ETV Bharat / bharat

Horoscope Today: ನಿಮ್ಮ ದಿಢೀರ್ ನಿರ್ಣಯಗಳು ಇಂದು ಋಣಾತ್ಮಕ ಪರಿಣಾಮ ಬೀರಲಿವೆ!

author img

By

Published : Jan 15, 2022, 12:31 AM IST

Etv bharat horoscope
ರಾಶಿ ಭವಿಷ್ಯ

ಇಂದಿನ ಪಂಚಾಂಗ ಹಾಗೂ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ..

ಇಂದಿನ ಪಂಚಾಂಗ: 15-01-2022, ಶನಿವಾರ; ಪ್ಲವನಾಮ ಸಂವತ್ಸರ; ಉತ್ತರಾಯಣ; ಶಿಶಿರ ಋತು; ಪುಷ್ಯ ಮಾಸ; ಶುಕ್ಲ ಪಕ್ಷ; ತ್ರಯೋದಶಿ ತಿಥಿ; ಮೃಗಶಿರ ನಕ್ಷತ್ರ

ಸೂರ್ಯೋದಯ: 06.45 ಗಂಟೆಗೆ

ಅಮೃತ ಕಾಲ: ಬೆಳಗ್ಗೆ 06:45ರಿಂದ 08:10ರ ತನಕ

ವರ್ಜ್ಯಂ: ಸಾಯಂಕಾಲ 06:15 to 07:50ರವರೆಗೆ

ದುರ್ಮುಹೂರ್ತ: ಬೆಳಗ್ಗೆ 08:29ರಿಂದ 09:09 ಗಂಟೆವರೆಗೆ

ರಾಹುಕಾಲ: ಬೆಳಗ್ಗೆ 09:36ರಿಂದ 11.01ರವರೆಗೆ

ಸೂರ್ಯಾಸ್ತ: ಸಾಯಂಕಾಲ 06:09 ಗಂಟೆಗೆ

ಇಂದಿನ ರಾಶಿ ಭವಿಷ್ಯ:

ಮೇಷ: ಇಂದು ಸುವರ್ಣಾವಕಾಶವು ನಿಮ್ಮ ಬಾಗಿಲು ಬಡಿಯಲಿದೆ. ನೀವು ಉತ್ತಮ ಅದೃಷ್ಟವನ್ನು ಭವಿಷ್ಯಕ್ಕೆ ಉಳಿಸುವಲ್ಲಿ ಯಶಸ್ವಿಯಾಗಲೂಬಹುದು. ಸದ್ಯದಲ್ಲೇ, ನೀವು ನಿಮ್ಮ ದಾರಿಯಲ್ಲಿ ಬರುವ ಹೆಚ್ಚು ಒಪ್ಪಂದಗಳ ಮೂಲಕ ನಿಮ್ಮ ವ್ಯಾಪಾರದ ಮೈಲಿಗಲ್ಲುಗಳನ್ನು ರೂಪಿಸಿಕೊಳ್ಳಲು ಶಕ್ತರಾಗುತ್ತೀರಿ. ನೀವು ಹಾಕುವ ಪ್ರಯತ್ನಗಳಿಗೆ ಅನುಗುಣವಾಗಿ ನೀವು ಪ್ರತಿಫಲವನ್ನು ಪಡೆಯುತ್ತೀರಿ.

ವೃಷಭ: ಇಂದು ನೀವು ಕೆಲ ಲೆಕ್ಕಾಚಾರದ ನಿರ್ಧಾರಗಳನ್ನು ಕೈಗೊಳ್ಳಲು ನಿಮ್ಮ ವಿಶ್ಲೇಷಣಾತ್ಮಕ ಕೌಶಲ್ಯಗಳು ಅಗತ್ಯವಾಗಬಹುದು. ನೀವು ವಿಷಯಗಳು ನಿಮ್ಮ ಕಡೆಗೆ ಸಾಗುವಂತೆ ಮಾಡಲೂಬಹುದು. ನಿಮಗೆ ಹೊಡೆತ ನೀಡುವ ಯಾವುದೇ ಕಹಿ ಆಲೋಚನೆಗಳಿಂದ ನೀವು ದೂರ ಉಳಿಯಲು ಬಯಸಬಹುದು. ಆದರೆ ಈ ದಿನದ ಅಂತ್ಯಕ್ಕೆ, ನೀವು ಕುಳಿತು ನಿಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ.

