ETV Bharat / bharat

ಬಿಹಾರದ ಛಾಪ್ರಾ ನಕಲಿ ಮದ್ಯ ಪ್ರಕರಣ; ಡಿಎಸ್‌ಪಿ, ಎಸ್‌ಎಚ್‌ಒ ಅಮಾನತು.. ತನಿಖೆಗೆ ಆದೇಶ

author img

By

Published : Dec 15, 2022, 2:05 PM IST

Bihar Chhapra Liquor Case
ಬಿಹಾರದ ಛಪ್ರಾ ಮದ್ಯ ಪ್ರಕರಣ

ರಾಜ್ಯ ಸರ್ಕಾರದ ಅಂಕಿ - ಅಂಶಗಳ ಪ್ರಕಾರ, ಬಿಹಾರದಲ್ಲಿ ಮದ್ಯ ನಿಷೇಧದ ನಂತರವು ಕಳೆದ ಒಂದು ವರ್ಷದಲ್ಲಿ ಸುಮಾರು 173 ಜನರು ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ. ಜನವರಿ 2022 ರಲ್ಲಿ, ಬಿಹಾರದ ಬಕ್ಸರ್, ಸರನ್ ಮತ್ತು ನಳಂದಾ ಜಿಲ್ಲೆಗಳಲ್ಲಿ ನಡೆದ ಘಟನೆಗಳಲ್ಲಿ 36 ಜನರು ಸಾವನ್ನಪ್ಪಿದರು. ಇದರಿಂದ ಬಿಹಾರದಲ್ಲಿ ಹೇರಿದ್ದ ನಿಷೇಧ ವಿಫಲವಾಗಿರುವುದು ಸಾಭೀತಾಗುತ್ತಿದ್ದರು ಸರ್ಕಾರ ಮಾತ್ರ ಈ ವಾಸ್ತವವನ್ನು ಒಪ್ಪಿಕೊಳ್ಳುತ್ತಿಲ್ಲ.

ಛಾಪ್ರಾ(ಬಿಹಾರ): ಬಿಹಾರದ ಛಪ್ರಾದಲ್ಲಿ ವಿಷಪೂರಿತ ಮದ್ಯ ಸೇವಿಸಿ 39ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ಇದೀಗ ಈ ಪ್ರಕರಣದಲ್ಲಿ ಎಸ್ಪಿ ಸಂತೋಷ್ ಕುಮಾರ್ ಮಹತ್ವದ ಕ್ರಮ ಕೈಗೊಂಡಿದ್ದಾರೆ.

ನಕಲಿ ಮದ್ಯ ಪ್ರಕರಣದಲ್ಲಿ ಮಶ್ರಕ್ ಪೊಲೀಸ್ ಠಾಣೆಯ ರಿತೇಶ್ ಮಿಶ್ರಾ, ಮತ್ತು ಕಾವಲುಗಾರ ವಿಕೇಶ್ ತಿವಾರಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಇದೇ ವೇಳೆ ಮಧುರಾ ಡಿಎಸ್‌ಪಿಯ ವರ್ಗಾವಣೆ ಹಾಗೂ ಇಲಾಖಾ ಕ್ರಮಕ್ಕೆ ಶಿಫಾರಸು ಕೂಡ ಮಾಡಲಾಗಿದೆ.

ಡಿಎಸ್ಪಿ ನೇತೃತ್ವದಲ್ಲಿ ತಂಡ ರಚನೆ: ಘಟನೆ ಬಳಿಕ ಛಾಪ್ರಾದಲ್ಲಿ ಅಕ್ರಮ ಮದ್ಯ ದಂಧೆಕೋರರನ್ನು ಬಂಧಿಸಲು ಎಸ್ಪಿ ಸಂತೋಷ್ ಕುಮಾರ್ ಮರಹೌರಾ ಡಿಎಸ್ಪಿ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ. ಇದಲ್ಲದೇ ಇನ್ನೂ ಎರಡು ತಂಡಗಳನ್ನು ರಚಿಸಲಾಗಿದ್ದು ಮಶ್ರಕ್ ಮತ್ತು ಇಸುಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನಿಖೆಯನ್ನು ಗಂಭಿರಗೊಳಿಸಲಾಗಿದೆ.

ಇದಕ್ಕೆ ಸಂಬಂಧಿಸಿ ವಿವಿಧ ಪ್ರದೇಶಗಳಲ್ಲಿ ಸುಮಾರು 83 ಜನರನ್ನು ಬಂಧಿಸಲಾಗಿದ್ದು, ಪೊಲೀಸರ ದಾಳಿ ಬಳಿಕ ಈ ದಂಧೆಯ ಉದ್ಯಮಿಗಳಲ್ಲಿ ಭಯ ಸಂಚಲನ ಮೂಡಿದೆ ಎಂದು ಕೆಲವು ಮೂಲಗಳಿಂದ ಮಾಹಿತಿ ಹೊರಬಂದಿದೆ.

