ETV Bharat / bharat

Central Vista: ಮೂರು ಕಟ್ಟಡಗಳ ನಿರ್ಮಾಣ, ನಿರ್ವಹಣೆ ವೆಚ್ಚ ಪರಿಷ್ಕರಿಸಿದ CPWD

author img

By

Published : Sep 14, 2021, 7:49 AM IST

Central Vista redevelopment project
Central Vista redevelopment project

ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿ ನಿರ್ಮಾಣವಾಗಿರುವ ಮೂರು ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆಯ ವೆಚ್ಚನ್ನು CPWD ಪರಿಷ್ಕರಿಸಿದೆ.

ನವದೆಹಲಿ: ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗಿರುವ ಸಾಮಾನ್ಯ ಕೇಂದ್ರೀಯ ಕಾರ್ಯಾಲಯದ ಮೂರು ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆಯ ಅಂದಾಜು ವೆಚ್ಚವನ್ನು ಕೇಂದ್ರ ಲೋಕೋಪಯೋಗಿ ಇಲಾಖೆ ಪರಿಷ್ಕರಿಸಿದೆ.

ಈ ಮೂರು ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆಯ ಅಂದಾಜು ವೆಚ್ಚವನ್ನು 3,408 ಕೋಟಿ ರೂ.ನಿಂದ ಸುಮಾರು 3,254 ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ. ಈ ಹೊಸ ಕಟ್ಟಡಗಳು ಪ್ರಸ್ತುತ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಇರುವ ಪ್ಲಾಟ್‌ನಲ್ಲಿವೆ.

ಈ ವಿಸ್ಟಾ ಯೋಜನೆಯಡಿ ಪವರ್ ಕಾರಿಡಾರ್​, ಹೊಸ ಸಂಸತ್ ಭವನ, ಸಾಮಾನ್ಯ ಕೇಂದ್ರ ಕಾರ್ಯಾಲಯ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್​ವರೆಗೆ 3 ಕಿ.ಮೀ ರಾಜಪಥ, ಪ್ರಧಾನಿ ನಿವಾಸ ನಿರ್ಮಾಣವಾಗಲಿವೆ.

ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ವಿಧಿವಶ: ಉಡುಪಿಯಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.