PM IST

Mumbai crime branch seizes fake Indian currency: ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನ ವಶಪಡಿಸಿಕೊಳ್ಳುವಲ್ಲಿ ಮಹಾರಾಷ್ಟ್ರ ಕ್ರೈಂ ಬ್ರಾಂಚ್​​ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣ ಸಂಬಂಧ ಏಳು ಮಂದಿಯನ್ನು ಬಂಧಿಸಿದ್ದಾರೆ.

Mumbai crime branch seizes fake Indian currency
Mumbai crime branch seizes fake Indian currency

ಮುಂಬೈ(ಮಹಾರಾಷ್ಟ್ರ): ನಕಲಿ ನೋಟು ದಂಧೆ ಭೇದಿಸಿರುವ ಮುಂಬೈ ಪೊಲೀಸರು 2 ಸಾವಿರ ರೂಪಾಯಿ ಮುಖಬೆಲೆಯ 7 ಕೋಟಿ ರೂ. ಮೌಲ್ಯದ ಫೇಕ್​​ ನೋಟು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಏಳು ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ನಕಲಿ ನೋಟು ದಂಧೆ ಭೇದಿಸಿದ ಮುಂಬೈ ಪೊಲೀಸರು

ಮುಂಬೈ ಕ್ರೈಂ ಬ್ರಾಂಚ್​​ ಪೊಲೀಸರು ಈ ಮಹತ್ವದ ಕಾರ್ಯಾಚರಣೆ ಮಾಡಿದ್ದು, ನಕಲಿ ನೋಟು ದಂಧೆ ಬಯಲಿಗೆಳೆದಿದ್ದಾರೆ. ಬಂಧಿತ ಆರೋಪಿಗಳಿಂದ ಲ್ಯಾಪ್​ಟಾಪ್​, ಏಳು ಮೊಬೈಲ್ ಫೋನ್​, ಒಂದು ಕಾರು ಮತ್ತು ಅನೇಕ ಸಿಮ್ ಕಾರ್ಡ್ ವಶಕ್ಕೆ ಪಡೆದುಕೊಂಡಿದ್ದಾರೆ.

  • Mumbai Police Crime Branch arrested 7 persons with fake Indian currency notes of 2000 denominations having a face value of Rs 7 crores. The accused have been sent to police custody till Jan 31 by a court: DCP Sangram Nishandar pic.twitter.com/5lm6qcaZ0H

    — ANI (@ANI) January 26, 2022 " class="align-text-top noRightClick twitterSection" data=" ">

ಇದನ್ನೂ ಓದಿರಿ: ಗಣರಾಜ್ಯೋತ್ಸದಂದೇ ಶೋಪಿಯಾನ್​​ನಲ್ಲಿ ಎನ್​ಕೌಂಟರ್​- ಇಬ್ಬರು ಉಗ್ರರ ಬಂಧನ

ಈ ನಕಲಿ ನೋಟು ಮುಂಬೈಗೆ ತೆಗೆದುಕೊಂಡು ಹೋಗಿ, ಇತರೆ ಗ್ಯಾಂಗ್​ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ನಂತರ ಮಾರುಕಟ್ಟೆಗೆ ತೆಗೆದುಕೊಂಡು ಬಂದು, ಅಸಲಿ ನೋಟುಗಳೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು. ನಕಲಿ ನೋಟ್ ದಂಧೆ ನಡೆಸುತ್ತಿದ್ದ ಗ್ಯಾಂಗ್ ಬಂಧನ ಮಾಡಿರುವ ಪೊಲೀಸರು ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜನವರಿ 31ರವರೆಗೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಡಿಸಿಪಿ ಸಂಗ್ರಾಮ್​ ತಿಳಿಸಿದ್ದಾರೆ.

ಜಾಹೀರಾತು:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.