ಮಿಥುನ: ನಿಮ್ಮ ಆ ಒಂದು ಕ್ರಿಯೆ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎಂದು ನೆನಪಿನಲ್ಲಿಟ್ಟುಕೊಳ್ಳಿ. ಇತರರು ನಿಮ್ಮ ಕುರಿತು ತಪ್ಪು ತಿಳುವಳಿಕೆ ಹೊಂದುವ ಸಾಧ್ಯತೆ ಇದೆ. ನಿಮ್ಮಷ್ಟಕ್ಕೆ ನೀವು ಕೊಂಚ ಸಮಯ ಕಳೆಯುವುದು ನಿಮಗೆ ಉಪಯುಕ್ತ ಎಂದು ಕಾಣುತ್ತೀರಿ. ಅದಲ್ಲದೆ, ನೀವು ವಿರುದ್ಧ ಲಿಂಗದ ಮಿತ್ರರೊಂದಿಗೆ ಧಾರಾಳವಾಗಿ ಖರ್ಚು ಮಾಡುವ ಮೂಲಕ ಅವರನ್ನು ಪ್ರಭಾವಿತಗೊಳಿಸುತ್ತೀರಿ.

ಕರ್ಕಾಟಕ: ನೀವು ನಿಮ್ಮ ಪ್ರೀತಿ ಪಾತ್ರರ ಕುರಿತು ಬಹಳ ಕಾಳಜಿ ವಹಿಸುತ್ತೀರಿ ಮತ್ತು ಆದ್ದರಿಂದ ನೀವು ಅವರ ಕುರಿತು ಏನು ಭಾವಿಸುತ್ತೀರಿ ಎಂದು ಹೇಳದೆ ಅವರ ಭಾವನೆಗಳನ್ನು ರಕ್ಷಿಸಲು ಪ್ರಯತ್ನಿಸುತ್ತೀರಿ. ಮಧ್ಯಾಹ್ನ ಸಣ್ಣ ಪ್ರವಾಸದ ಮೇಲೆ ನಗರವನ್ನು ಬಿಡಲು ಉತ್ಸಾಹ ನೀಡುವ ಸಾಹಸ ತರಲಿದೆ. ಲೋಲುಪತೆಗೆ ನೀವು ಗಮನ ನೀಡುವುದಿಲ್ಲ ಮತ್ತು ನೀವು ಚೆನ್ನಾಗಿ ಕಾಣಲು ಒಳ್ಳೆಯ ಮೊತ್ತವನ್ನು ಖರ್ಚು ಮಾಡುತ್ತೀರಿ.

ಸಿಂಹ: ಈ ದಿನ ಮತ್ತಾವುದೇ ದಿನದಂತಲ್ಲ. ಸಂಪತ್ತು ಮತ್ತು ಅದೃಷ್ಟ, ಎರಡೂ ನಿಮಗೆ ಇಂದು ಜೊತೆಯಾಗಿರುವಂತೆ ಕಾಣುತ್ತಿದೆ. ಹಣ ಮತ್ತು ಅಧಿಕಾರ ಅನಿವಾರ್ಯವಾದವು. ದಿನ ಮುಂದಕ್ಕೆ ಸಾಗಿದಂತೆ, ನೀವು ನಿಮ್ಮಗಮನಾರ್ಹ ವ್ಯಕ್ತಿಗೆ ಉತ್ತಮ ಆಭರಣ ಕೊಡಿಸಲು ದುಬಾರಿಯಾಗಿ ಖರ್ಚು ಮಾಡಲು ಬಯಸುತ್ತೀರಿ. ಅದೇ ಸಮಯಕ್ಕೆ, ನಿಮ್ಮ ಹಣ ಎಲ್ಲಿಗೆ ಹೋಗುತ್ತದೆ ಎನ್ನುವುದರ ಕುರಿತು ಕೊಂಚ ಎಚ್ಚರದಿಂದಿರಿ. ನಿಮ್ಮ ಹಣಕಾಸಿನ ವ್ಯವಹಾರಗಳ ಕುರಿತು ಹತ್ತಿರದಿಂದ ನೋಡುವುದು ಅಗತ್ಯ.

