ETV Bharat / bharat

ಗ್ರಾಹಕರ ನೆಟ್‌ವರ್ಕ್‌ಗೆ ಹಾನಿ ಮಾಡುವ ದುರುದ್ದೇಶದಿಂದ ಆಂಧ್ರದ ಸಿಐಡಿ ತನಿಖೆ: ಮಾರ್ಗದರ್ಶಿ ಸಂಸ್ಥೆಯ ಹೇಳಿಕೆ

author img

By

Published : Jul 11, 2023, 10:58 PM IST

Andhra CID harassing our subscriber network, making inquiries with malicious intentions: Margadarsi Chit Fund
ಮಾರ್ಗದರ್ಶಿ ಗ್ರಾಹಕರ ನೆಟ್‌ವರ್ಕ್‌ಗೆ ಹಾನಿ ಮಾಡುವ ದುರುದ್ದೇಶದಿಂದ ಆಂಧ್ರದ ಸಿಐಡಿ ತನಿಖೆ: ಸಂಸ್ಥೆಯ ಹೇಳಿಕೆ

ಮಾರ್ಗದರ್ಶಿ ಮತ್ತು ಅದರ ಗ್ರಾಹಕರ ನೆಟ್‌ವರ್ಕ್‌ಗೆ ಹಾನಿ ಮಾಡುವ ದುರುದ್ದೇಶದಿಂದ ಆಂಧ್ರಪ್ರದೇಶದ ಸಿಐಡಿ ವಿಚಾರಣೆ ನಡೆಸುತ್ತಿದೆ ಎಂದು ಮಾರ್ಗದರ್ಶಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ತಿಳಿಸಿದೆ.

ಹೈದರಾಬಾದ್: ಮಾರ್ಗದರ್ಶಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ಯಾವುದೇ ಆದಾಯ ತೆರಿಗೆ ನಿಬಂಧನೆಗಳನ್ನು ಉಲ್ಲಂಘಿಸಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಎಲ್ಲ ವ್ಯವಹಾರ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿದೆ ಎಂದು ಸಂಸ್ಥೆ ಮಂಗಳವಾರ ಹೇಳಿದೆ. ಇದೇ ವೇಳೆ, ಕಂಪನಿಯ ಕಾರ್ಯಚಟುವಟಿಕೆಯಲ್ಲಿನ ವಿಶ್ವಾಸಕ್ಕಾಗಿ ತನ್ನ ಚಂದಾದಾರರಿಗೆ ಸಂಸ್ಥೆ ಧನ್ಯವಾದ ತಿಳಿಸಿದೆ.

ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆ (ಎಪಿ-ಸಿಐಡಿ)ಯು ಸಂಪೂರ್ಣವಾಗಿ ಯೋಜಿತ, ಸುಳ್ಳು ಮತ್ತು ಯಾವುದೇ ಅರ್ಹತೆ ಇಲ್ಲದ ಹೊಸ ನೋಟಿಸ್‌ಗಳನ್ನು ಕಳುಹಿಸುವ ಮೂಲಕ ತನ್ನ ಚಂದಾದಾರರಿಗೆ ಕಿರುಕುಳ ನೀಡುತ್ತಿದೆ ಎಂದು ಮಾರ್ಗದರ್ಶಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕಂಪನಿಯು ತನ್ನ ವ್ಯವಹಾರವನ್ನು ಚಿಟ್ ಫಂಡ್ ವ್ಯವಹಾರಕ್ಕೆ ನಿಗದಿಪಡಿಸಿದ ನಿಯಂತ್ರಕ ಚೌಕಟ್ಟಿನೊಳಗೆ ಬಹಳ ವಿವೇಕದಿಂದ ನಡೆಸುತ್ತಿದೆ. ನಮ್ಮ ಆರ್ಥಿಕ ಶಿಸ್ತು, ನಮ್ಮ ಶಕ್ತಿಯಾಗಿದೆ. ಯಾವುದೇ ಸಮಯದಲ್ಲಿ ನಿಯಮಗಳ ಉಲ್ಲಂಘನೆಗೆ ನಾವು ಯಾವುದೇ ಅವಕಾಶವನ್ನು ನೀಡುವುದಿಲ್ಲ. ಆಂಧ್ರಪ್ರದೇಶದ ಸಿಐಡಿಯು ಮಾರ್ಗದರ್ಶಿ ವ್ಯವಹಾರ ಮತ್ತು ಅದರ ಗ್ರಾಹಕರ ನೆಟ್‌ವರ್ಕ್‌ಗೆ ಹಾನಿ ಮಾಡುವ ದುರುದ್ದೇಶಪೂರಿತ ಉದ್ದೇಶದಿಂದ ವಿಚಾರಣೆ ನಡೆಸುತ್ತಿದೆ ಎಂದು ಸಂಸ್ಥೆ ಆರೋಪಿಸಿದೆ.

ಚಿಟ್ ಸದಸ್ಯರಾಗಿ ದೃಢೀಕರಿಸಿದ ನಂತರವೂ ನಮ್ಮ ಎಲ್ಲ ಚಂದಾದಾರರು ತಮ್ಮ ವೈಯಕ್ತಿಕ ವಿವರಗಳಿಗೆ ಒತ್ತಾಯಿಸುವ ಮೂಲಕ ಭೀತಿ ಸೃಷ್ಟಿಸಲಾಗುತ್ತಿದೆ. ಜೊತೆಗೆ ಕಿರುಕುಳ ನೀಡುವ ಸಲುವಾಗಿ ಮಾರ್ಗದರ್ಶಿ ಮತ್ತು ಅದರ ಗ್ರಾಹಕರ ನೆಟ್‌ವರ್ಕ್‌ಗೆ ಹಾನಿ ಮಾಡುವ ದುರುದ್ದೇಶದಿಂದ ಸಿಐಡಿ ತನ್ನ ವಿಚಾರಣೆಗಳನ್ನು ಮುಂದುವರೆಸಿದೆ ಎಂದು ಹೇಳಿದೆ.

