ETV Bharat / bharat

ಪ್ರವಾಸಿ ತಾಣವಾದ 'ಕಾರ್ಗಿಲ್‌' ವಾರ್‌ ಫೀಲ್ಡ್‌.. ಅಲ್ಲಿ 'ಉಳಿದವರು ಕಂಡಂತೆ'!

author img

By

Published : Jul 26, 2019, 5:35 PM IST

ಕಾರ್ಗಿಲ್​ ಯುದ್ಧದ ಕಹಿ ನೆನಪುಗಳ ಹೊದ್ದು ನಿಂತಿರುವ ಕಾರ್ಗಿಲ್​ ಸಮೀಪದ ಹುಂದಾರಮನ್​ ಹಳ್ಳಿ

ಪಾಕ್ ಆಕ್ರಮಿಸಿಕೊಂಡಿದ್ದ ಭಾರತದ ಗಡಿ ಭಾಗವನ್ನು 1971ರಲ್ಲಿ ವಾಪಾಸ್​ ಗೆದ್ದುಕೊಂಡಿತು ಭಾರತೀಯ ಸೇನೆ. ಕಾರ್ಗಿಲ್​ ಯುದ್ಧ ಭೂಮಿಯ ಕರಾಳತೆಯನ್ನು ಈಗ ನಿರ್ಮಾಣವಾಗಿರುವ ಮ್ಯೂಸಿಯಂ ತೆರೆದಿಡುತ್ತಿದೆ.

ಹುಂದಾರಮನ್‌(ಕಾರ್ಗಿಲ್‌): ಯುದ್ಧ ಘಟಿಸಿ ದಶಕಗಳೆ ಕಳೆದರೂ ಈಗಲೂ ಅಂದಿನ ಕರಾಳತೆಯನ್ನು ತನ್ನೊಳಗೆ ಹುದುಗಿಸಿಕೊಂಡು, ಈಗ ಪ್ರವಾಸಿ ತಾಣವಾಗಿ ವಿದೇಶಿಗರನ್ನು ಕೈಬೀಸಿ ಕರೆಯುತ್ತಿದೆ ಆ ಪುಟ್ಟ ಹಳ್ಳಿ. 1971- 1999ರ ಆ ಎರಡೂ ಇಂಡೋ-ಪಾಕ್​ ಸಮರದ ಕುರುಹುಗಳು ಈಗಲೂ ಹಚ್ಚಹಸಿರಾಗಿ ಕಾರ್ಗಿಲ್​ ಸಮೀಪದ ಹುಂದಾರಮನ್​ ಗ್ರಾಮದಲ್ಲಿ ಉಳಿದಿವೆ.

ಕಾರ್ಗಿಲ್​ ಯುದ್ಧದ ಕಥೆ ಹೇಳುವ ಹುಂದಾರಮನ್​ ಹಳ್ಳಿ..

ಪಾಕ್‌ ಆಕ್ರಮಿಸಿದ್ದ ಗಡಿ ಭಾಗ ಹುಂದಾರಮನ್ ಗ್ರಾಮದಲ್ಲಿ ಶಿಯಾ ಮುಸ್ಲಿಮ ಮೂಲದ ಪುರ್ಗಿ ಬುಡಕಟ್ಟು ಸಮುದಾಯದ 32 ಕುಟುಂಬಗಳು ವಾಸವಾಗಿವೆ. ಆ ಕುಟುಂಬಗಳ ಬಹುತೇಕ ಪುರುಷರು ಸೇನೆಯ ಕಾವಲುಗಾರರಾಗಿದ್ದಾರೆ. ಮಹಿಳೆಯರು ಕೃಷಿ, ಪ್ರಾಣಿ ಸಾಕಣೆಯಿಂದ ಜೀವನ ಸಾಗಿಸುತ್ತಿದ್ದಾರೆ.

ಕಾರ್ಗಿಲ್‌ ಜಿಲ್ಲೆಯ ಹುಂದಾರಮನ್‌ ಭಾರತೀಯ ಇತಿಹಾಸದ ಪುಟ ಸೇರಿದೆ. ಯುದ್ಧದ ಪಳಿಯುಳಿಕೆಗಳೆಲ್ಲವೂ ಈಗಿನ ಮ್ಯೂಸಿಯಂನಲ್ಲಿದ್ದು. ಯುದ್ಧದಿಂದ ನಾಶವಾಗಿರುವ ಹುಂದಾರಮನ್ ಹಳ್ಳಿ ಸದಾ ನಿದ್ರಿಸುವ ಮರಳು ಭೂಮಿಯಂತಿದೆ.

