ETV Bharat / bharat

ತಮಿಳುನಾಡಿನ ರಿಯಲ್ ಎಸ್ಟೇಟ್ ಸಂಸ್ಥೆ ಜಿ ಸ್ಕ್ವೇರ್ ರಿಯಲ್ಟರ್ಸ್ ಮೇಲೆ ಐಟಿ ದಾಳಿ

author img

By

Published : Apr 24, 2023, 12:55 PM IST

Updated : Apr 24, 2023, 7:23 PM IST

ಜಿ ಸ್ಕ್ವೇರ್
g square

ತಮಿಳುನಾಡಿನಾದ್ಯಂತ ಜಿ ಸ್ಕ್ವೇರ್ ಗ್ರೂಪ್ಸ್ ಸಂಸ್ಥೆಗೆ ಸಂಬಂಧಿಸಿದ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಠಾತ್ ದಾಳಿ ನಡೆಸಿ, ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಚೆನ್ನೈ (ತಮಿಳುನಾಡು) : ಆದಾಯ ತೆರಿಗೆ ( ಐಟಿ ) ಇಲಾಖೆ ಅಧಿಕಾರಿಗಳು ತಮಿಳುನಾಡಿನ ರಿಯಲ್ ಎಸ್ಟೇಟ್ ಸಂಸ್ಥೆ ಜಿ ಸ್ಕ್ವೇರ್ ರಿಯಲ್ಟರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸಂಬಂಧಿಸಿದ ಸುಮಾರು 50 ಸ್ಥಳಗಳಲ್ಲಿ ದಾಳಿ ನಡೆಸಿ, ಶೋಧ ಕಾರ್ಯ ಮುಂದುವರೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಂಸ್ಥೆಯ ಷೇರುದಾರ ಕಾರ್ತಿಕ್ ಅಣ್ಣಾನಗರದ ಡಿಎಂಕೆ ಶಾಸಕ ಎಂಕೆ ಮೋಹನ್ ಅವರ ಪುತ್ರನಾಗಿದ್ದು, ಅವರ ಮನೆ ಮೇಲೆ ಸಹ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆದ ವಿಷಯ ತಿಳಿಯುತ್ತಿದ್ದಂತೆ ಡಿಎಂಕೆ ಕಾರ್ಯಕರ್ತರ ಗುಂಪು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಮಾಹಿತಿ ಪ್ರಕಾರ, ತಿರುಚಿಯಲ್ಲಿರುವ ಜಿ ಸ್ಕ್ವೇರ್ ಶಾಖೆಯ ಮೇಲೆ ಸಹ ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಕಚೇರಿ ತೆರೆಯುವುದಕ್ಕೂ ಮುನ್ನ ಬಂದು ಕಾದು ನಿಂತಿದ್ದ ಅಧಿಕಾರಿಗಳು ಬಳಿಕ ಅಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಯಾವಾಗ ಆಫೀಸ್​ ತೆರೆಯಲಾಗುವುದು ಎಂದು ಮಾಹಿತಿ ಪಡೆದುಕೊಂಡರು. ಬಳಿಕ, ಉದ್ಯೋಗಿಯೊಬ್ಬರು ಬಂದು ಬಾಗಿಲು ತೆರೆಯುತ್ತಿದ್ದಂತೆ ಕಚೇರಿ ಒಳಗೆ ಹೋದ ಅಧಿಕಾರಿಗಳು ನಿರಂತರವಾಗಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ : ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ

ಇತ್ತೀಚೆಗೆ ಡಿಎಂಕೆ ಸಚಿವರು ಮತ್ತು ಗಣ್ಯರ ಆಸ್ತಿ ಪಟ್ಟಿಯನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪ್ರಕಟಿಸಿದ್ದರು. ಈ ವೇಳೆ, ಜಿ ಸ್ಕ್ವೇರ್ ಡಿಎಂಕೆಯ ಕುಟುಂಬಸ್ಥರ ಒಡೆತನದಲ್ಲಿದೆ ಎಂಬ ಆರೋಪಗಳನ್ನು ಮಾಡಿದ್ದರು. ಜೊತೆಗೆ, ಡಿಎಂಕೆ ಆಡಳಿತಕ್ಕೆ ಬಂದ ನಂತರ ಜಿ ಸ್ಕ್ವೇರ್ ಸಂಸ್ಥೆ 38,827 ಕೋಟಿ ರೂ. ಆದಾಯ ಗಳಿಸಿದೆ ಎಂದು ತಿಳಿಸಿದ್ದರು. ಆದರೆ, ಅಣ್ಣಾಮಲೈ ಮಾಡಿದ ಆರೋಪಗಳನ್ನು ನಿರಾಕರಿಸಿದ್ದ ಜಿ-ಸ್ಕ್ವೇರ್ ಕಂಪನಿಯು, ಡಿಎಂಕೆ ಪಕ್ಷದ ಕುಟುಂಬಸ್ಥರ ನಿಯಂತ್ರಣದಲ್ಲಿಲ್ಲ. ಇದಕ್ಕೆ ಸಂಬಂಧಪಟ್ಟ ಎಲ್ಲ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ಹೇಳಿತ್ತು.

ಇದನ್ನೂ ಓದಿ : ಮಂಗಳೂರು : ಕಾಂಗ್ರೆಸ್ ಮುಖಂಡನ ಮನೆ , ಕಚೇರಿ ಮೇಲೆ ಐಟಿ ದಾಳಿ

ಇನ್ನು ಜಿ ಸ್ಕ್ವೇರ್ ರಿಯಲ್ಟರ್ಸ್ ಖಾಸಗಿ ಕಂಪನಿಯಾಗಿದ್ದು, ಅಕ್ಟೋಬರ್ 12 ರ 2012 ರಂದು ಸಂಘಟಿತವಾಗಿದೆ. ಇದನ್ನು ಸರ್ಕಾರೇತರ ಕಂಪನಿ ಎಂದು ಸಹ ವರ್ಗೀಕರಿಸಲಾಗಿದೆ. ಈ ಹಿಂದೆ ಅಂದರೆ, 2019 ರಲ್ಲಿ ಆದಾಯ ತೆರಿಗೆ ಇಲಾಖೆಯು ಕಂಪನಿ ಮೇಲೆ ದಾಳಿ ನಡೆಸಿತ್ತು. ಚೆನ್ನೈ, ಕೋಯಂಬುತ್ತೂರು, ಬೆಂಗಳೂರು, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ಸಂಸ್ಥೆ ರಿಯಲ್ ಎಸ್ಟೇಟ್ ಉದ್ಯಮವನ್ನು ನಡೆಸುತ್ತಿದೆ.

ಇದನ್ನೂ ಓದಿ : ಜೆಡಿಎಸ್​ ಮುಖಂಡ ಪ್ರಭಾಕರ್​ ರೆಡ್ಡಿಗೆ ಶಾಕ್​ ನೀಡಿದ ಐಟಿ ಅಧಿಕಾರಿಗಳು : ಕುಮಾರಸ್ವಾಮಿ ಪ್ರತಿಕ್ರಿಯೆ

ಇದನ್ನು ಓದಿ:ಯಾವಾಗ ಬೇಕಾದರೂ ಚುನಾವಣೆ ನಡೆಯಬಹುದು, ನಾವು ಸಿದ್ಧರಿದ್ದೇವೆ: ಉದ್ಧವ್ ಠಾಕ್ರೆ

Last Updated :Apr 24, 2023, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.