ಕನ್ಯಾ: ನಿಮ್ಮ ಕುಟುಂಬ ಇಂದು ನಿಮ್ಮ ಸಂತೋಷದ ಮನಸ್ಥಿತಿಯನ್ನು ನಿರ್ಧರಿಸಲಿದೆ. ಇದರಿಂದಾಗಿ, ನೀವು ಅವರೊಂದಿಗೆ ಕಾಲ ಕಳೆಯಲು ಮತ್ತು ಅವರಿಗೆ ದುಬಾರಿ ಉಡುಗೊರೆಗಳನ್ನು ಕೊಡಿಸಿ ಸಂತೋಷ ಪಡಿಸಲು ಪ್ರಯತ್ನಿಸುತ್ತೀರಿ. ದಿನದ ನಂತರದಲ್ಲಿ, ನೀವು ಪ್ರಣಯದಲ್ಲಿ ತೊಡಗಿಕೊಳ್ಳಲು ಬಯಸುವ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ.

ತುಲಾ: ಇಂದು ನೀವು ಪ್ರಯತ್ನಿಸುವ ಪ್ರತಿ ತಿನಿಸನ್ನೂ ಸವಿಯುತ್ತೀರಿ. ನೀವು ಕವಲುದಾರಿಯಲ್ಲಿರುತ್ತೀರಿ. ಆದರೆ ನಿಮಗೆ ಹಲವು ಅವಕಾಶಗಳಿರುವುದರಿಂದ ನೀವು ನಿರಾಶೆಗೊಳ್ಳುವ ಅಗತ್ಯವಿಲ್ಲ. ದಿನ ಮುಂದುವರಿದಂತೆ ನಿಮ್ಮ ಜೀವನದಲ್ಲಿ ಹಣಕಾಸಿನ ಅನುಕೂಲಗಳು ನಿಮ್ಮ ದಾರಿಯಲ್ಲಿ ಬರುತ್ತವೆ. ನಿಮ್ಮ ಭವಿಷ್ಯ ಉತ್ತಮಪಡಿಸುವ ನೆರವಾಗುವ ಯಾವುದೋ ಒಂದರ ಹುಡುಕಾಟದಲ್ಲಿರುತ್ತೀರಿ, ಅದು ನಿಮಗೆ ಲಭಿಸುತ್ತದೆ. ಇಂದು ನಿಮ್ಮ ಎಲ್ಲ ಬಯಕೆಗಳೂ ಈಡೇರುವ ಸಾಧ್ಯತೆ ಇದೆ.

ವೃಶ್ಚಿಕ: ಈ ದಿನ ನಿಮ್ಮಂತೆಯೇ ಆಲೋಚಿಸುವ ಜನರೊಂದಿಗೆ ಸೇರಿಕೊಳ್ಳುವುದರಿಂದ ಉತ್ಸಾಹದಿಂದ ಕೂಡಿರುತ್ತದೆ. ಈ ದಿನ ನಿಮ್ಮನ್ನು ಒಂದಲ್ಲಾ ಒಂದು ಚಟುವಟಿಕೆಯಿಂದ ತೊಡಗಿಸಿರುತ್ತದೆ. ಎಚ್ಚರದಿಂದಿರಿ ಉದ್ವೇಗಗೊಳ್ಳಬೇಡಿ. ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಈ ದಿನ ನಿಮಗೆ ಅತ್ಯಂತ ಶಕ್ತಿ ನೀಡುತ್ತದೆ ಮತ್ತು ನೀವು ಪ್ರೀತಿಸುವ ಜನರೊಂದಿಗೆ ಹಾರಾಟ ಮಾಡಲು ಬಯಸುತ್ತೀರಿ.

ಧನು: ನಿಮ್ಮ ವೈಯಕ್ತಿಕ ವಸ್ತುಗಳ ಕುರಿತು ಕೊಂಚ ಇಷ್ಟ ಹೆಚ್ಚಾಗಿರುತ್ತದೆ. ನೀವು ಅಭೂತಪೂರ್ವ ಪ್ರೇಮ ವ್ಯವಹಾರಗಳನ್ನು ಹೊಂದುವ ಅದೃಷ್ಟವಂತರಾಗಿರಬಹುದು. ಇಂದು ನೀವು ಮುಂದೂಡುತ್ತಿದ್ದ ಕೆಲಸ ಸುಲಭವಾಗಿ ಪೂರ್ಣಗೊಳ್ಳುತ್ತದೆ. ಈ ಅದೃಷ್ಟದ ದಿನದಂದು ತಾರೆಗಳ ಜೋಡಣೆ ನಿಮಗೆ ಭರವಸೆ ತರುತ್ತದೆ.

