ETV Bharat / bharat

ಬರ್ತ್​ಡೇ ಬಳಿಕ ಬೆಲ್ಟ್​ನಿಂದ ಪರಸ್ಪರ ಹೊಡೆದುಕೊಂಡ ಉದ್ಯೋಗಿಗಳು.. ಸರ್ಕಾರಿ ಆಸ್ಪತ್ರೆಯ ವಿಡಿಯೋ ವೈರಲ್​

author img

By

Published : Aug 8, 2022, 9:44 AM IST

Dr Shyama Prasad Mukherjee Civil Hospital  Civil Hospital Uttar Pradesh video viral  Employee birthday video viral  Etv Bharat Karnataka news  Etv Bharat Kannada news  ಬರ್ತ್​ಡೇ ಬಳಿಕ ಬೆಲ್ಟ್​ನಿಂದ ಪರಸ್ಪರ ಹೊಡೆದುಕೊಂಡ ಉದ್ಯೋಗಿಗಳು  ಸರ್ಕಾರಿ ಆಸ್ಪತ್ರೆಯ ವಿಡಿಯೋ ವೈರಲ್​ ಜನ್ಮದಿನ ಆಚರಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಜನ್ಮದಿನ ಆಚರಣೆ  ಉತ್ತರಪ್ರದೇಶದ ಲಖನೌ ಸರ್ಕಾರಿ ಆಸ್ಪತ್ರೆ ಸುದ್ದಿ  ಡಾ ಶ್ಯಾಮ ಪ್ರಸಾದ್ ಮುಖರ್ಜಿ ಸರ್ಕಾರಿ ಆಸ್ಪತ್ರೆ
ಸರ್ಕಾರಿ ಆಸ್ಪತ್ರೆಯ ವಿಡಿಯೋ ವೈರಲ್​

ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಜನ್ಮದಿನ ಆಚರಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಬರ್ತ್​ಡೇ ಆದ ಬಳಿಕ ಉದ್ಯೋಗಿಗಳು ಬೆಲ್ಟ್​ನಿಂದ ಹೊಡೆದುಕೊಳ್ಳುತ್ತಿರುವುದು ಕಂಡು ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ನಿರ್ದೇಶಕರು ಹೇಳಿದ್ದಾರೆ.

ಲಖನೌ(ಉತ್ತರಪ್ರದೇಶ): ಹಜರತ್‌ಗಂಜ್‌ನ ಡಾ ಶ್ಯಾಮ ಪ್ರಸಾದ್ ಮುಖರ್ಜಿ ಸರ್ಕಾರಿ ಆಸ್ಪತ್ರೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಖತ್​ ವೈರಲ್ ಆಗುತ್ತಿದೆ. ಇದರಲ್ಲಿ ಆಸ್ಪತ್ರೆಯ ಉದ್ಯೋಗಿಯೊಬ್ಬರ (Employee birthday video viral) ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಎಲ್ಲ ಪುರುಷ ಉದ್ಯೋಗಿಗಳು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸರ್ಕಾರಿ ಆಸ್ಪತ್ರೆಯ ವಿಡಿಯೋ ವೈರಲ್​

ಹುಟ್ಟುಹಬ್ಬದ ದಿನವಾದ ಬರ್ತ್​ಡೇ ಬಾಯ್​ಗೆ ಸಹೋದ್ಯಗಿಗಳು ಕೇಕ್ ಹಚ್ಚಿ ಸಂಭ್ರಮಿಸುತ್ತಿದ್ದರು. ಈ ಸಂದರ್ಭದಲ್ಲಿ, ಫಾರ್ಮಸಿ ಇಂಟರ್ನ್‌ಗಳು ಕೇಕ್ ಕತ್ತರಿಸಿದ ನಂತರ ಬೆಲ್ಟ್‌ಗಳಿಂದ ಪರಸ್ಪರ ಹೊಡೆದುಕೊಳ್ಳುವುದು ಕಂಡು ಬರುತ್ತದೆ. ಸರ್ಕಾರಿ ಆಸ್ಪತ್ರೆಯ ಉದ್ಯೋಗಿಗಳ ಜನ್ಮದಿನ ಆಚರಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ಆಸ್ಪತ್ರೆಯ ನಿರ್ದೇಶಕ ಡಾ.ಆನಂದ್ ಓಜಾನ್ ಮಾತನಾಡಿ, ಭಾನುವಾರ ಸಿವಿಲ್ ಆಸ್ಪತ್ರೆಯ ಆವರಣದಲ್ಲಿ ಪರಸ್ಪರ ಬೆಲ್ಟ್‌ನಿಂದ ಹೊಡೆದುಕೊಳ್ಳುತ್ತಿರುವ ವಿಡಿಯೋ ಹೊರಬಿದ್ದಿದೆ. ಇದರಲ್ಲಿ ಆಸ್ಪತ್ರೆ ಸಿಬ್ಬಂದಿ ರಾತ್ರಿ ಪಾರ್ಟಿ ಮಾಡುತ್ತಿರುವುದು ಕಂಡು ಬರುತ್ತಿದೆ. ಆಸ್ಪತ್ರೆಯಲ್ಲಿ ಇರುವ ಗಾರ್ಡ್‌ಗಳಿಂದ ಹಿಡಿದು ತುರ್ತು ಮತ್ತು ಒಪಿಡಿ ಸಿಬ್ಬಂದಿಯವರೆಗೂ ಈ ವಿಡಿಯೋದಲ್ಲಿರುವುದು ಕಂಡು ಬಂದಿದೆ ಎಂದರು.

ಹುಟ್ಟುಹಬ್ಬದ ಕೇಕ್ ಕತ್ತರಿಸಿದ ನಂತರ ಇಂಟರ್ನ್​ ಉದ್ಯೋಗಿಗಳು ಪರಸ್ಪರ ಬೆಲ್ಟ್‌ಗಳಿಂದ ಹೊಡೆದುಕೊಂಡಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಆಸ್ಪತ್ರೆಯ ಒಪಿಡಿಯಲ್ಲಿ ಈ ಪಾರ್ಟಿ ನಡೆಯುತ್ತಿತ್ತು. ಇದು ಗಂಭೀರ ವಿಚಾರ. ಈ ಪ್ರಕರಣದಲ್ಲಿ ತಪ್ಪಿತಸ್ಥ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸೋಮವಾರ, ವಿಡಿಯೋದಲ್ಲಿ ಕಂಡುಬರುವ ಎಲ್ಲ ಇಂಟರ್ನ್ ಉದ್ಯೋಗಿಗಳಿಂದ ಸ್ಪಷ್ಟೀಕರಣವನ್ನು ಕೇಳಲಾಗುತ್ತದೆ ಎಂದು ಆಸ್ಪತ್ರೆಯ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ.

ಓದಿ: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ: ಜಿಲ್ಲಾಸ್ಪತ್ರೆಯನ್ನೇ ಮೇಲ್ದರ್ಜೆಗೇರಿಸಲು ಮುಂದಾದ ಸರ್ಕಾರ


ETV Bharat Logo

Copyright © 2024 Ushodaya Enterprises Pvt. Ltd., All Rights Reserved.