ETV Bharat / bharat

ಎಲ್ಲ ಮಹಿಳೆಯರಿಗೆ ಗರ್ಭಪಾತದ ಹಕ್ಕಿದೆ, ವೈವಾಹಿಕ ಅತ್ಯಾಚಾರವೂ ಅಪರಾಧ: ಸುಪ್ರೀಂ ಕೋರ್ಟ್

author img

By

Published : Sep 29, 2022, 12:32 PM IST

Updated : Sep 29, 2022, 2:25 PM IST

Marital Rape gets legal recognition  Marital Rape gets legal recognition as SC  Supreme court reviews MTP Act  ದೇಶದ ಎಲ್ಲಾ ಮಹಿಳೆಯರಿಗೆ ಗರ್ಭಪಾತದ ಹಕ್ಕಿದೆ  ವೈವಾಹಿಕ ಅತ್ಯಾಚಾರವೂ ಅಪರಾಧ  ಸುಪ್ರೀಂ ಕೋರ್ಟ್ ಆದೇಶ  ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತ  ವೈದ್ಯಕೀಯ ಮುಕ್ತಾಯದ ನಿಯಮ  ಸುಪ್ರೀಂ ಗರ್ಭಾವಸ್ಥೆಯ ನಿಯಮ
ದೇಶದ ಎಲ್ಲಾ ಮಹಿಳೆಯರಿಗೆ ಗರ್ಭಪಾತದ ಹಕ್ಕಿದೆ

ಎಲ್ಲಾ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಗರ್ಭಪಾತದ ಉದ್ದೇಶಗಳಿಗಾಗಿ ವೈದ್ಯಕೀಯ ಗರ್ಭಪಾತ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ವೈವಾಹಿಕ ಅತ್ಯಾಚಾರವನ್ನು ಸಹ ಅಪರಾಧವೆಂದು ಪರಿಗಣಿಸಲಾಗುವುದು ಎಂದು ಗುರುವಾರ ತಿಳಿಸಿದೆ.

ನವದೆಹಲಿ: ದೇಶದ ಎಲ್ಲ ಮಹಿಳೆಯರಿಗೆ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತ ಮಾಡುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವಿನ ಗರ್ಭಪಾತದ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಭಾರತದಲ್ಲಿ ಅವಿವಾಹಿತ ಮಹಿಳೆಯರಿಗೂ ಎಂಟಿಪಿ ಕಾಯ್ದೆಯಡಿ ಗರ್ಭಪಾತ ಮಾಡುವ ಹಕ್ಕಿದೆ. ಭಾರತದ ಎಲ್ಲಾ ಮಹಿಳೆಯರಿಗೆ ಆಯ್ಕೆ ಮಾಡುವ ಹಕ್ಕಿದೆ. ಅಷ್ಟೇ ಅಲ್ಲ, ಗರ್ಭಪಾತದ ಉದ್ದೇಶಗಳಿಗಾಗಿ ವೈದ್ಯಕೀಯ ಗರ್ಭಪಾತ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ವೈವಾಹಿಕ ಅತ್ಯಾಚಾರವನ್ನು ಸಹ ಅಪರಾಧವೆಂದು ಪರಿಗಣಿಸಲಾಗುವುದು ಅಂತಾ ಸುಪ್ರೀಂ ಕೋರ್ಟ್ ಹೇಳಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ಅರ್ಥವೇನೆಂದರೆ ಈಗ ಅವಿವಾಹಿತ ಮಹಿಳೆಯರೂ 24 ವಾರಗಳವರೆಗೆ ಗರ್ಭಪಾತ ಮಾಡುವ ಹಕ್ಕನ್ನು ಪಡೆದಿದ್ದಾರೆ. ಸಾಮಾನ್ಯ ಸಂದರ್ಭಗಳಲ್ಲಿ 20 ವಾರಗಳಿಗಿಂತ ಹೆಚ್ಚು ಮತ್ತು 24 ವಾರಗಳಿಗಿಂತ ಕಡಿಮೆ ಅವಧಿಯ ಗರ್ಭಪಾತದ ಹಕ್ಕು ಇದುವರೆಗೆ ವಿವಾಹಿತ ಮಹಿಳೆಯರಿಗೆ ಮಾತ್ರ ಇತ್ತು. ಭಾರತದಲ್ಲಿ ಗರ್ಭಪಾತ ಕಾನೂನಿನ ಅಡಿಯಲ್ಲಿ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಸುಪ್ರೀಂ ತಿಳಿಸಿದೆ.

ಒಂಟಿ ಅಥವಾ ಅವಿವಾಹಿತ ಗರ್ಭಿಣಿಯರು ಗರ್ಭಪಾತದಿಂದ 20-24 ವಾರಗಳ ನಡುವೆ ಗರ್ಭಪಾತ ಮಾಡುವುದನ್ನು ನಿಷೇಧಿಸುವುದು, ಅಂತಹ ಪರಿಸ್ಥಿತಿಯಲ್ಲಿ ವಿವಾಹಿತ ಮಹಿಳೆಯರಿಗೆ ಅವಕಾಶ ನೀಡುವುದು ಸಂವಿಧಾನದ 14 ನೇ ಪರಿಚ್ಛೇದದ ಮನೋಭಾವವನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಓದಿ: ಗರ್ಭಪಾತ ಕಾಯ್ದೆ ವ್ಯಾಪ್ತಿ ವಿಸ್ತರಣೆ: ಅವಿವಾಹಿತೆಯ ಗರ್ಭಪಾತಕ್ಕೆ 'ಸುಪ್ರೀಂ' ಅನುಮತಿ

Last Updated :Sep 29, 2022, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.