ETV Bharat / bharat

'ತಪ್ಪಿತಸ್ಥರನ್ನು ಸುಮ್ಮನೆ ಬಿಡಬೇಡಿ, ತಕ್ಕ ಶಿಕ್ಷೆ ನೀಡಿ': ನೋವಿನ ನಡುವೆ ಸಂತ್ರಸ್ತೆಯ ಕೊನೆಯ ನುಡಿ

author img

By

Published : Dec 7, 2019, 4:51 PM IST

ನನ್ನ ಸಾವಿಗೆ ಕಾರಣರಾಗಿರುವ ದುಷ್ಕರ್ಮಿಗಳನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬೇಡಿ ಎಂದು ಉನ್ನಾವೋ ಪ್ರಕರಣದ ಯುವತಿ ಕೊನೆಯುಸಿರಿಗೂ ಮುನ್ನ ಹೇಳಿದ್ದಾಳೆ.

Unnao rape victim
ಉನ್ನಾವೋ ರೇಪ್ ಸಂತ್ರಸ್ತೆ

ಉನ್ನಾವೋ: ಅತ್ಯಾಚಾರಕ್ಕೊಳಗಾದ ಯುವತಿ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದ ವೇಳೆ ಅಡ್ಡಗಟ್ಟಿ ಆಕೆಯ ಮೇಲೆ ಪೆಟ್ರೋಲ್​​​​ ಸುರಿದು ಸುಟ್ಟು ಹಾಕುವ ಯತ್ನ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ನವದೆಹಲಿಯ ಸಫ್ಧರ್​​ ಜಂಗ್​ ​ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಕೊನೆಯುಸಿರೆಳೆಯುವುದಕ್ಕೂ ಮುನ್ನ ತನ್ನ ಮನದಾಳದ ಮಾತು ಹೇಳಿಕೊಂಡಿದ್ದು, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬೇಡಿ, ಅವರಿಗೆ ತಕ್ಕ ಶಾಸ್ತಿ ಎಂದು ಹೇಳಿಕೊಂಡಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ನನ್ನ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲು ಯತ್ನಿಸಿದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬೇಡಿ ಎಂದು ಆಕೆ ಕೊನೆಯಾಸೆ ಹೇಳಿಕೊಂಡಿದ್ದಾಳೆ.

ಆಸ್ಪತ್ರೆಯಲ್ಲಿ ಸಂತ್ರಸ್ತೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಡಾ. ಸುನೀಲ್​ ಗುಪ್ತಾ ಮಾತನಾಡಿದ್ದು, ಆಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಬಂದಾಗ ಮಾತನಾಡುತ್ತಿದ್ದಳು. ಆದರೆ ತದನಂತರ ಆಕೆ ಚಿಕಿತ್ಸೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ

2017ರಲ್ಲಿ ಉತ್ತರ ಪ್ರದೇಶದಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು.ಈ ಪ್ರಕರಣ ದೇಶಾದ್ಯಂತ ಸಂಚಲನ ಉಂಟುಮಾಡಿತ್ತು. ಜತೆಗೆ ಇದರಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕರ ಹೆಸರು ಮುಖ್ಯವಾಗಿ ಕೇಳಿಬಂದಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಜಾಮೀನು ಪಡೆದುಕೊಂಡು ಹೊರಬಂದು ಇದೀಗ ಈ ಕೃತ್ಯವೆಸಗಿದ್ದಾನೆ.

Intro:Body:

ತಪ್ಪಿತಸ್ಥರಿಗೆ ಸುಮ್ಮನೆ ಬಿಡಬೇಡಿ, ತಕ್ಕ ಶಿಕ್ಷೆ ನೀಡಿ... ಉನ್ನಾವೋ ರೇಪ್ ಸಂತ್ರಸ್ತೆ ಕೊನೆ ಮಾತು! 



ಉನ್ನಾವೋ: ಅತ್ಯಾಚಾರಕ್ಕೊಳಗಾಗಿದ್ದ ಯುವತಿಯೋರ್ವಳು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದ ವೇಳೆ ಅಡ್ಡಗಟ್ಟಿ ಆಕೆಯ ಮೇಲೆ ಪೆಟ್ರೋಲ್​​​​ ಸುರಿದು ಸುಟ್ಟು ಹಾಕುವ ಯತ್ನ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ನವದೆಹಲಿಯ ಸಫ್ಧರ್​​ ಜಂಗ್​ ​ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.



ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಕೊನೆಯುಸಿರೆಳೆಯುವುದಕ್ಕೂ ಮುಂಚಿತವಾಗಿ ತನ್ನ ಮನದಾಳದ ಮಾತು ಹೇಳಿಕೊಂಡಿದ್ದು, ತಪ್ಪಿತಸ್ಥರಿಗೆ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬೇಡಿ, ಅವರಿಗೆ ತಕ್ಕ ಶಿಕ್ಷೆ ನೀಡಿ ಎಂದು ಹೇಳಿಕೊಂಡಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ನನ್ನ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲು ಯತ್ನಿಸಿದವರನ್ನ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬೇಡಿ ಎಂದು ಆಕೆ ಕೊನೆಯಾಸೆ ಹೇಳಿಕೊಂಡಿದ್ದಾಳೆ. 



ಆಸ್ಪತ್ರೆಯಲ್ಲಿ ಸಂತ್ರಸ್ತೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಡಾ. ಸುನೀಲ್​ ಗುಪ್ತಾ ಇದೇ ವಿಷಯವಾಗಿ ಮಾತನಾಡಿದ್ದು, ಆಸ್ಪತ್ರೆಗೆ ಆಕೆಯನ್ನ ಕರೆದುಕೊಂಡು ಬಂದಾಗ ಮಾತನಾಡುತ್ತಿದ್ದಳು. ಆದರೆ ತದನಂತರ ಆಕೆ ಚಿಕಿತ್ಸೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.



2017ರಲ್ಲಿ ಉತ್ತರ ಪ್ರದೇಶದಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು.ಈ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಜತೆಗೆ ಇದರಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕರ ಹೆಸರು ಸಹ ಕೇಳಿಬಂದಿತ್ತು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.