ETV Bharat / bharat

ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

author img

By

Published : Nov 24, 2020, 1:18 PM IST

Four members of the same family murdered in Ludhiana
ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ

ಪಂಜಾಬ್​​​​​​​​ನ ಲೂಧಿಯಾನದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ.

ಲುಧಿಯಾನ : ಪಂಜಾಬ್​​​​​​​​ನಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಲುಧಿಯಾನದ ಹಂಬ್ರಾ ರಸ್ತೆಯ ಮಯೂರ್ ವಿಹಾರ್ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಕೊಲೆಯಾದವರನ್ನು ವ್ಯಾಪಾರಿ ಆಶಿಶ್ ಸುಂದಾ, ಅವರ ಪತ್ನಿ ಗರಿಮಾ ಸುಂದ, ತಾಯಿ ಸುನೀತಾ ಸುಂದಾ ಮತ್ತು 13 ವರ್ಷದ ಮಗ ಸಾಕೇತ್ ಎಂದು ಗುರುತಿಸಲಾಗಿದೆ.

ನಾಲ್ವರ ಭೀಕರ ಹತ್ಯೆ ಹಿನ್ನೆಲೆ ಈ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಹತ್ಯೆಗೆ ಬಳಸಲಾದ ಆಯುಧಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.