ETV Bharat / bharat

ಖರ್ಗೆ 50 ವರ್ಷಗಳ ಚುನಾವಣಾ ರಾಜಕೀಯದ ಕುರಿತ ಪುಸ್ತಕ ಬಿಡುಗಡೆ: 'ನಿರ್ಣಾಯಕ ಘಟ್ಟದಲ್ಲಿ ಅವರು ಅಧ್ಯಕ್ಷರಾಗಿದ್ದಾರೆ' - ಸೋನಿಯಾ

author img

By ETV Bharat Karnataka Team

Published : Nov 29, 2023, 8:47 PM IST

Etv Bharat
Etv Bharat

Kharge best suited as Congress chief - Sonia Gandhi: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ 50 ವರ್ಷಗಳ ಚುನಾವಣಾ ರಾಜಕೀಯದ ಕುರಿತ ಅಭಿನಂದನಾ ಗ್ರಂಥವನ್ನು ಪಕ್ಷದ ನಾಯಕಿ ಸೋನಿಯಾ ಗಾಂಧಿ ಲೋಕಾರ್ಪಣೆ ಮಾಡಿದರು.

ನವದೆಹಲಿ: ಸಾಂವಿಧಾನಿಕ ಮತ್ತು ಸಾಂಸ್ಥಿಕ ಮೌಲ್ಯಗಳ ಹೊರತಾಗಿಯೂ ಸ್ವಾತಂತ್ರ್ಯದ ನಂತರ ಭಾರತ ಸಾಧಿಸಿದ್ದ ಎಲ್ಲ ಸಂಸ್ಥೆಗಳು, ವ್ಯವಸ್ಥೆಗಳು ಮತ್ತು ತತ್ವಗಳನ್ನು ಅಧಿಕಾರದಲ್ಲಿರುವವರು ಬುಡಮೇಲು ಮಾಡುತ್ತಿರುವ ನಿರ್ಣಾಯಕ ಘಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.

  • CPP Chairperson Smt. Sonia Gandhi ji launches a felicitation volume honouring Congress President Shri @kharge's 50 years in electoral politics.

    Eminent guests, including authors and leaders of various political parties, also graced the event.

    📍Jawahar Bhawan, New Delhi pic.twitter.com/iHPNkqe1vx

    — Congress (@INCIndia) November 29, 2023 " class="align-text-top noRightClick twitterSection" data=" ">

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ 50 ವರ್ಷಗಳ ಚುನಾವಣಾ ರಾಜಕೀಯದ ಕುರಿತ ''ಮಲ್ಲಿಕಾರ್ಜುನ ಖರ್ಗೆ: ಸಹಾನುಭೂತಿ, ನ್ಯಾಯ ಮತ್ತು ಅಂತರ್ಗತ ಅಭಿವೃದ್ಧಿಯೊಂದಿಗೆ ರಾಜಕೀಯ ತೊಡಗುವಿಕೆ'' ('Mallikarjun Kharge: Political Engagement with Compassion, Justice, and Inclusive Development) ಎಂಬ ಅಭಿನಂದನಾ ಗ್ರಂಥವನ್ನು ಬುಧವಾರ ಬಿಡುಗಡೆಗೊಳಿಸಿ ಸೋನಿಯಾ ಗಾಂಧಿ ಮಾತನಾಡಿದರು. ಖರ್ಗೆ ಅವರು ಅನೇಕ ಜವಾಬ್ದಾರಿಗಳನ್ನು ಹಂಚಿಕೊಂಡಿದ್ದಾರೆ. ಪ್ರಬಲ ಸಂಘಟನಾ ನಾಯಕರಾಗಿ ಅವರು ಪಕ್ಷದಲ್ಲಿ ವಿಶ್ವಾಸ ಹೊಂದಿದ್ದಾರೆ. ಭಾರತದ ಈ ಐತಿಹಾಸಿಕ ಸಂಘರ್ಷದಲ್ಲಿ ಕಾಂಗ್ರೆಸ್​ ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ಅವರು ಪ್ರತಿಪಾದಿಸಿದರು.