1971ರ ಯುದ್ಧದಲ್ಲಿ ಪಾಕ್ ಸೇನೆ ಬಳಸಿದ ಫಸ್ಟ್‌ಏಯ್ಡ್‌ ಬಾಕ್ಸ್‌ಗಳು, ನಿಸ್ತೇಜ ಸೆಲ್‌ಗಳು, ಸೇನಾ ಸಾಧನಗಳು, ಒಣಗಿದ ಆಹಾರ, ಮದ್ದು-ಗುಂಡುಗಳನ್ನ ಸೇರಿಸಿ ಮ್ಯೂಸಿಯಂ ಕಟ್ಟಲಾಗಿದೆ. 2015ರ ಬಳಿಕ ಅಲ್ಲಿ ವಾಸವಿದ್ದ ಜನರಿಂದಲೇ ವಸ್ತುಗಳನ್ನು ಸಂಗ್ರಹಿಸಿದ್ದೇವೆ. ಈಗ ಸಣ್ಣ ಮ್ಯೂಸಿಯಂ ಮಾಡಿ, ವ್ಯವಸ್ಥಿತವಾಗಿರಿಸಿದ್ದೇವೆ ಎಂದು ವಸ್ತು ಸಂಗ್ರಹಾಲಯ ನಿರ್ವಹಿಸುತ್ತಿರುವ ಮೊಹ್ಮದ್‌ ಇಲಿಯಾಸ್ ತಿಳಿಸಿದರು.

Intro:Body:

1971-1999ರ 'ಕಾರ್ಗಿಲ್‌' ವಾರ್‌ ಫೀಲ್ಡ್‌.. ಅಲ್ಲಿ'ಉಳಿದವರು ಕಂಡವರಂತೆ'!



ಹುಂದಾರಮನ್‌(ಕಾರ್ಗಿಲ್‌): ಇತಿಹಾಸದ ಎರಡು ಮಹಾನ್‌ ಮೈಲುಗಲ್ಲಿಗೆ ಸಾಕ್ಷಿಯಾಗಿದೆ ಕಾರ್ಗಿಲ್‌ನ ಆ ಒಂದು ಸಣ್ಣ ಹಳ್ಳಿ. ಈಗಲೂ ಯುದ್ಧ ಭೂಮಿಯ ಕರಾಳತೆ ತನ್ನೊಳಗೆ ಹುದುಗಿಸಿಕೊಂಡಿದೆ. ಪಾಕ್‌ ಆಕ್ರಮಿಸಿದ್ದ ತಾಯಿ ಭೂಮಿಯನ್ನ ಮತ್ತೆ ವಶಕ್ಕೆ ಪಡೆದಿದ್ದರು ಹೆಮ್ಮೆಯ ಭಾರತೀಯ ಯೋಧರು.



ಪುರುಷರೆಲ್ಲರೂ ಭಾರತೀಯ ಸೇನೆಯ ಕಾವಲುಗಾರರು!

250 ಮಂದಿ ನೆಲೆಸಿರುವ ಹುಂದಾರಮನ್‌, ಭಾರತ-ಪಾಕ್‌ ಗಡಿಯಂಚಿನ ಕುಗ್ರಾಮ. 32 ಕುಟುಂಬಗಳಲ್ಲಿರುವ ಬಹುತೇಕ ಪುರುಷರು ಸೇನೆಯ ಕಾವಲುಗಾರರಾಗಿದ್ದಾರೆ. ಮಹಿಳೆಯರು ಅಷ್ಟೋ ಇಷ್ಟೋ ಕೃಷಿ ಮಾಡ್ತಿದ್ದಾರೆ. ಆದರೆ, 1971-1999.. ಇಂಡೋ- ಪಾಕ್‌ ಮಧ್ಯೆ ನಡೆದ 2 ಯುದ್ಧಗಳಿಗೆ ಈ ಹಳ್ಳಿ ಸಾಕ್ಷಿಯಾಗಿದೆ. ಕಾರ್ಗಿಲ್‌ ಜಿಲ್ಲೆಯ ಹುಂದಾರಮನ್‌, ಭಾರತೀಯ ಇತಿಹಾಸದ ಪುಟ ಸೇರಿದೆ. 



ಯುದ್ಧದ ಪಳಯುಳಿಕೆಗಳೆಲ್ಲವೂ ಇಲ್ಲಿನ ಮ್ಯೂಸಿಯಂನಲ್ಲಿವೆ!

