ETV Bharat / bharat

ಅವಕಾಶ ಸಿಕ್ಕರೆ ಬ್ರಾಹ್ಮಣರ ಮಾರ್ಗದರ್ಶನದಲ್ಲಿ ದೇಶ 'ಸೂಪರ್ ಪವರ್' ಆಗಬಹುದು: ಐಎಎಸ್ ನಿಯಾಜ್‌ ಖಾನ್‌

author img

By

Published : Feb 15, 2023, 12:31 PM IST

"ಬ್ರಾಹ್ಮಣರ ಐಕ್ಯೂ(ಬುದ್ಧಿಮತ್ತೆಯ ಪ್ರಮಾಣ) ತುಂಬಾ ಹೆಚ್ಚಾಗಿದೆ. ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಸಿಕ್ಕರೆ ಅವರ ಮಾರ್ಗದರ್ಶನದಲ್ಲಿ ದೇಶವು ಸೂಪರ್ ಪವರ್" ಆಗಬಹುದು- ಮಧ್ಯಪ್ರದೇಶದ ಹಿರಿಯ ಐಎಎಸ್ ಅಧಿಕಾರಿ ನಿಯಾಜ್ ಖಾನ್.

IAS Niyaz Khan
ಐಎಎಸ್ ಅಧಿಕಾರಿ ನಿಯಾಜ್‌ ಖಾನ್‌

ಈಟಿವಿ ಭಾರತದೊಂದಿಗೆ ಐಎಎಸ್ ಅಧಿಕಾರಿ ನಿಯಾಜ್‌ ಖಾನ್‌ ವಿಶೇಷ ಸಂವಾದ

ಭೋಪಾಲ್(ಮಧ್ಯ ಪ್ರದೇಶ): ಭೂಗತ ಪಾತಕಿ ಅಬು ಸಲೇಂ ಕುರಿತು ಪುಸ್ತಕ ಬರೆದು ಗಮನ ಸೆಳೆದಿದ್ದ 2015ರ ಬ್ಯಾಚ್‌ನ ಐಎಎಸ್ ಅಧಿಕಾರಿ ನಿಯಾಜ್ ಖಾನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಜಾತಿ ವ್ಯವಸ್ಥೆಗೆ ಅರ್ಚಕರು ಕಾರಣ ಎಂದು ಇತ್ತೀಚೆಗೆ ನೀಡಿದ್ದ ಹೇಳಿಕೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ಮಧ್ಯಪ್ರದೇಶದ ಹಿರಿಯ ಐಎಎಸ್ ಅಧಿಕಾರಿ ನಿಯಾಜ್ ಖಾನ್ ಅವರು 'ದಿ ಗ್ರೇಟ್ ಬ್ರಾಹ್ಮಣ' ಎಂಬ ಶೀರ್ಷಿಕೆಯ ಪುಸ್ತಕವನ್ನು ಹೊರತಂದಿದ್ದಾರೆ.

'ದಿ ಗ್ರೇಟ್ ಬ್ರಾಹ್ಮಣ' ಪುಸ್ತಕವು ಬ್ರಾಹ್ಮಣರ ಉನ್ನತ ಐಕ್ಯೂ (ಬುದ್ಧಿಮತ್ತೆಯ ಪ್ರಮಾಣ) ಮಟ್ಟ, ಮೂರು ಸಾವಿರ ವರ್ಷಗಳ ಶ್ರೀಮಂತ ಇತಿಹಾಸ ಮತ್ತು ಸಮಾಜಕ್ಕೆ ಅವರ ಕೊಡುಗೆಗಳ ಬಗ್ಗೆ ಹೇಳುತ್ತದೆ. ಈ ಪುಸ್ತಕದಲ್ಲಿ ಬ್ರಾಹ್ಮಣರನ್ನು ಉನ್ನತ ಹುದ್ದೆಗಳಿಗೆ ನೇಮಿಸುವುದನ್ನು ಪ್ರತಿಪಾದಿಸುತ್ತದೆ. ಏಕೆಂದರೆ ಅವರು ಹೆಚ್ಚಿನ ಐಕ್ಯೂ ಮಟ್ಟವನ್ನು ಹೊಂದಿದ್ದಾರೆ ಎಂದು ಹೇಳಿದ್ಧಾರೆ.

'ಈಟಿವಿ ಭಾರತ'ದೊಂದಿಗೆ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಖಾನ್​ "ತಮ್ಮ ಪುಸ್ತಕಕ್ಕೂ ಹಾಗೂ ಭಾಗವತ್ ಅವರ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. "ಭಾಗವತ್​​ ಬಗ್ಗೆ ನನಗೆ ತುಂಬಾ ಗೌರವವಿದೆ ಮತ್ತು ಈ ಹಿಂದೆ ನಾನು ಅವರ ಸಿದ್ಧಾಂತಗಳ ಬಗ್ಗೆ ಒಂದೆರಡು ಟ್ವೀಟ್‌ಗಳನ್ನು ಮಾಡಿದ್ದೇನೆ. ಆದರೆ ನನ್ನ ಪುಸ್ತಕಕ್ಕೂ ಅವರ ಹೇಳಿಕೆಗಳಿಗೂ ಯಾವುದೇ ಸಂಬಂಧವಿಲ್ಲ. ನಾನು ಒಂದೂವರೆ ವರ್ಷಗಳ ಹಿಂದೆ ಸಂಶೋಧನಾ ಕಾರ್ಯವನ್ನು ಮಾಡಿದ್ದೇನೆ ಮತ್ತು ಅಂದಿನಿಂದ ನಾನು ಪುಸ್ತಕ ಬರೆಯಲಾರಂಭಿಸಿದೆ" ಎಂದು ತಿಳಿಸಿದರು.

