ಕರ್ನಾಟಕ

karnataka

ಮಲ್ಪೆಯಲ್ಲಿ ಗಮನಸೆಳೆದ 'ವಿ ಆರ್​ ದಿ ಪವರ್' ಮರಳು ಕಲಾಕೃತಿ

By

Published : Mar 9, 2021, 3:55 PM IST

ಉಡುಪಿ: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಣಿಪಾಲ ತ್ರಿವರ್ಣ ಕಲಾ ಕೇಂದ್ರದ ಹಿರಿಯ ವಿಭಾಗದ ಮಹಿಳಾ ವಿದ್ಯಾರ್ಥಿ ಕಲಾವಿದರು ಮಲ್ಪೆ ಕಡಲ ತೀರದಲ್ಲಿ ಸುಮಾರು 20 ಅಡಿ ಅಗಲ ಮತ್ತು 3.5 ಅಡಿಯ ಮರಳು ಶಿಲ್ಪ ರಚಿಸಿದರು. ಮಹಿಳೆಯರಿಗೆ ಶಿಕ್ಷಣವೇ ಪ್ರಧಾನವೆಂಬಂತೆ, ಪುಸ್ತಕದಿಂದ ಎದ್ದು ಬಂದ ಮಹಿಳೆಯನ್ನು ಕೇಂದ್ರೀಕೃತವಾಗಿರಿಸಿ, ಸ್ವಾತಂತ್ರ್ಯದ ಅಭಿವ್ಯಕ್ತಿಯಲ್ಲಿ ಎರಡು ಕಡೆ ರೆಕ್ಕೆಗಳು, ಒಂದರಲ್ಲಿ ಮಹಿಳೆಯ ಪಾತ್ರ ಮತ್ತು ಇನ್ನೊಂದರಲ್ಲಿ ಅವಳು ವಿವಿಧ ಕೆಲಸಗಳನ್ನು ಸಮಾನವಾಗಿ ನಿಭಾಯಿಸಬಲ್ಲ ಶಕ್ತಿಯನ್ನು ತೋರಿಸುವ ಸಂದೇಶದಡಿ ಮರಳು ಶಿಲ್ಪ ರಚಿಸಲಾಗಿತ್ತು. ಕಲಾವಿದ ಹರೀಶ್ ಸಾಗ ಮಾರ್ಗದರ್ಶನದಲ್ಲಿ ಮರಳು ಶಿಲ್ಪ ಪಡಿಮೂಡಿದ್ದು, ಕಡಲ ಕಿನಾರೆಗೆ ಆಗಮಿಸಿದ ಪ್ರವಾಸಿಗರ ಗಮನ ಸೆಳೆಯಿತು.

ABOUT THE AUTHOR

...view details