  • LIVE: CPP Chairperson Smt. Sonia Gandhi ji at the book launch in honour of Congress President Shri @Kharge's 50 years in electoral politics at Jawahar Bhawan, New Delhi. https://t.co/VCWXDs1ex2

    — Congress (@INCIndia) November 29, 2023 " class="align-text-top noRightClick twitterSection" data=" ">

ಐವತ್ತು ವರ್ಷಗಳು ರಾಜಕೀಯದಲ್ಲಿ ಸುದೀರ್ಘ ಅವಧಿಯಾಗಿದೆ. ಖರ್ಗೆ ಅವರು ಅನಿರೀಕ್ಷಿತ ಹಾದಿಯಲ್ಲಿ ಸಾಗಿ ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಎತ್ತರಕ್ಕೆ ಏರುತ್ತಲೇ ಇದ್ದರು. ಖರ್ಗೆಯವರು ಒಮ್ಮೆಯೂ ತಮ್ಮ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಳ್ಳಲಿಲ್ಲ ಅಥವಾ ಬಡವರ ಸಮಸ್ಯೆಯಿಂದ ಹಿಂದೆ ಸರಿದಿಲ್ಲ. ರಾಜಕೀಯ ಹೋರಾಟದಲ್ಲಿ ಗೆಲ್ಲಲು ಅವರು ಒಮ್ಮೆಯೂ ಘನತೆ ಮತ್ತು ನಡವಳಿಕೆಯಲ್ಲಿ ರಾಜಿ ಮಾಡಿಕೊಂಡಿಲ್ಲ. ಅದಕ್ಕಾಗಿಯೇ ಇಂದು ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಎತ್ತರಕ್ಕೆ ತಲುಪಿದ್ದಾರೆ ಎಂದು ಸೋನಿಯಾ ಹೇಳಿದರು.

ಖರ್ಗೆ ಅವರು ಬ್ಲಾಕ್, ಜಿಲ್ಲೆ, ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿದ್ದರೂ ಅವರು ನಿಭಾಯಿಸಿದ ಪ್ರತಿಯೊಂದು ಹುದ್ದೆ ಮತ್ತು ಜವಾಬ್ದಾರಿಯಲ್ಲಿ ವೈಶಿಷ್ಟತೆದಿಂದ ಸೇವೆ ಸಲ್ಲಿಸಿದ್ದಾರೆ. ಅವರು ಯಾವಾಗಲೂ ತಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷ ಮತ್ತು ಸಂಘಟನೆಗೆ ಬದ್ಧ ಆಗಿದ್ದಾರೆ. ಅವರ ಸಹೋದ್ಯೋಗಿಗಳ ಸ್ಥಾನಮಾನ ಎಷ್ಟೇ ಉನ್ನತ ಅಥವಾ ಕೆಳಮಟ್ಟದಲ್ಲಿದ್ದರೂ, ಖರ್ಗೆ ಯಾವಾಗಲೂ ಒಮ್ಮತ ಮತ್ತು ಸಹಕಾರಿ ಮನೋಭಾವ ತೋರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದುವರೆದು, ನನಗೆ, ಖರ್ಗೆಯವರು ವೈಯಕ್ತಿಕವಾಗಿ ಬುದ್ಧಿವಂತ ಒಡನಾಡಿ ಮತ್ತು ಶಕ್ತಿಯ ಆಧಾರಸ್ತಂಭವಾಗಿದ್ದಾರೆ. ಅವರು ನನ್ನ ಅನೇಕ ಹೊರೆಗಳನ್ನು ಧೈರ್ಯದಿಂದ ಮತ್ತು ಅಚಲವಾದ ಸ್ನೇಹದಿಂದ ಹಂಚಿಕೊಂಡಿದ್ದಾರೆ. ಇಂದು ಅವರು ನಿರ್ಣಾಯಕ ಘಟ್ಟದಲ್ಲಿ ಕಾಂಗ್ರೆಸ್ ಅನ್ನು ಮುನ್ನಡೆಸುತ್ತಿದ್ದಾರೆ. ಇದರಲ್ಲಿ ನನ್ನ ಮತ್ತು ಸಂಪೂರ್ಣ ಕಾಂಗ್ರೆಸ್ ಬೆಂಬಲವನ್ನು ಖರ್ಗೆ ಹೊಂದಿದ್ದಾರೆ ಎಂದು ತಿಳಿಸಿದರು.

