ETV Bharat / bharat

ಕೊರೊನಾಗೆ ಹೆದರಿ ರೈಲ್ವೆ ಟಿಕೆಟ್​​ ಬುಕ್ಕಿಂಗಿಂತ ಕ್ಯಾನ್ಸಲ್​ ಹೆಚ್ಚು

author img

By

Published : May 31, 2020, 8:29 PM IST

ರೈಲ್ವೆ ಟಿಕೆಟ್​​
ರೈಲ್ವೆ ಟಿಕೆಟ್​​

ಭಾರತೀಯ ರೈಲ್ವೆಯೂ ಟಿಕೆಟ್​​ ಕಾಯ್ದಿರಿಸುವಿಕೆ ಜೊತೆ ರದ್ದುಗೊಳಿಸುವ ಸೌಲಭ್ಯವನ್ನು ಜಾರಿಗೆ ತಂದಿದೆ. ಅಗತ್ಯತೆಗಳಿಗೆ ಅನುಗುಣವಾಗಿ ಬುಕ್ಕಿಂಗ್/ ರದ್ದತಿಗಾಗಿ ಮೀಸಲಾತಿ ಕೌಂಟರ್‌ಗಳನ್ನು ತೆರೆಯುವಂತೆ ವಲಯವಾರು ಅಧಿಕಾರಿಗಳಿಗೆ ರೈಲ್ವೆ ಇಲಾಖೆ ಸೂಚನೆ ನೀಡಿದೆ.

ನೋಯ್ಡಾ: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಟಿಕೆಟ್​ ಕಾಯ್ದಿರಿಸುವಿಕೆ ಮತ್ತು ರದ್ದುಗೊಳಿಸುವ ಸೌಲಭ್ಯವನ್ನು 2020ರ ಮೇ 22ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

ಸ್ಥಳೀಯ ಜನರ ಅಗತ್ಯತೆಗಳಿಗೆ ಅನುಗುಣವಾಗಿ ಬುಕ್ಕಿಂಗ್​/ ರದ್ದತಿಗೆ ಮೀಸಲಾತಿ ಕೌಂಟರ್‌ಗಳು ತೆರೆಯುವಂತೆ ವಲಯ ರೈಲ್ವೆಗೆ ಸೂಚನೆ ನೀಡಿದೆ.

ನೋಯ್ಡಾದ ಸೆಕ್ಟರ್ -33 ರಲ್ಲಿ ಮೀಸಲಾತಿ ಕೌಂಟರ್​ಗೆ ಬುಕಿಂಗ್​ಗಾಗಿ ಹಲವು ಪ್ರಯಾಣಿಕರು ಬರುತ್ತಿರುವಂತೆ ಕಂಡರೇ, ಬಹುತೇಕರು ಟಿಕೆಟ್ ರದ್ಧತಿಗಾಗಿ ಬಂದಿದ್ದರು. ಮೂಲಗಳ ಪ್ರಕಾರ, 8.47 ಲಕ್ಷ ರೂ. ಮೌಲ್ಯದ ಟಿಕೆಟ್ ಕಾಯ್ದಿರಿಸಿದ್ದರು. 16. 73 ಲಕ್ಷ ಟಿಕೆಟ್​ಗಳು ರದ್ದಾಗಿವೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮೀಸಲಾತಿಗಿಂತ ರದ್ದು ಉದ್ದೇಶಕ್ಕೆ ಹೆಚ್ಚಿನ ಪ್ರಯಾಣಿಕರು ಬರುತ್ತಿದ್ದಾರೆ ಎಂದು ಮುಖ್ಯ ರಿಸರ್ವ್​ ಮೇಲ್ವಿಚಾರಕ ಸುರೇಶ್ ಚಂದ್ ತ್ಯಾಗಿ ಅವರು ಹೇಳಿದರು.

ಜೂನ್ 1ರಿಂದ ಭಾರತೀಯ ರೈಲ್ವೆ 200 ರೈಲುಗಳ ಕಾರ್ಯಾಚರಣೆ ಪ್ರಾರಂಭಿಸಲಿದೆ. ಟಿಕೆಟ್‌ಗಳನ್ನು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಅಪ್ಲಿಕೇಷನ್‌ನ ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.