ETV Bharat / bharat

ವಿಶ್ವದ 7.7 ಲಕ್ಷ ಜನರು ಕೋವಿಡ್​ಗೆ ಬಲಿ..!

author img

By

Published : Aug 17, 2020, 5:56 PM IST

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್

180 ಮಂದಿಯನ್ನು ಬಲಿ ಪಡೆದು, 6000 ಜನರನ್ನು ಗಾಯಗೊಳಿಸಿದ ಭಾರಿ ಸ್ಫೋಟದ ಬಳಿಕ ಲೆಬನಾನ್ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕೇಲವ 6 ಮಿಲಿಯನ್​ ಜನಸಂಖ್ಯೆ ಹೊಂದಿರುವ ಲೆಬನಾನ್​ನಲ್ಲಿ ಈವರೆಗೆ 8,881 ಜನರು ಸೋಂಕಿಗೆ ಒಳಗಾಗಿದ್ದು, 103 ಮಂದಿ ಬಲಿಯಾಗಿದ್ದಾರೆ.

ಹೈದರಾಬಾದ್​: ಜಗದಗಲ ಬರೋಬ್ಬರಿ 2,18,17,650 ಜನರಿಗೆ ಮಾರಣಾಂತಿಕ ಕೊರೊನಾ ವೈರಸ್​ ಅಂಟಿದ್ದು, 7,72,751 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಪೈಕಿ ಅರ್ಧಕ್ಕೂ ಹೆಚ್ಚು ಅಂದರೆ 1,45,53,191 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 55,66,600 ಇದ್ದು, ಮೃತರ ಸಂಖ್ಯೆ 1,73,128ಕ್ಕೆ ಏರಿಕೆಯಾಗಿದೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 33,40,197 ಪ್ರಕರಣಗಳು ಹಾಗೂ 1,07,879 ಸಾವುಗಳು ವರದಿಯಾಗಿವೆ.

ಮೂರನೇ ಸ್ಥಾನಕ್ಕೆ ಜಿಗಿದಿರುವ ಭಾರತದಲ್ಲಿ 26,47,316 ಸೋಂಕಿತರು ಪತ್ತೆಯಾಗಿದ್ದು, ಈವರೆಗೆ 51,045 ಮಂದಿ ಮೃತಪಟ್ಟಿದ್ದಾರೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 9,22,853 ಕೇಸ್​ಗಳಿದ್ದು, 15,685 ಜನರು ಸಾವನ್ನಪ್ಪಿದ್ದಾರೆ.

ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಮತ್ತೆ ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 84,849 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.

ಆಗಸ್ಟ್​ 4 ರಂದು 180 ಮಂದಿಯನ್ನು ಬಲಿ ಪಡೆದು, 6000 ಜನರನ್ನು ಗಾಯಗೊಳಿಸಿದ ಭಾರಿ ಸ್ಫೋಟದ ಬಳಿಕ ಲೆಬನಾನ್ ದೇಶದಲ್ಲಿ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕೇಲವ 6 ಮಿಲಿಯನ್​ ಜನಸಂಖ್ಯೆ ಹೊಂದಿರುವ ಲೆಬನಾನ್​ನಲ್ಲಿ ಈವರೆಗೆ 8,881 ಜನರು ಸೋಂಕಿಗೆ ಒಳಗಾಗಿದ್ದು, 103 ಮಂದಿ ಬಲಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.