  • 50 years is a long period in politics. Shri Mallikarjun Kharge didn't just survive its unpredictable course; he continued to rise higher and higher throughout his political career. Not once did he compromise on his ideology, not once did he drift away from the cause of the poor,… pic.twitter.com/TtCr3POncn

    — Congress (@INCIndia) November 29, 2023 " class="align-text-top noRightClick twitterSection" data=" ">

ಖರ್ಗೆಯವರ ಜೀವನ ಮತ್ತು ಕಾರ್ಯವು ಆಧುನಿಕ ಭಾರತದ ಸಂಸ್ಥಾಪಕರು ಮತ್ತು ಶಿಲ್ಪಿಗಳು ಪ್ರತಿಪಾದಿಸಿದ ಮೌಲ್ಯಗಳಿಗೆ ಉದಾಹರಣೆಯಾಗಿದೆ. ಅದಮ್ಯ ಭಾರತೀಯ ಚೈತನ್ಯವನ್ನು ಸಾಕಾರಗೊಳಿಸಿದ ಅವರು, ತಮ್ಮ ಪ್ರಯಾಣದಲ್ಲಿ ಬಹು ವಿರೋಧಿಗಳನ್ನು ಜಯಿಸಿದ್ದಾರೆ. ಉದಾಹರಣೆಯ ಮೂಲಕ ಮುನ್ನಡೆಸುವ ಅವರು ನೀವು ಯಾರೇ ಆಗಿರಲಿ ಮತ್ತು ನೀವು ಎಲ್ಲಿಂದ ಬಂದರೂ ರಾಷ್ಟ್ರದ ಸೇವೆಯಲ್ಲಿ ನೀವು ಇನ್ನೂ ಹೆಚ್ಚಿನ ಎತ್ತರಕ್ಕೆ ಏರಬಹುದು ಎಂಬ ನಂಬಿಕೆಯ ಸಂಕೇತವಾಗಿದ್ದಾರೆ. ಇದು ಮತ್ತು ಸಾರ್ವಜನಿಕ ಸೇವೆಯಲ್ಲಿರಲು ಬಯಸುವ ಲಕ್ಷಾಂತರ ಭಾರತೀಯರಿಗೆ ಸ್ಫೂರ್ತಿಯಾಗಿ ಮುಂದುವರಿಯುತ್ತದೆ ಎಂದು ಪಕ್ಷದ ನಾಯಕಿ ಅಭಿಪ್ರಾಯಪಟ್ಟರು.

ಭಾರತವು ಸ್ವತಂತ್ರವಾದಾಗ, ನಮಗೆಲ್ಲರಿಗೂ ತಿಳಿದಿರುವಂತೆ ನಾವು ಬಡ ರಾಷ್ಟ್ರಗಳಲ್ಲಿ ಒಂದಾಗಿದ್ದೆವು. ಸಾಕ್ಷರತೆಯು ಕೇವಲ ಶೇ.16ರಷ್ಟಿತ್ತು. ನಮಗೆ ಯಾವುದೇ ಕೈಗಾರಿಕಾ ತಳಹದಿ ಇರಲಿಲ್ಲ. ಆದರೆ, ಬೃಹತ್ ಅಡೆತಡೆಗಳನ್ನು ದಾಟಿ ಕಾಂಗ್ರೆಸ್ ನಾಯಕತ್ವದಲ್ಲಿ ನಾವು ಒಟ್ಟಾಗಿ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆದಿದ್ದೇವೆ. ಇದು ಸ್ವಾತಂತ್ರ್ಯ ಹೋರಾಟದಲ್ಲಿ ಪಕ್ಷದ ಸುದೀರ್ಘ ಅನುಭವ ಮತ್ತು ಅದರ ತ್ಯಾಗ, ಅದರ ಸಿದ್ಧಾಂತಗಳು ಮತ್ತು ಅದರ ಅದಮ್ಯ ಶಕ್ತಿಗಳಿಂದಾಗಿ ಸಾಧ್ಯವಾಗಿದೆ ಎಂದು ಸೋನಿಯಾ ಹೇಳಿದರು. (ಐಎಎನ್‌ಎಸ್)

ಇದನ್ನೂ ಓದಿ: ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಒಂದು ವರ್ಷ:'ಪಕ್ಷಕ್ಕೆ ಸ್ಥಿರತೆ ಒದಗಿಸಿ,ಕಾರ್ಯಕರ್ತರಿಗೆ ಪ್ರೇರೇಪಣೆ‘‘.. ಪಕ್ಷದ ನಾಯಕರ ಶ್ಲಾಘನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.