ಕರ್ನಾಟಕ

karnataka

ಧಾರವಾಡದ ಐತಿಹಾಸಿಕ ನುಗ್ಗಿಕೇರಿ ದೇವಸ್ಥಾನಕ್ಕೆ ಬಿಎಸ್​ವೈ ಭೇಟಿ

By

Published : Apr 6, 2023, 10:08 PM IST

ನುಗ್ಗಿಕೇರಿ ಹನುಮಂತ ದರ್ಶನ ಪಡೆದುಕೊಂಡ ಬಿಎಸ್​ವೈ

ಧಾರವಾಡ :ಹನುಮ ಜಯಂತಿ ಪ್ರಯುಕ್ತ ಇಲ್ಲಿನ ಐತಿಹಾಸಿಕ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಇಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ ಹಾಗೂ ಹಲವು ಬಿಜೆಪಿ ಮುಖಂಡರು ಜೊತೆಗಿದ್ದರು.

ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್‌ವೈ, ಇವತ್ತು ಹನುಮ ಜಯಂತಿ. ನುಗ್ಗಿಕೇರಿ ಹನುಮಂತ ದರ್ಶನದ ಸೌಭಾಗ್ಯ ಲಭಿಸಿದೆ. ಇವತ್ತು ಶಿಕಾರಿಪುರದ ಹುಚ್ಚರಾಯ ಸ್ವಾಮಿ ಜಾತ್ರೆ ಇದೆ. ನಾನು ಅಲ್ಲಿ ಇರಬೇಕಿತ್ತು. ಅಲ್ಲಿನ ಹುಚ್ಚರಾಯನ ದರ್ಶನ ಬದಲಿಗೆ ಇಲ್ಲಿ ದರ್ಶನ ಮಾಡುವ ಸೌಭಾಗ್ಯ ಸಿಕ್ಕಿದೆ. ನಿಜಕ್ಕೂ ಜೀವನ ಸಾರ್ಥಕವಾಯ್ತು ಎಂದರು.

ಪ್ರಲ್ಹಾದ್ ಜೋಶಿ, ಇತರರು ಸೇರಿ ಕರೆದುಕೊಂಡು ಬಂದಿದ್ದರು. ಎಲ್ಲರಿಗೂ ಒಳ್ಳೆಯದಾಗಲಿ. ರಾಜ್ಯದಲ್ಲಿ ಸುಭಿಕ್ಷೆ ಇರಲಿ. ದೇವರ ಆಶೀರ್ವಾದದಿಂದ ಎಲ್ಲರೂ ನೆಮ್ಮದಿಯಿಂದ ಬದುಕಲಿ. ಅಭ್ಯರ್ಥಿ ಪಟ್ಟಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅದೆಲ್ಲ ಇಲ್ಲಿ ಬೇಡ ಎಂದು ಹೇಳಿದರು.

ಇದನ್ನೂ ಓದಿ:ಅಂಜನಾದ್ರಿಯಲ್ಲಿ ಹನುಮ ಜಯಂತಿ ಮಾಲವಿರಮಣ: ಒಂದು ಲಕ್ಷ ಭಕ್ತರ ಆಗಮನ

ABOUT THE AUTHOR

...view details