ETV Bharat / bharat

ಕೇಂದ್ರ ಬಜೆಟ್ 2022: ಈ ವರ್ಷ ಪ್ರಯಾಣಿಕರಿಗೆ ಲಭ್ಯವಾಗಲಿದೆ ಇ - ಪಾಸ್‌ಪೋರ್ಟ್‌

author img

By

Published : Feb 1, 2022, 1:13 PM IST

E Passports will be rolled out in this year
ಈ ವರ್ಷ ಪ್ರಯಾಣಿಕರಿಗೆ ಲಭ್ಯವಾಗಲಿದೆ ಇ-ಪಾಸ್‌ಪೋರ್ಟ್‌

ಈ ವರ್ಷ ಇ-ಪಾಸ್‌ಪೋರ್ಟ್‌ಗಳನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ನವದೆಹಲಿ: ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಈ ವರ್ಷ ಇ - ಪಾಸ್‌ಪೋರ್ಟ್‌ಗಳನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.

ಇ-ಪಾಸ್‌ಪೋರ್ಟ್‌ ಎಲೆಕ್ಟ್ರಾನಿಕ್ ಚಿಪ್ ಒಳಗೊಂಡಿರುತ್ತದೆ. ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳೊಂದಿಗೆ ಇ-ಪಾಸ್‌ಪೋರ್ಟ್‌ಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ನಾಗರಿಕರಿಗೆ ಒದಗಿಸಲಾಗುತ್ತದೆ. ಇ-ಪಾಸ್‌ಪೋರ್ಟ್‌ಗಳು ಹೆಚ್ಚಿನ ಭದ್ರತಾ ಫೀಚರ್‌ಗಳನ್ನು ಒಳಗೊಂಡಿರುತ್ತದೆ. ಪಾಸ್‌ಪೋರ್ಟ್‌ನಲ್ಲಿ ಎಕ್ಟ್ರಾನಿಕ್ ಚಿಪ್ ಇದ್ದು ಅದರ ಮೇಲೆ ಎನ್‌ಕೋಡ್ ಮಾಡಲಾದ ಭದ್ರತೆಗೆ ಸಂಬಂಧಿಸಿದ ಡೇಟಾ ದಾಖಲಾಗಿರುತ್ತದೆ.

ಇದನ್ನೂ ಓದಿ: ಡಿಜಿಟಲ್​ ವಸ್ತುಗಳ ಆಮದಿನ ಮೇಲೆ ಶೇ.30 ಕಸ್ಟಮ್ಸ್​ ಸುಂಕ.. ಹೆಚ್ಚಲಿದೆ ಮೊಬೈಲ್​, ಟಿವಿ ಬೆಲೆ

ಈ ಹಿಂದೆ ಭಾರತೀಯರಿಗೆ ಶೀಘ್ರದಲ್ಲೇ ಮೈಕ್ರೋ ಚಿಪ್‌ ಹೊಂದಿರುವ ಇ-ಪಾಸ್‌ಪೋರ್ಟ್ ಲಭ್ಯವಾಗಲಿದೆ ಎಂದು ವಿದೇಶಾಂಗ ಸಚಿವಾಲಯವು ಘೋಷಣೆ ಮಾಡಿತ್ತು. ಇ ಪಾಸ್‌ಪೋರ್ಟ್ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣ ಮಾಡುವವರಿಗೆ, ವಲಸಿಗರಿಗೆ ಎಲ್ಲಾ ನಾಗರಿಕರು ಲಭ್ಯವಾಗಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.