ETV Bharat / bharat

ಶುಕ್ರವಾರದಿಂದ ಮುಂದಿನ 75ದಿನ ಉಚಿತ ಕೋವಿಡ್​ ಬೂಸ್ಟರ್ ಡೋಸ್​.. ಕೇಂದ್ರದ ಮಹತ್ವದ ನಿರ್ಧಾರ

author img

By

Published : Jul 13, 2022, 4:21 PM IST

Free Covid Booster Dose
Free Covid Booster Dose

ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಸಂಭ್ರಮದ ನಿಮಿತ್ತ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮುಂದಿನ 75 ದಿನಗಳ ಕಾಲ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕೋವಿಡ್ ಬೂಸ್ಟರ್ ಡೋಸ್ ನೀಡಲಿದೆ.

ನವದೆಹಲಿ: 75ನೇ ಸ್ವಾತಂತ್ರ್ಯ ಸಂಭ್ರಮದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬರುವ ಶುಕ್ರವಾರದಿಂದ ಮುಂದಿನ 75 ದಿನಗಳ ಕಾಲ ದೇಶಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕೋವಿಡ್​ ಬೂಸ್ಟರ್ ಡೋಸ್​ ನೀಡಲು ನಿರ್ಧರಿಸಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.

  • #WATCH | Union Minister Anurag Thakur says, "...It has been decided that from 15th July 2022 till the next 75 days, all citizens above 18 years of age will be given booster doses free of cost...This facility will be available at all government centres..."#COVID19 pic.twitter.com/kZSOqHZQLg

    — ANI (@ANI) July 13, 2022 " class="align-text-top noRightClick twitterSection" data=" ">

'ಆಜಾದಿ ಕಾ ಅಮೃತ್​ ಮಹೋತ್ಸವ' ನಿಮಿತ್ತ ಈ ನಿರ್ಧಾರ ಕೈಗೊಳ್ಳಲಾಗಿದೆ. ಜುಲೈ 15ರಿಂದ ಮುಂದಿನ 75 ದಿನಗಳವರೆಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅನುರಾಗ್ ಠಾಕೂರ್​, ಜುಲೈ 15ರಿಂದ ಈ ಯೋಜನೆ ಜಾರಿಗೊಳ್ಳಲಿದ್ದು, ಈ ಸೌಲಭ್ಯ ಎಲ್ಲರಿಗೂ ಲಭ್ಯವಿರಲಿದ್ದು, ಸರ್ಕಾರಿ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಸಿಗಲಿದೆ ಎಂದಿದ್ದಾರೆ. ಕೋವಿಡ್​​ನ ಎರಡನೇ ಡೋಸ್​ ಪಡೆದ ಆರು ತಿಂಗಳ ಬಳಿಕ ಫಲಾನುಭವಿಗಳು ಮುನ್ನೆಚ್ಚರಿಕೆ ಡೋಸ್ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿರಿ: ಬೂಸ್ಟರ್ ಡೋಸ್ ಪಡೆದುಕೊಳ್ಳುವ ಅಂತರದಲ್ಲಿ 9 ರಿಂದ 6 ತಿಂಗಳಿಗೆ ಇಳಿಕೆ.. ಕೇಂದ್ರದ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.