ವಿಶೇಷವಾಗಿ ಆಂಧ್ರಪ್ರದೇಶದ ಸಿಐಡಿಯು ಕಂಪನಿ ಬಗ್ಗೆ ತನಿಖೆ ನಡೆಸುತ್ತಿದೆ. ಚಿಟ್ ಫಂಡ್‌ನ ಆಯ್ದ ಸಂಖ್ಯೆಯ ಚಂದಾದಾರರಿಗೆ ಹೊಸ ನೋಟಿಸ್ ಕಳುಹಿಸುತ್ತಿದೆ. ದೃಢೀಕರಣವನ್ನು ಪಡೆದ ನಂತರ ಡಬ್ಲ್ಯೂಪಿ 45189/2022ರಲ್ಲಿನ ಆದೇಶದ ಮೂಲಕ ತೆಲಂಗಾಣದ ಹೈಕೋರ್ಟ್​, ಸಿಐಡಿ ಗೌಪ್ಯತೆ ವಿಷಯದಲ್ಲಿ ಮಧ್ಯಪ್ರವೇಶಿಸಬಾರದು. ಇದು ಸಂಪೂರ್ಣ ನಿರ್ಲಕ್ಷಿಸುವಿಕೆಯೊಂದಿಗೆ ನ್ಯಾಯಾಂಗ ನಿಂದನೆಯನ್ನು ಹೊರತುಪಡಿಸಿ ಬೇರೇನೂ ಅಲ್ಲ ಎಂದು ತಿಳಿಸಿದೆ.

ನ್ಯಾಯಾಲಯದ ನಿರ್ದೇಶನಗಳ ಹೊರತಾಗಿಯೂ ಎಪಿ ಸಿಐಡಿ ಕಂಪನಿಯ ಮಾನಹಾನಿ ಮಾಡುವ ಏಕೈಕ ಉದ್ದೇಶದಿಂದ ಪದೇ ಪದೇ ಪತ್ರಿಕಾ ಟಿಪ್ಪಣಿಗಳನ್ನು ಬಿಡುಗಡೆ ಮಾಡುತ್ತಿದೆ. ರಾಜ್ಯಾದ್ಯಂತ ತನ್ನ ಎಲ್ಲ ಗ್ರಾಹಕರಿಗೆ ಕಿರುಕುಳ ನೀಡುತ್ತಿದೆ. ಕಳಂಕರಹಿತವಾದ ಸ್ಥಾಪಿತ ವ್ಯವಹಾರವನ್ನು ಅಸ್ಥಿರಗೊಳಿಸುವ ದೊಡ್ಡ ಮತ್ತು ಆಳವಾದ ಸಂಚು ರೂಪಿಸಿದೆ. ಎಪಿ-ಸಿಐಡಿಯ ಉಲ್ಲಂಘನೆಗಳು ಸಂಪೂರ್ಣವಾಗಿ ಯೋಜಿತ, ಸುಳ್ಳು ಮತ್ತು ಅವುಗಳಿಗೆ ಯಾವುದೇ ಅರ್ಹತೆ ಇಲ್ಲ ಎಂದು ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆ ಹೇಳಿಕೆಯಲ್ಲಿ ವಿವರಿಸಿದೆ.

ಚಿಟ್ ಫಂಡ್ ಆಕ್ಟ್ -1982, ಆದಾಯ ತೆರಿಗೆ ಕಾಯ್ದೆ ಮತ್ತು ಅನ್ವಯವಾಗಬಹುದಾದ ಇತರ ಎಲ್ಲ ಕಾಯ್ದೆಗಳು ಸೇರಿದಂತೆ ಚಿಟ್ ಫಂಡ್ ವ್ಯವಹಾರವನ್ನು ನಿಯಂತ್ರಿಸುವ ನಿಯಮಗಳು ಮತ್ತು ನಿಬಂಧನೆಗಳ ಉಲ್ಲಂಘನೆಯ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಮಾರ್ಗದರ್ಶಿ ಎಂದಿಗೂ ತೊಡಗಿಸಿಕೊಂಡಿಲ್ಲ ಎಂದು ನಾವು ಮತ್ತೊಮ್ಮೆ ನಮ್ಮ ಚಂದಾದಾರರಿಗೆ ದೃಢವಾಗಿ ಭರವಸೆ ನೀಡುತ್ತೇವೆ. ಮಾರ್ಗದರ್ಶಿ ಸಂಸ್ಥೆಯನ್ನು ನಿಯಮಿತವಾಗಿ ಪರಿಶೀಲನೆಯ ಅಡಿಯಲ್ಲಿ ತೆರಿಗೆಗೆ ನಿರ್ಣಯಿಸಲಾಗುತ್ತದೆ. ಎಲ್ಲ ಕಾರಣಗಳ ಅನುಸರಣೆಗಳನ್ನು ಸಂಪೂರ್ಣವಾಗಿ ಖಾತ್ರಿಪಡಿಸುತ್ತದೆ. ಹೀಗಾಗಿ ಉಲ್ಲಂಘನೆಗಳಿಗೆ ಯಾವುದೇ ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಮಾರ್ಗದರ್ಶಿ ಚಿಟ್ ಫಂಡ್ : ಆಂಧ್ರಪ್ರದೇಶ ಸರ್ಕಾರದ ಕ್ರಮಕ್ಕೆ ತೆಲಂಗಾಣ ಹೈಕೋರ್ಟ್ ತಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.