ಮಕರ: ನಿರೀಕ್ಷೆಗಳು ಮಿಶ್ರ ಭಾವನೆಗಳನ್ನು ಮೂಡಿಸುತ್ತವೆ. ನಿಮ್ಮಿಂದ ಮತ್ತು ಸುತ್ತಲಿನವರಿಂದ ನೀವು ಅಪಾರವಾಗಿ ನಿರೀಕ್ಷೆ ಮಾಡುವಾಗ ನಿರೀಕ್ಷಿತ ಫಲಿತಾಂಶಗಳನ್ನು ನೀವು ಪಡೆಯದೇ ಇರಬಹುದು. ನೀವು ತುದಿಗಾಲಲ್ಲಿ ನಿಂತಿರಬೇಕು ಮತ್ತು ಸ್ಮಾರ್ಟ್ ಯೋಜನೆ ಹಾಗೂ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಹಣ ಖರ್ಚು ಮಾಡುವುದು ಕ್ಲಿಷ್ಟವಾಗುತ್ತದೆ ಮತ್ತು ನೀವು ಕಡಿಮೆ ಖರ್ಚು ಮಾಡಲು ಬಯಸುತ್ತೀರಿ. ಆದಾಗ್ಯೂ ಸಾಮಾಜಿಕವಾಗಿ ಈ ಮಾದರಿ ನಿಮ್ಮ ಪ್ರತಿಷ್ಠೆಗೆ ಧಕ್ಕೆಯುಂಟು ಮಾಡುತ್ತದೆ.

ಕುಂಭ: ನಿಮ್ಮ ಕೆಲಸದಲ್ಲಿ ಅತ್ಯಂತ ಪ್ರಮುಖ ದಿನಗಳಲ್ಲಿ ಒಂದಾಗಿರುವುದರಿಂದ ಶಿಸ್ತಾಗಿ ಬಟ್ಟೆ ತೊಟ್ಟು ಹೊರಡಿ. ಇದು ಪ್ರಭಾವಗೊಳಿಸುವ ದಿನ ಮತ್ತು ಆದ್ದರಿಂದ ನಿರ್ಧಾರಗಳನ್ನು ಕೈಗೊಳ್ಳುವಾಗ ಜಾಣರಾಗಿರುವುದು ಮುಖ್ಯ. ದಿಢೀರ್ ನಿರ್ಣಯಗಳಿಗೆ ಬರುವುದು ಋಣಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಎಚ್ಚರದಿಂದಿರಿ.

ಮೀನ: ಇಂದು ಉತ್ಸಾಹ ಮತ್ತು ಹುರುಪು ತುಂಬಿದ ಉಜ್ವಲ ದಿನ. ನೀವು ಹೊಸ ಜನರನ್ನು ಭೇಟಿಯಾಗುವ ಮೂಲಕ ನಿಮ್ಮ ಸಾಮಾಜಿಕ ವೃತ್ತವನ್ನು ಬೆಳೆಸಿಕೊಳ್ಳಬಹುದು ಅಥವಾ ನಿಮ್ಮ ವಿಶೇಷ ವ್ಯಕ್ತಿಯೊಂದಿಗೆ ಕಾಲ ಕಳೆಯಬಹುದು. ಯಾವುದೇ ನವೋತ್ಸಾಹ ತುಂಬುವ ವಸ್ತುಗಳು ನಿಮ್ಮ ಶಕ್ತಿ, ಡೈನಮಿಸಂ ಮತ್ತು ಸಾಮರ್ಥ್ಯಕ್ಕೆ ಕೆಲಸ ಮಾಡುವುದಿಲ್ಲ. ಕೆಲಸದಲ್ಲಿ ಅಥವಾ ವೈಯಕ್ತಿಕ ಜೀವನದಲ್ಲಿ ಹೊಸ ಯೋಜನೆಗಳನ್ನು ತೆಗೆದುಕೊಳ್ಳಲು ನೀವು ಭಯಪಡುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.