ಎಸ್‌ಪಿಯ ಕಟ್ಟುನಿಟ್ಟಿನ ಆದೇಶ: ಮಾಂಝಿ, ಮಶ್ರಕ್, ಮೇಕರ್ ಮತ್ತು ರಸೂಲ್‌ಪುರ ಸಮೀಪದ ಅಂತಾರಾಜ್ಯ ಅಂತರ ಜಿಲ್ಲಾ ಚೆಕ್‌ಪೋಸ್ಟ್‌ನಲ್ಲಿ ಎಸ್‌ಡಿಒ ಮತ್ತು ಎಸ್‌ಡಿಪಿಒ, ಸದರ್ ಛಾಪ್ರಾ, ಮಧುರಾ ಮತ್ತು ಸೋನುಪರ್ ಜಂಟಿಯಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಎಸ್‌ಪಿ ಆದೇಶಿಸಿದ್ದಾರೆ. ಇದರೊಂದಿಗೆ ಗಡಿ ಪ್ರದೇಶಗಳು ಮತ್ತು ಇಸುಪುರ್, ಮಶ್ರಕ್, ಮಧುರಾ ಮತ್ತು ಅಮ್ನೌರ್ ಬ್ಲಾಕ್‌ಗಳ ಪೀಡಿತ ಪ್ರದೇಶಗಳಲ್ಲಿ ಮನೆ-ಮನೆ ಸಮೀಕ್ಷೆ ಮಾಡಿ ಮದ್ಯ ಸಾಗಾಟದಲ್ಲಿ ತೊಡಗಿದ್ದ ಹಲವರ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಪೊಲೀಸ್ ಹೆಡ್‌ಕ್ವಾರ್ಟರ್ಸ್ ಹೇಳುವುದೇನು: ಮತ್ತೊಂದೆಡೆ, ಬಿಹಾರ ಪೊಲೀಸ್ ಹೆಡ್‌ಕ್ವಾರ್ಟರ್ಸ್‌ನ ಎಡಿಜಿ ಜಿತೇಂದ್ರ ಸಿಂಗ್ ಗಂಗ್ವಾರ್ ಪ್ರಕಾರ, ಸರನ್ ಜಿಲ್ಲೆಯಲ್ಲಿ ಇದುವರೆಗೆ 6 ಸಾವುಗಳು ನಕಲಿ ಮದ್ಯದಿಂದ ದೃಢಪಟ್ಟಿದ್ದು, ಅಲ್ಲಿ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಕಲಿ ಮದ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಬಿಹಾರ್​ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಹಳ್ಳಿಗಳಲ್ಲಿ ಮೌನ ಶೋಕಾಚರಣೆ : ಛಾಪ್ರಾದಲ್ಲಿ ಕಳೆದ 24 ಗಂಟೆಗಳಲ್ಲಿ ವಿಷಪೂರಿತ ಮದ್ಯ ಸೇವಿಸಿ 39ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರೆ, ಅನೇಕ ಜನರು ಅಸ್ವಸ್ಥರಾಗಿದ್ದಾರೆ. ಹಲವಾರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಕೆಲವರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುತ್ತಿದ್ದು ಹಳ್ಳಿಗಳಲ್ಲಿ ಶೋಕ ಮೌನ ಆವರಿಸಿದೆ.

ರಾಜ್ಯ ಸರ್ಕಾರದ ಅಂಕಿ - ಅಂಶಗಳ ಪ್ರಕಾರ, ಬಿಹಾರದಲ್ಲಿ ಮದ್ಯ ನಿಷೇಧದ ನಂತರವು ಕಳೆದ ಒಂದು ವರ್ಷದಲ್ಲಿ ಸುಮಾರು 173 ಜನರು ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ. ಜನವರಿ 2022 ರಲ್ಲಿ, ಬಿಹಾರದ ಬಕ್ಸರ್, ಸರನ್ ಮತ್ತು ನಳಂದಾ ಜಿಲ್ಲೆಗಳಲ್ಲಿ ನಡೆದ ಘಟನೆಗಳಲ್ಲಿ 36 ಜನರು ಸಾವನ್ನಪ್ಪಿದ್ದರು. ಇದರಿಂದ ಬಿಹಾರದಲ್ಲಿ ಹೇರಿದ್ದ ನಿಷೇಧ ವಿಫಲವಾಗಿರುವುದು ಸಾಬೀತಾಗುತ್ತಿದ್ದರೂ ಸರ್ಕಾರ ಮಾತ್ರ ಈ ವಾಸ್ತವವನ್ನು ಒಪ್ಪಿಕೊಳ್ಳುತ್ತಿಲ್ಲ.

ಇದಕ್ಕೆಲ್ಲ ವಿಷಪೂರಿತ ಮದ್ಯ ಮಾರಾಟ ಮಾಡುತ್ತಿರುವ ಲಿಕ್ಕರ್ ಮಾಫಿಯಾವೋ ಅಥವಾ ಆಡಳಿತದ ಶಾಮೀಲಾಗಿ ಜಿಲ್ಲೆಗಳಲ್ಲಿ ಮದ್ಯ ಮಾರಾಟವಾಗುತ್ತಿದೆ ತನಿಖೆಯ ನಂತರ ಹೊರ ಬರಬೇಕಿದೆ. ಹೀಗಿರುವಾಗ ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ಇಲ್ಲಿವರೆಗೆ ಕಾವಲುಗಾರ ಅಥವಾ ಠಾಣಾಧಿಕಾರಿ ಮಾತ್ರ ಅಮಾನತುಗೊಂಡು ನಕಲಿ ಮದ್ಯದ ಸಾವಿಗೆ ಹೇಗೆ ಹೊಣೆಗಾರರಾಗುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ.

ಜೊತೆಗೆ ದೊಡ್ಡ ಮಟ್ಟದ ಮದ್ಯದ ದಂಧೆಕೋರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲದೆ ಇರುವುದು ಸರ್ಕಾರದ ನ್ಯಾಯಾಡಳಿತದ ಬಗ್ಗೆ ಪ್ರಶ್ನೆ ಮೂಡಿಸಿದೆ.

ಇದನ್ನೂ ಓದಿ: ಜಗತ್ತಿನ ತ್ಯಾಜ್ಯ ಸಂಗ್ರಹಣಾ ತಾಣಗಳ ಮಿಥೇನ್ ಹೊರಸೂಸುವಿಕೆ ಅಳೆಯಲಿವೆ ನಾಸಾ ಸೆನ್ಸರ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.