ಕರ್ನಾಟಕ

karnataka

ಶ್ರೀರಾಮ ಮಂದಿರ ನಿರ್ಮಿಸುವ ಶತಮಾನಗಳ ಕನಸು ನನಸಾಗಿದೆ: ರಾಷ್ಟ್ರಪತಿ ಮುರ್ಮು

By PTI

Published : Jan 31, 2024, 1:00 PM IST

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಶತಮಾನಗಳ ಕನಸು ನನಸಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

Centuries-old desire of Ram temple now a reality: President Murmu
Centuries-old desire of Ram temple now a reality: President Murmu

ನವದೆಹಲಿ:ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಶತಮಾನಗಳ ಆಸೆ ಈಡೇರಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಹೇಳಿದರು. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದ ಕೆಲಸಗಳನ್ನು ಅವರು ಶ್ಲಾಘಿಸಿದರು. ಹೊಸ ಸಂಸತ್ ಕಟ್ಟಡದಲ್ಲಿ ಪ್ರಥಮ ಬಾರಿಗೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಮುರ್ಮು, ಹಿಂದಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಾಗ ಮತ್ತು ಭವಿಷ್ಯ ನಿರ್ಮಾಣಕ್ಕೆ ಗರಿಷ್ಠ ಶಕ್ತಿಯಿಂದ ಶ್ರಮಿಸಿದರೆ ಮಾತ್ರ ದೇಶವು ವೇಗವಾಗಿ ಪ್ರಗತಿ ಸಾಧಿಸಬಹುದು ಎಂದು ಹೇಳಿದರು.

"ಕಳೆದ ಹತ್ತು ವರ್ಷಗಳಲ್ಲಿ ಜನತೆ ದಶಕಗಳಿಂದ ಕಾಯುತ್ತಿದ್ದ ಹಲವಾರು ಯೋಜನೆಗಳು ದೇಶದಲ್ಲಿ ಪೂರ್ಣಗೊಂಡಿವೆ. ರಾಮ ಮಂದಿರವನ್ನು ನಿರ್ಮಿಸುವ ಬಯಕೆ ಶತಮಾನಗಳಿಂದ ಇತ್ತು ಮತ್ತು ಇಂದು ಅದು ನನಸಾಗಿದೆ" ಎಂದು ಅವರು ನುಡಿದರು. ರಾಷ್ಟ್ರಪತಿಗಳ ಈ ಮಾತಿಗೆ ಆಡಳಿತ ಪಕ್ಷದ ಸಂಸದರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿನ 370 ನೇ ವಿಧಿಯನ್ನು ತೆಗೆದುಹಾಕುವ ಬಗ್ಗೆ ಹಲವಾರು ಸಂಶಯಗಳಿದ್ದವು, ಆದರೆ ಅವು ಈಗ ಇತಿಹಾಸವಾಗಿವೆ ಎಂದು ಅವರು ಹೇಳಿದರು.

ಭಾರತೀಯ ಆರ್ಥಿಕತೆಯು ದುರ್ಬಲ ಐದು ಆರ್ಥಿಕತೆಗಳಲ್ಲೊಂದಾಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಸರ್ಕಾರ ಕೈಗೊಂಡ ಹಲವಾರು ಸುಧಾರಣೆಗಳಿಂದಾಗಿ ಈಗ ಅದು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ವೇಗದಲ್ಲಿ ಚಲಿಸುತ್ತಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.

"ನೀತಿ ಆಯೋಗದ ಪ್ರಕಾರ ನನ್ನ ಸರ್ಕಾರದ 10 ವರ್ಷಗಳ ಆಡಳಿತದಲ್ಲಿ ಸುಮಾರು 25 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ. ಈ ಹಿಂದೆ ದೇಶದ ಹಣದುಬ್ಬರ ದರ ಎರಡಂಕಿಗಳಲ್ಲಿತ್ತು. ಅದು ಈಗ ಶೇಕಡಾ 4 ರೊಳಗೆ ಇದೆ ಎಂದು ಅವರು ತಿಳಿಸಿದರು. ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ್ದಕ್ಕಾಗಿ ಮುರ್ಮು ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದರು.

ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲು ಮುರ್ಮು ಸಂಸತ್ ಭವನಕ್ಕೆ ಆಗಮಿಸುವ ಸಂದರ್ಭದಲ್ಲಿ ಅವರಿಗಿಂತ ಮುಂದೆ ಸೆಂಗೋಲ್ (ರಾಜದಂಡ)ವನ್ನು ಹೊತ್ತು ನಡೆಯಲಾಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ನಿತಿನ್ ಗಡ್ಕರಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮುಂದಿನ ಸಾಲಿನಲ್ಲಿ ಕುಳಿತಿದ್ದರು.

ಇದನ್ನೂ ಓದಿ:ಜ್ಞಾನವಾಪಿ ಮಸೀದಿ: ಶಿವಲಿಂಗದ ASI ಸಮೀಕ್ಷೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ABOUT THE AUTHOR

...view details