ಯುದ್ಧದಿಂದಾಗಿ ಧ್ವಂಸಗೊಂಡ ಈ ಹಳ್ಳಿ, ಸದಾ ನಿದ್ರಿಸುವ ಮರಳು ಭೂಮಿಯಂತಿದೆ. 1971ರ ಯುದ್ಧದಲ್ಲಿ ಪಾಕ್ ಸೇನೆ ಬಳಸಿದ ಫಸ್ಟ್‌ಏಯ್ಡ್‌ ಬಾಕ್ಸ್‌ಗಳು, ನಿಸ್ತೇಜ ಸೆಲ್‌ಗಳು, ಸೇನಾ ಸಾಧನಗಳು, ಒಣಗಿದ ಆಹಾರ, ಮದ್ದು-ಗುಂಡುಗಳನ್ನ ಸೇರಿಸಿ ಮ್ಯೂಸಿಯಂ ಕಟ್ಟಲಾಗಿದೆ. '2015ರ ಬಳಿಕ ಎಲ್ಲ ವಸ್ತುಗಳನ್ನೂ ಹಳ್ಳಿಯ ಜನರಿಂದಲೇ ಸಂಗ್ರಹಿಸಿದ್ದೇವೆ. ಸಣ್ಣ ಮ್ಯೂಸಿಯಂ ಮಾಡಿ ವ್ಯವಸ್ಥಿತವಾಗಿರಿಸಿದ್ದೇವೆ ಅಂತಾರೆ ವಸ್ತು ಸಂಗ್ರಹಾಲಯ ನಿರ್ವಹಿಸುತ್ತಿರುವ ಮೊಹ್ಮದ್‌ ಇಲಿಯಾಸ್. 



ಯುದ್ಧದ ವೇಳೆ ಇವರಿಗೆ ನಿದ್ದೆ ಇರಲಿಲ್ಲ, ಈಗಲೂ ಅದೇ ಭೀತಿ!

ಸೈನಿಕರು ಉಳಿದಿದ್ದ ತಾತ್ಕಾಲಿಕ ನೆಲೆಗಳು ಧ್ವಂಸಗೊಂಡಿದ್ದು, ಅವು ವಾರ್‌ನ ಕುರುಹಗಳಾಗಿವೆ. ಕಾರ್ಗಿಲ್‌ ನಗರದಿಂದ ಹುಂದಾರಮನ್‌ 12 ಕಿ.ಮೀ ದೂರದಲ್ಲಿದೆ. ಈ ಹಳ್ಳಿಯನ್ನ ಪಾಕ್‌ ಆಕ್ರಮಿಸಿತ್ತು. ಆದರೆ, 1971ರ ಬಳಿಕ ಭಾರತ ಮತ್ತೆ ವಶಪಡಿಸಿಕೊಂಡಿದೆ.  ಕಾರ್ಗಿಲ್‌ ಯುದ್ಧದ ವೇಳೆ ಇಲ್ಲಿನ 32 ಕುಟುಂಬಗಳನ್ನ ಒತ್ತಾಯಪೂರ್ವಕವಾಗಿ ಇಲ್ಲಿಂದ 500 ಮೀಟರ್‌ ದೂರ ಸ್ಥಳಾಂತರಿಸಲಾಗಿದೆ.



ಕರಾಳತೆ ಸಾರುವ ಮರಳುಭೂಮಿಯಲ್ಲೀಗ ಅಭಿವೃದ್ಧಿ ಪರ್ವ!

ಪ್ರವಾಸಿಗರಿಗೆ ಇಲ್ಲಿ ಸೇನೆ ಹಾಕಿದ ಬೋರ್ಡ್‌ಗಳು 2 ಯುದ್ಧದ ಕರಾಳತೆ ಹೇಳುತ್ತವೆ. ಇಲ್ಲಿನವರೆಲ್ಲ ಶಿಯಾ ಮುಸ್ಲಿಂಮರು. ಮೂಲತಃ ಪುರ್ಗಿ ಬುಡಕಟ್ಟು ಸಮುದಾಯದವರು. ಕೃಷಿ ಮತ್ತು ಜಾನುವಾರು ಸಾಕಣೆ ಕಸುಬು. ಕೆಲ ಜೀವನಾಂಶಕ ಸರಕುಗಳನ್ನ ಕಾರ್ಗಿಲ್‌ ಪಟ್ಟಣದಿಂದ ತರ್ತಾರೆ. ತಾವು ಬೆಳೆದ ತಂಬಾಕು ಜೀವನಾಧಾರ. ಆದರೆ, ಇದು ಇವರ ಹೊಟ್ಟೆ ತುಂಬಿಸಲ್ಲ. 2006ರ ಬಳಿಕ ಅಭಿವೃದ್ಧಿಯಾಗ್ತಿವೆ. ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ವಾಹನ ಓಡಾಡಲು ರಸ್ತೆ ಆಗಿದ್ರಿಂದಾಗಿ ವಿದೇಶಿಗರೂ ಸೇರಿ ಪ್ರವಾಸಿಗರು ಇಲ್ಲಿಗೆ ಹೆಚ್ಚಾಗಿ ಬರ್ತಿದ್ದಾರೆ.


Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.