ETV Bharat / bharat

ಮತ್ತೆ ಕೊರೊನಾ ತಲ್ಲಣ: ಕಳೆದ 24 ಗಂಟೆಯಲ್ಲಿ 3,998 ಮಂದಿ ಬಲಿ!

author img

By

Published : Jul 21, 2021, 10:27 AM IST

COVID19 cases
ಕೊರೊನಾ

ದೇಶದಲ್ಲಿ ಒಂದೇ ದಿನ 42,015 ಕೊರೊನಾ ಕೇಸ್​ಗಳು ಪತ್ತೆಯಾಗಿದ್ದು, 3,998 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ನವದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ಭೀತಿ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 42,015 ಕೇಸ್​ಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನ 3,998 ಮಂದಿ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ 4,18,480 ಕ್ಕೆ ಏರಿದೆ.

ಇಲ್ಲಿವರೆಗೆ 3,12,16,337 ಕೊರೊನಾ ಪ್ರಕರಣಗಳು ದೇಶದಲ್ಲಿ ದಾಖಲಾಗಿದ್ದು, ಸದ್ಯ 4,07,170 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಇನ್ನು ಕಳೆದ 24 ಗಂಟೆಯಲ್ಲಿ 36,977 ಮಂದಿ ಗುಣಮುಖರಾಗಿದ್ದು, ಇಲ್ಲಿವರೆಗೆ 3,03,90,687 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಈವರೆಗೆ 41,54,72,455 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR)​ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.