ದೇಶ 'ಸೂಪರ್ ಪವರ್' ಆಗಬಹುದು: ಪುಸ್ತಕ ವಿಷಯದ ಕುರಿತು ಮಾತನಾಡಿದ ಖಾನ್, "ನಾನು ಶ್ರೇಷ್ಠ ಬ್ರಾಹ್ಮಣ ವಿದ್ವಾಂಸ ಚಾಣಕ್ಯ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಅವರು ತುಂಬಾ ಪ್ರತಿಭಾವಂತರಾಗಿದ್ದಾರೆ. ಆದ್ದರಿಂದ ನಾನು ಬ್ರಾಹ್ಮಣರ ಅಸಾಮಾನ್ಯ ಇತಿಹಾಸವನ್ನು ಹೇಳುವ ಪುಸ್ತಕವನ್ನು ಹೊರತರಬೇಕೆಂದು ನಾನು ಭಾವಿಸಿದೆ. ಇದು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ಅವರಿಗೆ ಎಲ್ಲಾ ಹುದ್ದೆಗಳನ್ನು ನೀಡಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ, ಅವರು ಹೆಚ್ಚಿನ ಐಕ್ಯೂ ಮಟ್ಟವನ್ನು ಹೊಂದಿದ್ದರಿಂದ ಮತ್ತು ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಸಿಕ್ಕರೆ ಅವರ ಮಾರ್ಗದರ್ಶನದಲ್ಲಿ ದೇಶವು ಸೂಪರ್ ಪವರ್" ಆಗಬಹುದು ಎಂದರು.

ನಿರ್ದಿಷ್ಟ ಜಾತಿಯ ಕಡೆಗೆ ಒಲವು ತೋರುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, "ನಾನು ಬರಹಗಾರ. ಬರಹಗಾರನಿಗೆ ಯಾವುದೇ ಧರ್ಮವಿಲ್ಲ. ಈ ಹಿಂದೆ 'ತಲಾಖ್ ತಲಾಖ್ ತಲಾಖ್' ಮತ್ತು 'ಅನ್‌ಟೋಲ್ಡ್ ಸೀಕ್ರೆಟ್ ಆಫ್ ಮೈ ಆಶ್ರಮ್' ಎಂಬ ಪುಸ್ತಕಗಳನ್ನು ಬರೆದಿದ್ದೇನೆ. ಮೂರು ಸಾವಿರ ವರ್ಷಗಳ ಶ್ರೀಮಂತ ಇತಿಹಾಸ ಹೊಂದಿರುವ ಬ್ರಾಹ್ಮಣರ ಬಗ್ಗೆ ಬರೆಯುವುದು ಉತ್ತಮ ವಿಷಯ ಎಂದು ನಾನು ಭಾವಿಸಿದೆ. ಆದ್ದರಿಂದ ನಾನು ಪುಸ್ತಕವನ್ನು ಬರೆದಿದ್ದೇನೆ" ಎಂದರು. ಈ ಪುಸ್ತಕ ಮಾರ್ಚ್ ಮೊದಲ ವಾರದಲ್ಲಿ ಪ್ರಕಟವಾಗಲಿದೆ.

ಇಲ್ಲಿಯವರೆಗೆ 7 ಪುಸ್ತಕ ಬರೆದ ನಿಯಾಜ್‌ ಖಾನ್‌: ನೇರ ನುಡಿಯ ವ್ಯಕ್ತಿತ್ವ ಹೊಂದಿರುವ ನಿಯಾಜ್​ ಖಾನ್​​ ಈ ವರೆಗೆ ಏಳು ಪುಸ್ತಕಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೇ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಟ್ವೀಟ್​ ಮಾಡಿ ಬಹಳ ಚರ್ಚೆಯಲ್ಲಿದ್ದರು. ಕಾಶ್ಮೀರ ಫೈಲ್ ಬ್ರಾಹ್ಮಣರ ನೋವನ್ನು ತೋರಿಸುತ್ತದೆ. ಕಾಶ್ಮೀರದಲ್ಲಿ ಎಲ್ಲ ಗೌರವಗಳೊಂದಿಗೆ ಸುರಕ್ಷಿತವಾಗಿ ಬದುಕಲು ಅವರಿಗೆ ಅವಕಾಶ ನೀಡಬೇಕು. ಜತೆಗೆ ಹಲವಾರು ರಾಜ್ಯಗಳಾದ್ಯಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮರ ಹತ್ಯೆಗಳು ನಡೆಯುತ್ತಿದೆ. ಇದನ್ನು ತೋರಿಸಲು ನಿರ್ಮಾಪಕರು ಚಲನಚಿತ್ರವನ್ನು ಮಾಡಬೇಕು ಎಂದು ಹೇಳಿದ್ದರು. ಮುಸ್ಲಿಮರು ಕೀಟಗಳಲ್ಲ, ಅವರು ಮನುಷ್ಯರು ಮತ್ತು ದೇಶದ ಪ್ರಜೆಗಳು ಎಂದು ಅಧಿಕಾರಿ ಹೇಳಿದ್ದರು. ಇದರ ಜತೆಗೆ ಅವರು ಮುಸ್ಲಿಮರ ಹತ್ಯಾಕಾಂಡದ ಬಗ್ಗೆ ಪುಸ್ತಕವನ್ನು ಬರೆಯುವುದಾಗಿ ಹೇಳಿದ್ದರು.

ಇದನ್ನೂ ಓದಿ: ಕಾಶ್ಮೀರಿ ಫೈಲ್ಸ್‌: 'ನನ್ನ ಟೀಕೆಗಳು ತಪ್ಪಾಗಿ ಅರ್ಥವಾಗಿದ್ದರೆ ಕ್ಷಮಿಸಿ'- ನಡವ್​ ಲಪಿಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.